No.1 Collection Movie :   ಸಾಕಷ್ಟು ಟೀಕೆಗಳು ಹಾಗೂ ಮೆಚ್ಚುಗೆಯನ್ನು ಕಂಡ ಆದಿಪುರುಷ್‌ ಸಖತ್‌ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿರುವುದೇ ಇದರ ಗಳಿಗೆ ಮೇಲೆ ತುಸು ಪರಿಣಾಮ ಬೀರಿದ್ದು. ಆದರೂ ಈ ಆದಿಪುರುಷ್‌ ಚಿತ್ರ ಸಮಾಧಾನಕರ ಕಲೆಕ್ಷನ್‌ ಮಾಡಿದೆ. ಹೌದು ಈ ಆದಿಪುರುಷ್‌ ಸಿನಿಮಾ ಮೊದಲ ದಿನ ವಿಶ್ವ ಬಾಕ್ಸಾಫೀಸ್‌ನಲ್ಲಿ 140 ಕೋಟಿ ಗಳಿಸಿದ್ದು, ಎರಡನೇ ದಿನ 100 ಕೋಟಿ ಕಲೆಕ್ಷನ್‌ ಮಾಡಿದೆ. 


COMMERCIAL BREAK
SCROLL TO CONTINUE READING

ಹೀಗೆ ಆದಿಪುರುಷ್‌ ಸಿನಿಮಾ ಟೀಕೆ ಹಾಗೂ ಮಿಶ್ರಪ್ರತಿಕ್ರಿಯೆಗಳ ನಡುವೆಯೂ ಎರಡುದಿನಗಳಲ್ಲಿ 240 ಕೋಟಿ ರೂ ಕಲೆಕ್ಷನ್‌ ಮಾಡಿದೆ. ಈ ಮೂಲಕ ದಾಖಲೆಯನ್ನು ಬರೆದಿದೆ. ಹೌದು ಪ್ರಭಾಸ್‌ ನಟನೆಯ ಬಾಹುಬಲಿ ದ ಬೆಗಿನಿಂಗ್‌, ಸಾಹೋ ಹಾಗೂ ಆದಿಪುರುಷ್‌ ಚಿತ್ರಗಳು 200 ಕೋಟಿಗಿಂತ ಹೆಚ್ಚು ಕಲೆಕ್ಷನ್‌ ಮಾಡಿವೆ.ಹೀಗೆ ಅತಿ ಹೆಚ್ಚು ಬಾರಿ 200 ಕೋಟಿ ಕಲೆಕ್ಷನ್‌ ಮಾಡಿರುವ ಸಿನಿಮಾ ಪಟ್ಟಿಗಳ ಲಿಸ್ಟ್‌ನಲ್ಲಿ ಪ್ರಭಾಸ್‌ ಮೂರನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ-Anand' Movie: ಶಿವಣ್ಣ& ಸುಧಾರಾಣಿ ನಟನೆಯ ʼಆನಂದ್‌ʼ ಚಿತ್ರಕ್ಕೆ 37 ವರ್ಷ ಸಂಭ್ರಮ; ಇಲ್ಲಿವೆ ಅಪರೂಪದ ಫೋಟೋಸ್ 


ಇನ್ನೂ ಈ 200 ಕೋಟಿ ಗಳಿಕೆ ಮಾಡಿ ಕ್ಲಬ್‌ ಸೇರಿದ ಸಿನಿಮಾಗಳ ಹಾಗೂ ನಟರ ಸಣ್ಣ ಮಾಹಿತಿ ಇಲ್ಲಿದೆ ನೋಡಿ..


ಧಳಪತಿ ವಿಜಯ್‌ : ಮೆರ್ಸೆಲ್‌, ಸರ್ಕಾರ್‌, ಬಿಗಿಲ್‌, ವಾರಿಸು, ಮಾಸ್ಟರ್‌ 
ರಜನಿಕಾಂತ್‌ : 2.0, ಕಬಾಲಿ, ಪೆಟ್ಟಾ ಎಂದಿರನ್‌
ಪ್ರಭಾಸ್‌ : ಬಾಹುಬಲಿ ದಿ ಬಿಗಿನಿಂಗ್‌, ಬಾಹುಬಲಿ ದಿ ಕನ್ಕ್ಲೂಷನ್‌, ಸಾಹೋ ಮತ್ತು ಆದಿಪುರುಷ್‌
ರಾಮ್‌ ಚರನ್‌ : ಆರ್‌ ಆರ್‌ ಆರ್‌, ರಂಗಸ್ಥಲಂ
ಅಲ್ಲು ಅರ್ಜುನ್‌ : ಅಲಾ ವೈಕುಂಠಪುರಂಲೋ ಹಾಗೂ ಪುಷ್ಪ ದ ರೈಸ್‌ 
ಚಿರಂಜೀವಿ : ಸೈರಾ, ವಾಲ್ತೇರು ವೀರಯ್ಯ 
ಅಜಿತ್‌ : ತುನಿವು, ವಿಶ್ವಾಸಂ
ಯಶ್‌ : ಕೆ.ಜಿ.ಎಫ್.‌ 1&2 
ಜೂನಿಯರ್‌ ಎನ್‌ಟಿಆರ್‌ : ಆರ್‌ ಆರ್‌ ಆರ್‌ 
ರಿಷಬ್‌ ಶೆಟ್ಟಿ : ಕಾಂತಾರ 


ಇದನ್ನೂ ಓದಿ- ಆಶಿಕಾ ರಂಗನಾಥ್‌ ಗಂಡ ಈ ನಟನ ಹಾಗೆ ಇರಬೇಕಂತೆ.. ಆದ್ರೆ ನಟಿ ಪ್ರಪೋಸ್‌ ಮಾಡೋದು ಬೇರೆಯವ್ರಿಗಂತೆ..


ಮೇಲೆ ನೀಡಿರುವ ಮಾಹಿತಿಯಂತೆ ತಮಿಳು ನಟ ಧಳಪತಿ ವಿಜಯ್‌ ನಟನೆಯ 6 ಸಿನಿಮಾಗಳು 200 ಕೋಟಿ ಕ್ಲಬ್‌ ಸೇರಿದ್ದು, ಅತಿ ಹೆಚ್ಚು 200 ಕೋಟಿ ಕ್ಲಬ್‌ ಸಿನಿಮಾಗಳನ್ನು ನೀಡಿದ ಸೌತ್‌ ನಟ ಎನಿಸಿಕೊಂಡಿದ್ದಾರೆ. ರಜನಿಕಾಂತ್‌ ಅವರು 2 ನೇ ಸ್ಥಾನದಲ್ಲಿದ್ದಾರೆ. ಕನ್ನಡದ ಪರವಾಗಿ ಯಶ್‌ ಹಾಗೂ ರಿಷಬ್‌ ಶೆಟ್ಟಿ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.