ಹೊಸದಾಗಿ ಖರೀದಿಸಿದ ದುಬಾರಿ ಕಾರಿನಲ್ಲಿ Shilpa Shetty ಕುಟುಂಬದ ಜಾಲಿ ರೈಡ್

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಈಗ ಮರ್ಸಿಡಿಸ್ ಬೆಂಜ್ ವಿ-ಕ್ಲಾಸ್  ಕಾರಿನ ಒಡತಿ.

Written by - Ranjitha R K | Last Updated : Feb 8, 2021, 08:01 PM IST
  • ಶಿಲ್ಪಾ ಶೆಟ್ಟಿ ಈಗ ಮರ್ಸಿಡಿಸ್ ಬೆಂಜ್ ವಿ-ಕ್ಲಾಸ್ ಕಾರಿನ ಒಡತಿ
  • ಕಾರು ಖರೀದಿ ಬಳಿಕ ಫ್ಯಾಮಿಲಿ ಜೊತೆ ಫುಲ್ ಮಸ್ತಿ
  • ಲಾಂಗ್ ವೆಕೇಶನ್ ಪ್ಲಾನ್ ಮಾಡಿರುವ ಕುಟುಂಬ
ಹೊಸದಾಗಿ ಖರೀದಿಸಿದ ದುಬಾರಿ ಕಾರಿನಲ್ಲಿ Shilpa Shetty ಕುಟುಂಬದ ಜಾಲಿ ರೈಡ್ title=
ಶಿಲ್ಪಾ ಶೆಟ್ಟಿ ಈಗ ಮರ್ಸಿಡಿಸ್ ಬೆಂಜ್ ವಿ-ಕ್ಲಾಸ್ ಕಾರಿನ ಒಡತಿ (file insta gram)

ನವದೆಹಲಿ: ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಈಗ ಮರ್ಸಿಡಿಸ್ ಬೆಂಜ್ ವಿ-ಕ್ಲಾಸ್  (Mercedes-Benz V-Class)ಕಾರಿನ ಒಡತಿ. ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಇತ್ತೀಚೆಗೆ ಮರ್ಸಿಡಿಸ್ ಬೆಂಜ್ ವಿ-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ.  ಹೊಸ ಕಾರು ಖರೀಸಿದ ಶಿಲ್ಪಾ ತನ್ನ ಕುಟುಂಬದೊಂದಿಗೆ ಡ್ರೈವ್ ಹೊರಟಿದ್ರು. ಈ ವೇಳೆ ಪತಿ ರಾಜ್ ಕುಂದ್ರಾ, ಮತ್ತು ತಾಯಿ ಸುನಂದಾ, ಸಹೋದರಿ ಶಮಿತಾ ಶೆಟ್ಟಿ ಜೊತೆಗಿದ್ದರು. 

ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಫ್ಯಾಮಿಲಿ ಸೈಜ್ ಕಾರು : 
ಶಿಲ್ಪಾ ಶೆಟ್ಟಿ (Shilpa Shetty)  ಬಳಿ ಅನೇಕ ದುಬಾರಿ ಕಾರುಗಳಿವೆ. ಈ ಕಾರುಗಳ ಪಟ್ಟಿಗೆ ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ (Mercedes-Benz V-Class)  ಹೊಸ ಸೇರ್ಪಡೆ. ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ತುಂಬಾ ದೊಡ್ಡದಾಗಿರುವ ಕಾರು.  ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಕಾರು ಖರೀದಿ ಬಳಿಕ ಶಿಲ್ಪಾ ಶೆಟ್ಟಿ ಕುಟುಂಬ ಮೋಜು ಮಸ್ತಿಯಲ್ಲಿ ತೊಡಗಿದೆ. ಅಲ್ಲದೆ ಇಡೀ ಕುಟುಂಬ ಲಾಂಗ್ ವೆಕೆಶನ್ ಪ್ಲಾನ್ ಮಾಡಿಕೊಂಡಿದೆ. 

 
 
 
 

 
 
 
 
 
 
 
 
 
 
 

A post shared by Viral Bhayani (@viralbhayani)

 

ಇದನ್ನೂ ಓದಿ : ಕಾಲಿವುಡ್ ಸಿಂಗಂಗೆ ಕರೋನಾ ಪಾಸಿಟಿವ್..! ಅಭಿಮಾನಿಗಳಿಂದ ಹರಿದು ಬಂತು ಹಾರೈಕೆ

ಈ ಕಾರಿನ ಬೆಲೆ (ಮರ್ಸಿಡಿಸ್ ಬೆಂಜ್ ವಿ-ಕ್ಲಾಸ್) 71.10 ಲಕ್ಷದಿಂದ 1.46 ಕೋಟಿಗಳವರೆಗೆ ಇರುತ್ತದೆ. ಈ ಕಾರಿನಲ್ಲಿ 7 ಜನರು ಕುಳಿತುಕೊಳ್ಳಬಹುದು. ಇದರ  ಎಂಜಿನ್ ಸಾಮರ್ಥ್ಯ 1950 ಸಿಸಿ - 2143 ಸಿಸಿ. 5 ವೇರಿಯೆಂಟ್ ನಲ್ಲಿ ಈ ಕಾರು ಮಾರುಕಟ್ಟೆಗೆ (Market) ಬರುತ್ತದೆ.  ಪ್ರತಿ ವೇರಿಯೆಂಟ್ ನ ಬೆಲೆ ಬೇರೆ ಬೇರೆಯಾಗಿರುತ್ತದೆ.
 

ಶಿಲ್ಪಾ ಶೆಟ್ಟಿ ಫ್ಯಾಮಿಲಿ ಜೊತೆಗಿನ ಔಟಿಂಗ್ ವೇಳೆ ಕಪ್ಪು ಬಣ್ಣದ ಉಡುಪು ಧರಿಸಿದ್ದು, ಬಹಳ ಮೋಹಕವಾಗಿ ಕಾಣಿಸುತ್ತಿದ್ದರು, ಶಿಲ್ಪಾ ಪತಿ ರಾಜ್ ಕುಂದ್ರಾ (Raj Kundra) ಕೂಡಾ, ಕಪ್ಪು ಬಣ್ಣದ ಟೀಶರ್ಟ್ ಧರಿಸಿದ್ದರು. ಇನ್ನು ಶಮಿತಾ ಶೆಟ್ಟಿ (Shamitha Shetty),  ಬಿಳಿ ಟಾಪ್ ಮತ್ತು ನೀಲಿ ಬಣ್ಣದ ಡೆನಿಮ್‌ಗಳನ್ನು ಧರಿಸಿದ್ದರು. ಶಿಲ್ಪಾ ಮತ್ತು ಶಮಿತಾ ಅವರ ತಾಯಿ ಕ್ಯಾಶುಯಲ್ ಸಲ್ವಾರ್ ಸೂಟ್‌ನಲ್ಲಿದ್ದರು.  

ಇದನ್ನೂ ಓದಿ : Shamika Kumaraswamy: ರಾಧಿಕಾ ಕುಮಾರಸ್ವಾಮಿ ಮಗಳು 'ಶಮಿಕಾ' ಫಿಲಂ ಇಂಡಸ್ಟ್ರಿಗೆ ಬರುವುದಕ್ಕೆ ರೆಡೀನಾ..!?
 
ಶಿಲ್ಪಾ ಶೆಟ್ಟಿ ಶೀಘ್ರದಲ್ಲೇ ಪರೇಶ್ ರಾವಲ್ ಮತ್ತು ಮೀಜನ್ ಜಾಫ್ರಿ ಅವರೊಂದಿಗೆ ಹಂಗಮಾ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News