Oscars 2022: ಭಾರತದಿಂದ ಆಸ್ಕರ್ ಗೆ ಅಧಿಕೃತ ಎಂಟ್ರಿ ಕೊಟ್ಟ ತಮಿಳು ಚಲನಚಿತ್ರ `ಕೂಜಂಗಲ್`
ತಮಿಳು ಚಲನಚಿತ್ರ ಕೂಜಂಗಲ್ 2022 ರ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ಚಿತ್ರವಾಗಿದೆ.ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆದರೆ ಮಾತ್ರ ಚಿತ್ರ ಪ್ರಶಸ್ತಿಗೆ ಅರ್ಹವಾಗುತ್ತದೆ.
ನವದೆಹಲಿ: ತಮಿಳು ಚಲನಚಿತ್ರ ಕೂಜಂಗಲ್ 2022 ರ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ಚಿತ್ರವಾಗಿದೆ.ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆದರೆ ಮಾತ್ರ ಚಿತ್ರ ಪ್ರಶಸ್ತಿಗೆ ಅರ್ಹವಾಗುತ್ತದೆ.
ಕೂಜಂಗಲ್ ಚಿತ್ರವನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ ನಿರ್ಮಿಸಿದ್ದಾರೆ ಮತ್ತು ಇದಕ್ಕೆ ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ.ಚಲನಚಿತ್ರ ನಿರ್ಮಾಪಕರು ಈ ಸುದ್ದಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ವೈದ್ಯಕೀಯ ಸಿಬ್ಬಂಧಿಗೆ 1000 ಪಿಪಿಇ ಕಿಟ್ ನೀಡಲು ಮುಂದಾದ ನಟಿ ವಿದ್ಯಾ ಬಾಲನ್
ಪಿ.ಎಸ್.ವಿನೋತ್ರಾಜ್ ನಿರ್ದೇಶನದ ಈ ಚಿತ್ರವು ಚಿಕ್ಕ ಹುಡುಗನ ಕಥೆಯನ್ನು ತೋರಿಸುತ್ತದೆ ಮತ್ತು ಅವನ ಹಿಂಸಾತ್ಮಕ ಮತ್ತು ಮದ್ಯವ್ಯಸನಿ ತಂದೆಯೊಂದಿಗಿನ ಅವನ ಸಮೀಕರಣವು ತನ್ನ ತಾಯಿಯನ್ನು ಮರಳಿ ಕರೆತರುವ ಅನ್ವೇಷಣೆಯಲ್ಲಿ ಅವನನ್ನು ಹೇಗೆ ಕರೆದೊಯ್ಯುತ್ತದೆ ಎಂಬುದನ್ನು ತೋರಿಸುತ್ತದೆ. ಚಲನಚಿತ್ರವು ಈಗಾಗಲೇ ಚಲನಚಿತ್ರೋತ್ಸವಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ.
ಕನ್ನಡದಲ್ಲಿ ಡೈಲಾಗ್ ಹೇಳಿದ ಬಾಲಿವುಡ್ ನಟಿ ವಿದ್ಯಾ ಬಾಲನ್..!
ಕಳೆದ ಕೆಲವು ವರ್ಷಗಳಿಂದ ಆಸ್ಕರ್ (Oscar) ಗೆ ಭಾರತದಿಂದ ಅಧಿಕೃತ ಚಿತ್ರಗಳಾಗಿದ್ದ ಜಲ್ಲಿಕಟ್ಟು, ಗಲ್ಲಿ ಬಾಯ್, ವಿಲೇಜ್ ರಾಕ್ ಸ್ಟಾರ್ಸ್, ನ್ಯೂಟನ್, ವಿಸಾರಣಾನಿ, ಇವೆಲ್ಲವೂ ಆಸ್ಕರ್ ಶಾರ್ಟ್ ಲಿಸ್ಟ್ ಮಾಡಲು ವಿಫಲವಾಗಿವೆ. ಇದುವರೆಗೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಏಕೈಕ ಭಾರತೀಯ ಚಲನಚಿತ್ರಗಳೆಂದರೆ ಮದರ್ ಇಂಡಿಯಾ, ಸಲಾಮ್ ಬಾಂಬೆ ಮತ್ತು ಲಗಾನ್ ಚಿತ್ರಗಳಾಗಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.