ನವದೆಹಲಿ: ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ (Netflix) ಮುಂದಿನ ತಿಂಗಳು 5 ಮತ್ತು 6 ನೇ ತಾರೀಖಿಗೆ ಗ್ರಾಹಕರನ್ನು ಸೆಳೆಯಲು ಫೆಸ್ಟ್ ಆಯೋಜಿಸಿದೆ. ಈ ಉತ್ಸವದಲ್ಲಿ, ಯಾವುದೇ ಪ್ರೇಕ್ಷಕ ಎರಡು ದಿನಗಳವರೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಏನು ಬೇಕಾದರೂ ಉಚಿತವಾಗಿ ವೀಕ್ಷಿಸಬಹುದು. ಅಂದರೆ, ಪ್ರೇಕ್ಷಕರು ಎರಡು ದಿನಗಳವರೆಗೆ ಚಂದಾದಾರರಾಗದೆ ಈ ಒಟಿಟಿ ಪ್ಲಾಟ್‌ಫಾರ್ಮ್‌ನ ಲಾಭವನ್ನು ಪಡೆಯಬಹುದು.


COMMERCIAL BREAK
SCROLL TO CONTINUE READING

ಇದನ್ನು ಓದಿ- ಇನ್ಮುಂದೆ Netflix,Hotstar ಹಾಗೂ ಇತರೆ OTT ಕಂಟೆಂಟ್ ಗಳ ಮೇಲೆ ಕೇಂದ್ರ ಸರ್ಕಾರದ ನಿಗಾ


ಡಿಸೆಂಬರ್ 5-6 ರಂದು ಭಾರತದಲ್ಲಿ 'ಸ್ಟ್ರೀಮ್‌ಫೆಸ್ಟ್' ಆಯೋಜಿಸುವುದಾಗಿ ನೆಟ್‌ಫ್ಲಿಕ್ಸ್ ಇಂಡಿಯಾ ಶುಕ್ರವಾರ ತಿಳಿಸಿದ್ದು, ಇದರ ಅಡಿಯಲ್ಲಿ ನೆಟ್‌ಫ್ಲಿಕ್ಸ್‌ನ ಚಂದಾದಾರರಲ್ಲದ ಜನರು ಸಹ ಅದರ ಸೇವೆಗಳನ್ನು ಉಚಿತವಾಗಿ ಅನುಭವಿಸಲು ಸಾಧ್ಯವಾಗಲಿದೆ. ಈ ನೆಟ್‌ಫ್ಲಿಕ್ಸ್ ಉಪಕ್ರಮದ ಉದ್ದೇಶ ಹೊಸ ಚಂದಾದಾರರನ್ನು ಸೇರಿಸುವುದು. ವಿಶೇಷವೆಂದರೆ, ಅವರು ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಹಾಟ್‌ಸ್ಟಾರ್ ಮತ್ತು ಜಿ 5 ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳೊಂದಿಗೆ ಭಾರತದಲ್ಲಿ ಸ್ಪರ್ಧಿಸಬೇಕಾಗಿದೆ.


ಇದನ್ನು ಓದಿ- Netflix-ಅಮೆಜಾನ್ ಪ್ರೈಮ್ನಲ್ಲಿ ಮೂವೀಸ್, ವೆಬ್ ಸರಣಿಗಳನ್ನು ಉಚಿತವಾಗಿ ವೀಕ್ಷಿಸಿ


ಯಾವುದೇ ಚಿತ್ರ, ಸಿರೀಸ್ ಹಾಗೂ ಡಾಕ್ಯುಮೆಂಟ್ರಿ ನೋಡಬಹುದಾಗಿದೆ
ಈ ಕುರಿತು ಮಾತನಾಡಿರುವ ನೆಟ್‌ಫ್ಲಿಕ್ಸ್ ಇಂಡಿಯಾದ ಉಪಾಧ್ಯಕ್ಷೆ (ಕಂಟೆಂಟ್) ಮೋನಿಕಾ ಶೆರ್ಗಿಲ್, "ನೆಟ್‌ಫ್ಲಿಕ್ಸ್ ಮೂಲಕ ನಾವು ವಿಶ್ವಾದ್ಯಂತ ಇರುವ ಅತ್ಯಂತ ವಿಶಿಷ್ಟವಾದ ಕಥೆಗಳನ್ನು ಭಾರತದ ಮನರಂಜನಾ ಪ್ರಿಯರಿಗೆ ತರಲು ಬಯಸುತ್ತೇವೆ. ಅದಕ್ಕಾಗಿಯೇ ನಾವು 'ಸ್ಟ್ರೀಮ್‌ಫೆಸ್ಟ್' ಅನ್ನು ಆಯೋಜಿಸುತ್ತಿದ್ದೇವೆ. 5 ಡಿಸೆಂಬರ್ ನೆಟ್ಫ್ಲಿಕ್ಸ್ ಮಧ್ಯಾಹ್ನ 12 ರಿಂದ ಡಿಸೆಂಬರ್ 6 ರವರೆಗೆ 12 ಗಂಟೆಗೆ ಉಚಿತವಾಗಿದೆ. ಭಾರತದಲ್ಲಿ ಯಾರು ಬೇಕಾದರೂ ಎಲ್ಲಾ ಬ್ಲಾಕ್ಬಸ್ಟರ್ ಚಲನಚಿತ್ರಗಳು, ದೊಡ್ಡ ಸರಣಿಗಳು, ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ಮತ್ತು ಮನರಂಜನಾ ರಿಯಾಲಿಟಿ ಶೋ ಅನ್ನು ಎರಡು ದಿನಗಳವರೆಗೆ ವೀಕ್ಷಿಸಬಹುದು" ಎಂದು ಹೇಳಿದ್ದಾರೆ. 


ಇದನ್ನು ಓದಿ- ಇದೀಗ Netflix ಸಹಾಯ ಇಲ್ಲದೆ ಉಚಿತವಾಗಿ ವೀಕ್ಷಿಸಿ HD Quality Movies


ಇಲ್ಲಿದೆ ನೆಟ್ ಫ್ಲಿಕ್ಸ್ ಇಂಡಿಯಾ ಇನ್ಸ್ಟಾಗ್ರಾಮ್ ಪೋಸ್ಟ್


YouTube ವರ್ಷದ ಗಳಿಕೆ ತಿಳಿದರೆ ನೀವೂ ದಿಗ್ಭ್ರಮೆಗೊಳ್ಳುವಿರಿ!


ಯಾವುದೇ ರೀತಿಯ ಚಂದಾ ನೀಡದೆ ಸ್ಟ್ರೀಮ್ ಮಾಡಿ
ನೆಟ್‌ಫ್ಲಿಕ್ಸ್‌ನ ಚಂದಾದಾರರಲ್ಲದವರು ತಮ್ಮ ಹೆಸರು, ಇಮೇಲ್ ಅಥವಾ ಫೋನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಸೈನ್ ಅಪ್ ಮಾಡಬಹುದು ಮತ್ತು ಯಾವುದೇ ಮೊತ್ತವನ್ನು ಪಾವತಿಸದೆ ಸ್ಟ್ರೀಮಿಂಗ್ ಪ್ರಾರಂಭಿಸಬಹುದು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಒಂದು ವೇಳೆ ನಿಮ್ಮ ಇ-ಮೇಲ್ ಐಡಿ ಈಗಾಗಲೇ ನೆಟ್‌ಫ್ಲಿಕ್ಸ್‌ನ ಸದಸ್ಯತ್ವವನ್ನು ಹೊಂದಿದ್ದರೆ, ನಿಮ್ಮ ಚಂದಾದಾರಿಕೆಯನ್ನು ನೀವು ನಿಲ್ಲಿಸಿದ ಸ್ಥಳದಿಂದಲೇ ನೀವು ಸ್ಟ್ರೀಮ್ ಮಾಡಬಹುದಾಗಿದೆ .