ನವದೆಹಲಿ: ತನ್ನ ಬಾಯ್ ಫ್ರೆಂಡ್ ಜೊತೆಗೆ ಚಿತ್ರ ಹಂಚಿಕೊಂಡಿದ್ದ ನಟಿ ರಿಚಾ ಚಡ್ಡಾಗೆ ಸಾಮಾಜಿಕ ಮಾಧ್ಯಮದಲ್ಲಿ ಅಸಹ್ಯಕರವಾಗಿ ಟ್ರೋಲ್ ಮಾಡಲಾಗಿದೆ.ಅವರ ಮದುವೆಯೂ ಆಮೀರ್ ಖಾನ್ ನಂತೆ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎಂದು ಅವರಿಗೆ ಟ್ರೋಲ್ ಮಾಡಲಾಗಿದೆ.ಇದಕ್ಕೆ ನಟಿ ರಿಚಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
'ಸರ್ವೇಶ್, ನನ್ನನ್ನು ಮರೆತುಬಿಡಿ, ಯಾರೂ ನಿಮ್ಮನ್ನು ಮದುವೆಯಾಗಲು ಇಷ್ಟವಿಲ್ಲವೆಂದು ತೋರುತ್ತದೆ. ಹುಡುಗಿ ನಿಮ್ಮ ವಿಷಯದಲ್ಲಿ ವರದಕ್ಷಿಣೆ ಕೇಳಿದ್ದಿರಬೇಕು.ನಿಮಗೆ ಬುದ್ಧಿವಂತಿಕೆಯಿಲ್ಲ ಅಥವಾ ಒಳ್ಳೆಯ ನೋಟವೂ ಇಲ್ಲ" ನಿಮ್ಮ ತಾಯಿ ಎಲ್ಪಿಜಿಯಿಂದ ಒಲೆಗೆ ಬದಲಾಗಿರಬೇಕು.ಈ ನಿರುದ್ಯೋಗಿ,ಕರುಣಾಜನಕ ವ್ಯಕ್ತಿ ಇಲ್ಲಿ ಮಾತ್ರ ಮಾತನಾಡಲು ಧೈರ್ಯ ಮಾಡಬಹುದು" ಎಂದು ರಿಚಾ ಚಡ್ಡಾ (Richa Chadha) ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಕುಟುಕಿದ್ದಾರೆ.
ಇದನ್ನೂ ಓದಿ: ಏಪ್ರಿಲ್ ನಲ್ಲಿ ಬಾಲಿವುಡ್ ನಟಿ ರಿಚಾ ಚಧಾ ಮದುವೆ ಈ ನಟನ ಜೊತೆ....!
सर्वेश,मेरी छोड़,तुझ भिखारी से स्वेच्छा से शादी नहीं की किसी ने तो बौरा रहा है?दहेज तो लड़की ने मांगा होगा तेरे case में?🤣न शक्ल,न अक्ल और गरीब?मम्मी LPG से चूल्हे पे आ गई होंगी?पायलागू आंटी🙏🏽ये क्या गू रूपी कुपूत दुनिया में ले आईं?ये बेरोज़गार दया-पात्र बस यहीं चौड़ा हो सकताहै https://t.co/FzbERQ6CYk
— TheRichaChadha (@RichaChadha) October 11, 2021
ರಿಚಾ ಮತ್ತು ಅವರ ಬಾಯ್ ಫ್ರೆಂಡ್ ಅಲಿ ಫಜಲ್ ಇಬ್ಬರೂ ಫಕ್ರಿ ಮತ್ತು ಫುಕ್ರಿ ರಿಟರ್ನ್ಸ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ.ಇಬ್ಬರೂ ತಮ್ಮ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪರಸ್ಪರ ಪ್ರೀತಿಪಾತ್ರರ ಚಿತ್ರಗಳನ್ನು ಹಂಚಿಕೊಳ್ಳುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ.
ರಿಚಾ ಚಡ್ಡಾ ನಟಿ ರೋನಿತ್ ರಾಯ್ ಜೊತೆಗಿನ ಥ್ರಿಲ್ಲರ್ ವೆಬ್ ಸರಣಿ 'ಕ್ಯಾಂಡಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.ಅವರು ಮುಂದೆ 'ಸಿಕ್ಸ್ ಸಸ್ಪೆಕ್ಟ್ಸ್'ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಇದು ಅದೇ ಹೆಸರಿನ ವಿಕಾಸ್ ಸ್ವರೂಪ್ ಅವರ 2008 ರ ಕಾದಂಬರಿಯನ್ನು ಆಧರಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.