ಆಶಿಕಾ ರಂಗನಾಥ್‌ ಗಂಡ ಈ ನಟನ ಹಾಗೆ ಇರಬೇಕಂತೆ.. ಆದ್ರೆ ನಟಿ ಪ್ರಪೋಸ್‌ ಮಾಡೋದು ಬೇರೆಯವ್ರಿಗಂತೆ..

Ashika Ranganath : ನಟಿ ಆಶಿಕಾ ರಂಗನಾಥ್‌ ಇತ್ತೀಚೆಗೆ ನಡೆದ ಚಿತ್ತಾರ ಅವಾರ್ಡ್ಸ್‌ನಲ್ಲಿ ನಿಮ್ಮ ಬಾಯ್‌ ಫ್ರೆಂಡ್‌ ಹೇಗಿರಬೇಕು ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಸದ್ಯ ಈ ವಿಡಿಯೋ ಸಖತ್‌ ವೈರಲ್‌ ಆಗಿದೆ.  

Written by - Savita M B | Last Updated : Jun 19, 2023, 12:11 PM IST
  • ಆಶಿಕಾ ರಂಗನಾಥ್‌ ಚಿತ್ತಾರ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಯೂತ್‌ ಐಕಾನ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ
  • ಸದ್ಯ ಈ ಚಾನೆಲ್‌ ಕಾರ್ಯಕ್ರಮದ ಪ್ರೋಮೊಗಳನ್ನು ಹಂಚಿಕೊಡಿದೆ
  • ಆಶಿಕಾ ರಂಗನಾಥ್‌ ನೀಡಿರುವ ಹೇಳಿಕೆಯಂತೂ ಇನ್ನೂ ವೈರಲ್‌ ಆಗುತ್ತಿದೆ.
ಆಶಿಕಾ ರಂಗನಾಥ್‌ ಗಂಡ ಈ ನಟನ ಹಾಗೆ ಇರಬೇಕಂತೆ.. ಆದ್ರೆ ನಟಿ ಪ್ರಪೋಸ್‌ ಮಾಡೋದು ಬೇರೆಯವ್ರಿಗಂತೆ..  title=

Ashika Ranganath About her Boyfriend : ಆಶಿಕಾ ರಂಗನಾಥ್‌ 2016ರಲ್ಲಿ ತೆರೆಗೆ ಬಂದ ಕ್ರೇಜಿಬಾಯ್‌ ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು. ನಂತರ ಶಿವರಾಜ್‌ ಕುಮಾರ್‌ ನಟನೆಯ ಮಾಸ್‌ ಲೀಡರ್‌ ಚಿತ್ರದಲ್ಲಿ ನಟಿಸಿದ್ದರು. ಅಲ್ಲದೇ ಇವರು ಗೋಲ್ಡನ್‌ ಸ್ಟಾರ್‌ ನಟನೆಯ ಮುಗುಳುನಗೆ ಸಿನಿಮಾದಲ್ಲಿ ನಾಯಕಿಯಾಗಿ ಅಭಿಮಾನಿಗಳ ಮನ ಗೆದಿದ್ದರು. 

ಇನ್ನು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ ಆಶಿಕಾ ರಂಗನಾಥ್‌ ಸದ್ಯಕ್ಕೆ ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಹೀಗೆ ಬಣ್ಣದ ಲೋಕದಲ್ಲಿ ಸದ್ದು ಮಾಡುತ್ತಿರುವ ಆಶಿಕಾ ರಂಗನಾಥ್‌ ಇತ್ತೀಚೆಗೆ ನಡೆದ ಚಿತ್ತಾರ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಯೂತ್‌ ಐಕಾನ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಸದ್ಯ ಈ ಚಾನೆಲ್‌ ಕಾರ್ಯಕ್ರಮದ ಪ್ರೋಮೋಗಳನ್ನು ಹಂಚಿಕೊಡಿದೆ.

ಇದನ್ನೂ ಓದಿ-ತೆಲುಗಿನ ಖ್ಯಾತ ಕೊರಿಯೋಗ್ರಾಫರ್‌, ಟ್ರೋಲಿಗರ ಫೇವರೆಟ್‌ ರಾಕೇಶ್‌ ಮಾಸ್ಟರ್‌ ಇನ್ನಿಲ್ಲ..!

ಹೀಗೆ ಹಂಚಿಕೊಂಡ ಪ್ರೋಮೊದಲ್ಲಿ ಆಶಿಕಾ ರಂಗನಾಥ್‌ ಅವಾರ್ಡ್‌ ತೆಗೆದುಕೊಂಡಿರುವ ದೃಶ್ಯವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಜೊತೆಗೆ ಆಶಿಕಾ ರಂಗನಾಥ್‌ ನೀಡಿರುವ ಹೇಳಿಕೆಯಂತೂ ಇನ್ನೂ ವೈರಲ್‌ ಆಗುತ್ತಿದೆ. 

ಈ ಕಾರ್ಯಕ್ರಮದ ನಿರೂಪಣೆಯನ್ನು ನಿರಂಜನ್‌ ಸೇಶಪಾಂಡೆ ಮಾಡಿದ್ದು, ಆಶಿಕಾ ರಂಗನಾಥ್‌ಗೆ ನಿಮ್ಮ ಬಾಯ್‌ಫ್ರೆಂಡ್‌ ಹಾಗೂ ಗಂಡ ಹೇಗಿರಬೇಕು ಎಂದು ಒಂದೆರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ನಟಿ ಆಶಿಕಾ ರಂಗನಾಥ್‌ ಈ ರೀತಿ ಉತ್ತರಿದ್ದಾರೆ. " ತುಂಬಾ ಅರ್ಥ ಮಾಡಿಕೊಳ್ಳುವ ಬಾಯ್‌ಫ್ರೆಂಡ್‌ ಇರಬೇಕು. ಪ್ರೀತಿ ತೋರಿಸಬೇಕು" ಎಂದು ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ-Anand' Movie: ಶಿವಣ್ಣ& ಸುಧಾರಾಣಿ ನಟನೆಯ ʼಆನಂದ್‌ʼ ಚಿತ್ರಕ್ಕೆ 37 ವರ್ಷ ಸಂಭ್ರಮ; ಇಲ್ಲಿವೆ ಅಪರೂಪದ ಫೋಟೋಸ್

ಜೊತೆಗೆ ನಿರೂಪಕ ನಿರಂಜನ್‌ ಅವರು ಕನ್ನಡದ ನಟರಾದ ದೃವಸರ್ಜಾಮ, ಡಾಲಿ ಧನಂಜಯ್‌, ಅಭಿಷೇಕ್‌ ಅಂಬರೀಶ್‌ ದರ್ಶನ್‌ ಹಾಗೂ ಯಶ್‌, ಶ್ರೀಮುರಳಿ, ಶರಣ್‌ ಹಾಗೂ ಸುದೀಪ್‌ ಅವರ ಪೋಟೋಗಳನ್ನು ತೋರಿಸಿ ಇವರಲ್ಲಿ ʼಹಸ್ಬೆಂಡ್‌ ಮೆಟೀರಿಯಲ್‌ʼ ಯಾರು ಎಂದು ಕೇಳುತ್ತಾರೆ.ಈ ಪ್ರಶ್ನೆಗೆ ಉತ್ತರಿಸಿದ ಆಶಿಕಾ ರಂಗನಾಥ್‌ ಅವರು "ಯಶ್‌ ಸರ್‌ ಥರ ಗಂಡ ಇರಬೇಕು ಅನಿಸುತ್ತೆ" ಎಂದು ಉತ್ತರಿಸಿದರು. ಬಳಿಕ ಇವರಲ್ಲಿ ನೀವು ಯಾರಿಗೆ ಪ್ರಪೋಸ್‌ ಮಾಡಲು ಇಷ್ಟ ಪಡುತ್ತೀರಿ ಎಂದು ಕೇಳಿದಾಗ ದೃವ ಸರ್ಜಾ ಅವರ ಹೆಸರನ್ನು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News