ಇದೀಗ Netflix ಸಹಾಯ ಇಲ್ಲದೆ ಉಚಿತವಾಗಿ ವೀಕ್ಷಿಸಿ HD Quality Movies

ಚಲನಚಿತ್ರ ವೀಕ್ಷಿಸುವ ಅಭಿರುಚಿ ಹೊಂದಿದವರಿಗೊಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಹೌದು, ಹಣ ಖರ್ಚು ಮಾಡಿ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ Netflix ಬಳಸುವ ಬದಲು, ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ಉಚಿತವಾಗಿ HD ಕ್ವಾಲಿಟಿಯಲ್ಲಿ ಚಿತ್ರಗಳನ್ನು ವೀಕ್ಷಿಸಲು ಅವಕಾಶ ದೊರತೆರೆ ಹೇಗೆ..?

Last Updated : Apr 27, 2020, 06:26 PM IST
ಇದೀಗ Netflix ಸಹಾಯ ಇಲ್ಲದೆ ಉಚಿತವಾಗಿ ವೀಕ್ಷಿಸಿ HD Quality Movies title=

ನವದೆಹಲಿ: ಚಲನಚಿತ್ರಗಳ ಅಭಿರುಚಿ ಹೊಂದಿದವರಿಗೊಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ನೀವು Netflix ಬಳಸಿ ಹಣ ವ್ಯಯಿಸಿ ಚಲನಚಿತ್ರಗಳನ್ನು ವೀಕ್ಷಿಸುವ ಹಾಗೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ಒಂದು ವೇಳೆ ನಿಮಗೆ ಹಣ ವೆಚ್ಚ ಮಾಡದೆ ಚಲನಚಿತ್ರ ವೀಕ್ಷಿಸುವ ಅವಕಾಶ ದೊರೆತರೆ ಹೇಗಿರಲಿದೆ..?

ಇದಕ್ಕಾಗಿ ನಿಮಗೆ ಹೆಚ್ಚಿನ ಶ್ರಮಪಡಬೇಕಾಗುವ ಅಗತ್ಯತೆ ಇಲ್ಲ. ಕೆಲ ಆಪ್ಸ್ ಗಳನ್ನೂ ನೀವು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡುವ ಮೂಲಕ Netflix ರೀತಿಯೇ ಹೈಡೆಫಿನೆಶನ್ ಹಾಲಿವುಡ್ ಮೂವೀಸ್ ಗಳನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ವೀಕ್ಷಿಸಬಹುದಾಗಿದೆ ಅದೂ ಕೂಡ ಉಚಿತವಾಗಿ.

ಪಾಪ್ ಕಾರ್ನ್ ಫ್ಲಿಕ್ಷ್ (popcornflix)
ಉಚಿತವಾಗಿ ಚಲನಚಿತ್ರಗಳನ್ನು ನೋಡಲು ಇದೊಂದು ಉತ್ತಮ ಆಪ್ ಆಗಿದೆ. ಈ ಪ್ಲಾಟ್ಫಾರ್ಮ್ ನಲ್ಲಿ ಉತ್ತಮ ಚಿತ್ರಗಳ ಜೊತೆಗೆ ವೆಬ್ ಸಿರೀಜ್ ಹಾಗೂ ಟಿವಿ ಸೀರಿಜ್ ಆನಂದವನ್ನು ಸಹ ನೀವು ಪಡೆಯಬಹುದು. ಇದರಲ್ಲಿ ಉಚಿತವಾಗಿ ನೀವು 700 ಕ್ಕೂ ಅಧಿಕ ಚಿತ್ರಗಳನ್ನು ನೋಡಬಹುದು. ಈ ಪ್ಲಾಟ್ಫಾರ್ಮ್ ನಲ್ಲಿ ಎಕ್ಸ್ಕ್ಲೂಸಿವ್ ಕಂಟೆಂಟ್ ಕೂಡ ಇರಲಿದ್ದು, ಇದಕ್ಕೆ ಪಾಪ್ ಕಾರ್ನ್ ಫ್ಲಿಕ್ಷ್ ಒರಿಜಿನಲ್ಸ್ ಎಂಬ ಹೆಸರು ನೀಡಲಾಗಿದೆ. ಇದರಲ್ಲಿನ ಚಿತ್ರಗಳ ಗುಣಮಟ್ಟ ತುಂಬಾ ಉತ್ತಮವಾಗಿದೆ ಹಾಗೂ ಸ್ಟ್ರೀಮಿಂಗ್ ವೇಳೆ ಯಾವುದೇ ಅಡಚಣೆ ಎದುರಾಗುವುದಿಲ್ಲ.

ಲಾಕ್ ಡೌನ್ ಅವಧಿಯಲ್ಲಿ ಕಾಮಿಡಿ, ರೋಮಾನ್ಸ್, ಕೌಟುಂಬಿಕ, ಮಕ್ಕಳ, ಡ್ರಾಮಾ, ಆಕ್ಷನ್, ಥ್ರಿಲ್ಲರ್, ಹಾರರ್, ಬಾಲಿವುಡ್ ಗೆ ಸಂಬಂಧಿಸಿದ ಚಿತ್ರಗಳಿಗಾಗಿ ನೀವು ಇದನ್ನು ಡೌನ್ಲೋಡ್ ಮಾಡಬಹುದಾಗಿದೆ. ಈ ಪ್ಲಾಟ್ಫಾರ್ಮ್ ಉಚಿತ ಹಾಗೂ ಚಂದದಾರಿಕೆ ಎಂಬ ಎರಡೂ ಆಪ್ಶನ್ ಗಳಲ್ಲಿ ಲಭ್ಯವಿದೆ. ಅಂಡ್ರಾಯಿಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಬಳಕೆದಾರರು ಆಪಲ್ ಸ್ಟೋರ್ ನಿಂದ ಇದನ್ನು ಡೌನ್ಲೋಡ್ ಮಾಡಬಹುದಾಗಿದೆ.

ಟೂಬಿ ಟಿವಿ(tubi tv)
ಉಚಿತವಾಗಿ ಚಲನಚಿತ್ರಗಳನ್ನು ವೀಕ್ಷಿಸಲು ನೀವು ಈ ಆಪ್ ಡೌನ್ಲೋಡ್ ಮಾಡಬಹುದಾಗಿದೆ. ಇದರ ವಿಶೇಷತೆ ಎಂದರ popcornflix ರೀತಿಯಲ್ಲಿಯೇ ಇದರಲ್ಲಿಯೂ ಕೂಡ ಎಲ್ಲ ಜಾನರ್ ಗಳ ಚಿತ್ರಗಳನ್ನು ಹೈ ಡೆಫಿನೆಶನ್ ಕ್ವಾಲಿಟಿಯಲ್ಲಿ ನೋಡಬಹುದಾಗಿದ್ದು, ಇದರಲ್ಲಿ ಸಬ್ ಟೈಟಲ್ ಗಳನ್ನೂ ಸಹ ನೀಡಲಾಗುತ್ತದೆ. ಅಂದರೆ ಒಂದು ವೇಳೆ ನಿಮಗೆ ವಿದೇಶಿ ಭಾಷೆ ಅರ್ಥವಾಗುವುದಿಲ್ಲ ಎಂದರೆ ನೀವು ಇಲ್ಲಿ ನೀಡಲಾಗುವ ಸಬ್ ಟೈಟಲ್ ಬಳಸಿ ಚಿತ್ರದ ಕಥೆಯನ್ನು ಅರ್ಥ ಮಾಡಿಕೊಳ್ಳಬಹುದು.

ವಿಯೂಡಿಯೂ(VuDu)
ಹೈ ಕ್ವಾಲಿಟಿ ಚಲನಚಿತ್ರಗಳನ್ನು ನೋಡಲು ಈ ಪ್ಲಾಟ್ ಫಾರ್ಮ್ ಅನ್ನೂ ಕೂಡ ನೀವು ಟ್ರೈ ಮಾಡಬಹುದು. ಇದರಲ್ಲಿಯೂ ಕೂಡ ನೀವು ಉಚಿತ ಚಿತ್ರಗಳನ್ನು ವೀಕ್ಷಿಸಬಹುದು. ಉಚಿತ ಮೂವಿಗಳನ್ನು ನೀಡುವ ಆಪ್ ಗಳ ಕುರಿತು ಹೇಳುವುದಾದರೆ, ಈ ಆಪ್ ಗಳಲ್ಲಿ ನಿಮಗೆ ಉತ್ತಮ ವರೈಟಿ ಸಿಗಲಿದೆ. ಆದರೆ, ಈ ಆಪ್ ಗಳಲ್ಲಿ ಚಿತ್ರಗಳ ಜೊತೆಗೆ ಜಾಹಿರಾತುಗಳು ಕೂಡ ಬಿತ್ತರಗೊಳ್ಳುತ್ತವೆ. ಈ ಆಪ್ ಗಳ ವೈಶಿಷ್ಟ್ಯ ಎಂದರೆ ಇವುಗಳಲ್ಲಿ ನೀಡಲಾಗಿರುವ ಚಲನಚಿತ್ರಗಳ ಪಟ್ಟಿಯನ್ನು ನಿರಂತರವಾಗಿ ಅಪ್ಡೇಟ್ ಮಾಡಲಾಗುತ್ತದೆ. ಹೀಗಾಗಿ ನಿಮಗೆ ಹೊಸ ಹೊಸ ಚಿತ್ರಗಳು ವೀಕ್ಷಿಸುವ ಅವಕಾಶ ಇಲ್ಲಿ ಸಿಗಲಿದೆ.

Trending News