Sonu Nigam: `ಅವರು ಹಿಂದಿಯಲ್ಲಿ ಏಕೆ ಮಾತನಾಡಬೇಕು?`: ಗಾಯಕ ಸೋನು ನಿಗಮ್
Hindi language row: ಕನ್ನಡ ನಟ ಕಿಚ್ಚ ಸುದೀಪ್ ಅವರ ಕಾಮೆಂಟ್ಗೆ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಅವರ ಪ್ರತಿಕ್ರಿಯೆಯೊಂದಿಗೆ ಇದು ಪ್ರಾರಂಭವಾಯಿತು.
ಹಿಂದಿ ರಾಷ್ಟ್ರ ಭಾಷೆ ಎಂದು ನಟ ಅಜಯ್ ದೇವಗನ್ ನೀಡಿರುವ ಹೇಳಿಕೆ, ಅದಕ್ಕೆ ನಟ ಸುದೀಪ್ ಕೊಟ್ಟ ಉತ್ತರ ಇತ್ತೀಚೆಗೆ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಗಾಯಕ ಸೋನು ನಿಗಮ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. "ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿ ಉಲ್ಲೇಖಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಹೆಚ್ಚು ಜನ ಮಾತನಾಡುವ ಭಾಷೆ ಅದಾಗಿರಬಹುದು. ಆದರೆ, ರಾಷ್ಟ್ರ ಭಾಷೆಯಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟನಿಗೆ "ಗೆಟ್ ಔಟ್ ಆಫ್ ಮೈ ಸ್ಟುಡಿಯೋ" ಎಂದ ನಿರೂಪಕಿ: ವಿಡಿಯೋ ವೈರಲ್
"ತಮಿಳು ವಿಶ್ವದ ಅತಿ ಹಳೆಯ ಭಾಷೆ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹಳೆಯ ಭಾಷೆ ಯಾವುದು ಎಂಬ ವಿಚಾರದಲ್ಲಿ ಕೆಲವರು ಸಂಸ್ಕೃತ ಎಂದರೆ, ಇನ್ನು ಕೆಲವರು ತಮಿಳು ಎನ್ನುತ್ತಾರೆ. ಚರ್ಚೆ ಮಾಡಬೇಕಾದ ಅನೇಕ ವಿಷಯಗಳಿವೆ. ಬೇರೆ ದೇಶಗಳಿಂದಲೇ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.
ಇವು ಸುವರ್ಣ ವಾಹಿನಿಯ ಸೂಪರ್ ಡೂಪರ್ ಧಾರಾವಾಹಿಗಳು
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.