ಹೈದರಾಬಾದ್: ತೆಲುಗಿನ ಖಾಸಗಿ ಸುದ್ದಿ ವಾಹಿನಿಯ ನಿರೂಪಕಿ ದೇವಿ ನಾಗವಲ್ಲಿ ಮತ್ತು ಯುವ ನಟ ವಿಶ್ವಕ್ ಸೇನ್ ನಡುವೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಾಗ್ವಾದ ನಡೆದಿದೆ. ಈ ವೇಳೆ ಸೇನ್ ಅವರಿಗೆ ‘ಗೆಟ್ ಔಟ್ ಆಫ್ ಮೈ ಸ್ಟುಡಿಯೋ‘ ಎಂದು ಆಂಕರ್ ಹೇಳಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದನ್ನು ಓದಿ: ಜೂನ್ನಲ್ಲಿ "ರಾಜಮಾರ್ತಾಂಡ"ನ ಆಗಮನ: ಅಣ್ಣನ ಕೊನೆಯ ಚಿತ್ರಕ್ಕೆ ಧ್ರುವ ಸರ್ಜಾ ಧ್ವನಿ
ಏನಿದು ಘಟನೆ:
ವಿಶ್ವಕ್ ಸೇನ್ ಅಭಿನಯದ ʼಅಶೋಕ ವನಂಲೋ ಅರ್ಜುನ ಕಲ್ಯಾಣಂʼ ಎಂಬ ಸಿನಿಮಾ ಮೇ 6ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಪ್ರಚಾರಕ್ಕಾಗಿ ಅವರು, ಹೈದರಾಬಾದ್ನ ರಸ್ತೆಯೊಂದರಲ್ಲಿ ಪ್ರ್ಯಾಂಕ್ ವಿಡಿಯೋ ಮಾಡಿದ್ದರು. ಇದರಲ್ಲಿ ಅವರು ತನಗೆ ಮದುವೆಯಾಗಿಲ್ಲ. ಹೀಗಾಗಿ ನಾನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದು ನಾಟಕ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾನವ ಹಕ್ಕುಗಳ ಹೋರಾಟಗಾರರೊಬ್ಬರು ವಿಶ್ವಕ್ ಸೇನ್ ಮತ್ತು ತಂಡದ ವಿರುದ್ಧ ದೂರು ದಾಖಲಿಸಿದ್ದರು. ಘಟನೆಯ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದು ಚರ್ಚೆ ನಡೆಸಲು ಸೇನ್ ಅವರನ್ನು ಸ್ಟುಡಿಯೋಗೆ ಕರೆಸಿದೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.
Every time TV9 thinks it can call people names and get away.
The shoutings of the Anchor is a result of shock and disbelief that some one said NOpic.twitter.com/Tu1YqCzeyX
— MIRCHI9 (@Mirchi9) May 2, 2022
ವಿಶ್ವಕ್ ಸೇನ್ ಅವರನ್ನು ಪಾಗಲ್ ಸೇನ್ ಹಾಗೂ ಖಿನ್ನತೆಗೆ ಒಳಾಗದವನೆಂದು ಮಾತಿನ ನಡುವೆ ನಿರೂಪಕಿ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ, ಹಾಗೆ ಕರೆಯಬೇಡಿ ಎಂದು ವಿಶ್ವಕ್ ಏರು ಧ್ವನಿಯಲ್ಲಿ ಹೇಳಿದ್ದಾರೆ. ಈ ವೇಳೆ ನಿರೂಪಕಿ ‘ಗೆಟ್ ಔಟ್ ಆಫ್ ಮೈ ಸ್ಟುಡಿಯೊ‘ ಎಂದು ಜೋರಾಗಿ ಕಿರುಚುತ್ತಾರೆ. ನಂತರ ವಿಶ್ವಕ್ ಸ್ಟುಡಿಯೊದಿಂದ ತೆರಳಿದ್ದಾರೆ.
ಇದನ್ನು ಓದಿ: ಇವು ಸುವರ್ಣ ವಾಹಿನಿಯ ಸೂಪರ್ ಡೂಪರ್ ಧಾರಾವಾಹಿಗಳು
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿರೂಪಕಿಯ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಆಕೆ ಸಂಯಮದಿಂದ ವರ್ತಿಸಬೇಕಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.