ನವದೆಹಲಿ : ಬಾಲಿವುಡ್ ಸಿನೆಮಾ ನಿರ್ಮಾಪಕರಾದ ಏಕ್ತಾ ಕಪೂರ್ (Ekta Kapoor) ಮತ್ತು ಕರಣ್ ಜೋಹರ್ (Karan Johar) ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ಅನೇಕ ಸೋಶಿಯಲ್ ಇವೆಂಟ್ ಗಳಾಗಲಿ ಅಥವಾ ಕೌಟುಂಬಿಕ ಸಮಾರಂಭಗಳಾಗಲಿ ಕರಣ್ ಮತ್ತು ಏಕ್ತಾ ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಉತ್ತಮ ಸ್ನೇಹವನ್ನು ಹೊಂದಿದ್ದು, ಇಬ್ಬರೂ ಜೊತೆಯಲ್ಲಿ ಸಮಯ ಕಳೆಯುತ್ತಾರೆ. ಇತ್ತೀಚೆಗೆ ಕರಣ್ ತಮ್ಮ ಮತ್ತು ಏಕ್ತಾ ನಡುವಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.
ಕರಣ್ ಜೋಹರ್ (Karan Johar) ಮತ್ತು ಏಕ್ತಾ ಕಪೂರ್ ಇಬ್ಬರೂ ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕರು. ಇಬ್ಬರೂ ದೊಡ್ಡ ಚಲನಚಿತ್ರ ನಿರ್ಮಾಣ ಸಂಸ್ಥೆಗಳ ಮಾಲೀಕರು. ಆಗಾಗ ಇಬ್ಬರೂ ಕೂಡಾ ಪರಸ್ಪರರ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social media) ಶೇರ್ ಮಾಡುತ್ತಿರುತ್ತಾರೆ.
ಇದನ್ನೂ ಓದಿ : Dilip Kumar health updates : ದಿಲೀಪ್ ಕುಮಾರ್ ಆರೋಗ್ಯ ಸ್ಥಿರವಾಗಿದೆ, ವದಂತಿಗಳಿಗೆ ಕಿವಿಗೊಡಬೇಡಿ, ಅಭಿಮಾನಿಗಳಿಗೆ ಸಾಯಿರಾ ಭಾನು ಮನವಿ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕರಣ್ ಜೋಹರ್ ಏಕ್ತಾ ಬಗ್ಗೆ ಮಾತನಾಡಿದ್ದಾರೆ. ಜೀವನದಲ್ಲಿ ನಮಗೆ ಬೇರೆ ಯಾರೂ ಸಿಕ್ಕಿಲ್ಲ ಎಂದಾದರೆ ನಾವಿಬ್ಬರೂ ಮದುವೆಯಾಗುತ್ತಿದ್ದೆವು ಎಂದು ಹೇಳಿದ್ದಾರೆ. ಆದರೆ ಇಬ್ಬರೂ ಯಾವತ್ತೂ ಪ್ರೀತಿಯನ್ನು ಸ್ವೀಕರಿಸಲಿಲ್ಲ ಎಂದು ಕೂಡಾ ಹೇಳಿದ್ದಾರೆ. ಇದೇ ವೇಳೆ ಒಂದು ವೇಳೆ ನಮ್ಮಿಬ್ಬರ ಮದುವೆಯಾಗುತ್ತಿದ್ದರೆ (Marriage) ಯಾರಿಗೆ ಸಂತೋಷ ವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ತನ್ನ ತಾಯಿ ಮಾತ್ರ ಬಹಳವಾಗಿ ಸಂತಸ ಪಟ್ಟುಕೊಳ್ಳುತ್ತಿದ್ದರು ಎಂದು ಕರಣ್ ಹೇಳಿದ್ದಾರೆ.
ಅಲ್ಲದೆ, ತನ್ನ ಜೀವನದ ಕೆಲ ಪ್ರಮುಖ ವಿಚಾರಗಳ ಬಗ್ಗೆಯೂ ಕರಣ್ ಇಲ್ಲಿ ಮಾತನಾಡಿದ್ದಾರೆ. ಚಿಕ್ಕವನಿದ್ದಾಗ, ತಾನು ಎಲ್ಲರಂತೆ ಸಹಜವಾಗಿಲ್ಲ ಎನ್ನುವ ಭಾವ ಅವರನ್ನು ಬಹಳವಾಗಿ ಕಾಡುತ್ತಿತ್ತಂತೆ. ಆದರೆ ತಮ್ಮ ತಂದೆ ತಾಯಿ ತಾನು ಇತರರಿಗಿಂತ ಭಿನ್ನ ಎನ್ನುವ ಭಾವನೆ ಬರದಂತೆ ತನ್ನನ್ನು ಬೆಳೆಸಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : HBD Rakshit Shetty: ಪಂಚ ಭಾಷೆಗಳಲ್ಲಿ ಬಿಡುಗಡೆಯಾದ 777 Charlie teaser
ಇನ್ನು ಕರಣ್ ಜೋಹರ್ ಅವರನ್ನು , ಆಲಿಯಾ ಭಟ್ (Alia Bhatt), ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಇತರ ಅನೇಕ ಹೊಸಬರು ಅವರನ್ನು ತಮ್ಮ ಮಾರ್ಗದರ್ಶಕರಾಗಿ ಪರಿಗಣಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ