ನವದೆಹಲಿ : ಕನ್ನಡದ ಪ್ರಸಿದ್ಧ ಕಿರುತೆರೆ ನಟಿ ಸೌಜನ್ಯಾ ಆತ್ಮಹತ್ಯೆ (Soujanya suicide case) ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಸೌಜನ್ಯ ತಂದೆ  ಸಹ ನಟ ವಿವೇಕ್ (Vivek) ಮತ್ತು ಸಹಾಯಕ ಮಹೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಕುಂಬಳಗೋಡು ಪೊಲೀಸರು, ಕಿರುತೆರೆ ನಟರಾದ ನಟರಾದ ವಿವೇಕ್ ಮತ್ತು ಮಹೇಶ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.   ಸೌಜನ್ಯ ತಂದೆ ಪ್ರಭು ಮಾದಪ್ಪ ಹೇಳಿಕೆ ಪ್ರಕಾರ, ವಿವೇಕ್ ತನ್ನ ಮಗಳನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು  ಶಂಕಿಸಲಾಗಿದೆ.


COMMERCIAL BREAK
SCROLL TO CONTINUE READING

 ನಟನ ವಿರುದ್ಧ ಗಂಭೀರ ಆರೋಪ ಮಾಡಿದ ತಂದೆ :
ನನ್ನ ಮಗಳು ಚೆನ್ನಾಗಿದ್ದಳು, ನಾನು ಇತ್ತೀಚೆಗೆ ಅವಳಿಗೆ ಹಣ ನೀಡಿದ್ದೆ. ಆಕೆಯ ಚಿನ್ನದ ಆಭರಣ ಕೂಡ ಕಾಣೆಯಾಗಿದೆ ಎಂದು ಸೌಜನ್ಯ ತಂದೆ ಪ್ರಭು ಮಾದಪ್ಪ (Prabhu Maadappa) ಆರೋಪಿಸಿದ್ದಾರೆ. ಅಲ್ಲದೆ, ಪೊಲೀಸರು ಬರುವವರೆಗೂ ಕಾಯದೆ, ತನ್ನ ಮಗಳ ದೇಹವನ್ನು ಆಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಿಂದ ಹೊರತೆಗೆಯಲಾಗಿದೆ. ಸೌಜನ್ಯಾ (Soujanya suicide) ಮೊಬೈಲ್ ಕಾಣೆಯಾಗಿದೆ. ಅದು ಸಿಕ್ಕಿದ ನಂತರ ಎಲ್ಲಾ ಸತ್ಯ ತಿಳಿಯಲಿದೆ ಎಂದಿದ್ದಾರೆ.  ಈ ನಡುವೆ,  ಕುಂಬಳಗೋಡು ಪೋಲಿಸರು, ಹೆತ್ತವರ ಸಮ್ಮುಖದಲ್ಲಿ ಅಪಾರ್ಟ್ಮೆಂಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರವೇ, ಸೌಜನ್ಯ ದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.


ಇದನ್ನೂ ಓದಿ : Amitabh Bachchan: ಗಾಯದ ನಡುವೆಯೂ KBC ಶೋ ನಲ್ಲಿ ಭಾಗವಹಿಸಿದ ಅಮಿತಾಬ್ ಬಚ್ಚನ್


ಮರಣೋತ್ತರ ಪರೀಕ್ಷೆಯ ನಿರೀಕ್ಷೆಯಲ್ಲಿ ವಿವೇಕ್ : 
ಆರೋಪಗಳಿಗೆ ಪ್ರತಿಕ್ರಿಯಿಸಿದ ನಟ ವಿವೇಕ್, ತಮ್ಮ ವಿರುದ್ಧದ ಆರೋಪಗಳಿಗೆ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.  ಈಗ ಏನನ್ನೂ ಹೇಳುವುದಿಲ್ಲ ಎಂದಿದ್ದಾರೆ. ನನಗೆ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಸೌಜನ್ಯ ಪರಿಚಯ. ಸೌಜನ್ಯ ಅಸಮಾಧಾನಗೊಂಡಾಗಲೆಲ್ಲಾ, ನನ್ನನ್ನು ಭೇಟಿಯಾಗುತ್ತಿದ್ದಳು ಎಂದು ಹೇಳಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು,  ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ (Police) ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ.


ಸೌಜನ್ಯಾ ಆತ್ಮಹತ್ಯೆ ಪತ್ರ :
ಬೆಂಗಳೂರು ಹೊರವಲಯದ ದೊಡ್ಡಬೆಲೆ ಗ್ರಾಮದ ಸಮೀಪದ ಅಪಾರ್ಟ್ಮೆಂಟಿನಲ್ಲಿ  ಗುರುವಾರ ಸೌಜನ್ಯಾ ಮೃತದೇಹ  ಪತ್ತೆಯಾಗಿಟ್ಟು. ಅಲ್ಲದೆ, ಸ್ಥಳದಲ್ಲಿ ಡೆಟ್ ನೋಟ್ (Death note) ಕೂಡಾ ಸಿಕ್ಕಿತ್ತು. ತನ್ನ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ ಮತ್ತು ಅದನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಡೆಟ್ ನೋಟಿನಲ್ಲಿ ಬರೆಯಲಾಗಿತ್ತು. ಆದರೆ, ಆತ್ಮಹತ್ಯೆಯ ಹಿಂದಿನ ನಿಖರವಾದ ಕಾರಣದ ಬಗ್ಗೆ ಪೊಲೀಸರು ಇನ್ನೂ ಏನನ್ನೂ ಬಹಿರಂಗಪಡಿಸಿಲ್ಲ. 


ಇದನ್ನೂ ಓದಿ : Urmila Matondkar : ರಾಜಕೀಯ ಬಿಟ್ಟು 'ಕಾಮಿಡಿ ಶೋ'ಗೆ ಎಂಟ್ರಿ ನೀಡಿದ್ರಾ ನಟಿ ಊರ್ಮಿಳಾ ಮಾತೋಂಡ್ಕರ್ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.