ನವದೆಹಲಿ : ಇಂದು ಬಾಲಿವುಡ್ ಬೆಡಗಿ, ಶಿಲ್ಪಾ ಶೆಟ್ಟಿ ಕುಂದ್ರಾಗೆ (Shilpa Shetty) ಜನುಮ ದಿನದ ಸಂಭ್ರಮ. ಜನ್ಮ ದಿನದ ಹಿನ್ನೆಲೆಯಲ್ಲಿ ಸ್ನೇಹಿತರು ಅಭಿಮಾನಿಗಳಿಂದ ಶಿಲ್ಪಾಗೆ ಶುಭಾಶಯಗಳ ಪೂರವೇ ಹರಿದು ಬರುತ್ತಿದೆ. ಶಿಲ್ಪಾ ಶೆಟ್ಟಿ ಕುಟುಂಬ ಶಿಲ್ಪಾ ಹುಟ್ಟು ಹಬ್ಬದ (Shilpa Shetty birthday) ಹಿನ್ನೆಲೆಯಲ್ಲಿ ವಿಶೇಷ ಆಯೋಜನೆ ಮಾಡಿಕೊಂಡಿದೆ. ಇದರ ಜೊತೆಗೆ ಪತಿ ರಾಜ್ ಕುಂದ್ರಾ (Raj Kundra) ಕೂಡಾ ತನ್ನ ಮಡದಿಗೆ ಬರ್ತ್ ಡೇ ಸರ್ ಪ್ರೈಸ್ ನೀಡಿದ್ದಾರೆ. ತನ್ನ ಬರ್ತ್ ಡೇ ಗಿಫ್ಟ್ ನೋಡುತ್ತಿದ್ದಂತೆ ಶಿಲ್ಪಾ ಸಂತೋಷದಿಂದ ಕುಣಿದಾಡಿದ್ದಾರಂತೆ. 


COMMERCIAL BREAK
SCROLL TO CONTINUE READING

ಪತಿ ರಾಜ್ ಕುಂದ್ರಾರಿಂದ ಬರ್ತ್ ಡೇ ಸರ್ ಪ್ರೈಸ್ :
ಶಿಲ್ಪಾ ಶೆಟ್ಟಿಯವರ (Shilpa Shetty) ಜನ್ಮದಿನದ ಅಂಗವಾಗಿ, ಪತಿ ರಾಜ್ ಕುಂದ್ರಾ ರೊಮ್ಯಾಂಟಿಕ್ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ 'ಆಶಿಕಿ 2' ಚಿತ್ರದ ಹಾಡು ಕೇಳಿಸುತ್ತಿದೆ. ಈ ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿಯ ಹ್ಯಾಪಿ ಮೂವ್ ಮೆಂಟ್ ನ ಫೋಟೋಗಳನ್ನು ಹಾಕಲಾಗಿದೆ. ಕೆಲ ಪೋಟೋಗಳಲ್ಲಿ ಶಿಲ್ಪಾ ಜೊತೆ ರಾಜ್ ಕುಂದ್ರಾ (Raj Kundra) ಕೂಡಾ ಕಾಣಿಸುತ್ತಾರೆ. ಒಟ್ಟಿನಲ್ಲಿ ಸುಂದರವಾದ ಹಾಡಿಗೆ ಫೋಟೋಗಳನ್ನು ಜೋಡಿಸಿ ಒಂದು ರೊಮ್ಯಾಂಟಿಕ್ ವಿಡಿಯೋ ತಯಾರಿಸಿದ್ದಾರೆ ರಾಜ್ ಕುಂದ್ರಾ.. 


ಇದನ್ನೂ ಓದಿ : ಏಕ್ತಾ ಕಪೂರ್ ಜೊತೆಗಿನ ಸ್ನೇಹದ ಬಗ್ಗೆ ಮನಬಿಚ್ಚಿ ಮಾತನಾಡಿದ ಕರಣ್ ಜೋಹರ್


HBD Rakshit Shetty: ಪಂಚ ಭಾಷೆಗಳಲ್ಲಿ ಬಿಡುಗಡೆಯಾದ 777 Charlie teaser


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ