ಕನ್ನಡದಲ್ಲಿ ಡೈಲಾಗ್ ಹೇಳಿದ ಬಾಲಿವುಡ್ ನಟಿ ವಿದ್ಯಾ ಬಾಲನ್..!

ಮಾಜಿ ಆರ್ಜೆ, ನಟ ಮತ್ತು ಕಾಮಿಕ್ ಡ್ಯಾನಿಶ್ ಸೈಟ್ ತಮ್ಮ ಕಿರು ಲಾಕ್‌ಡೌನ್ ವೀಡಿಯೊಗಳ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ, ಇದರಲ್ಲಿ ಲಾಕ್‌ಡೌನ್, ಮತ್ತು ಮುಂತಾದ ವಿವಿಧ ಬೆಳವಣಿಗೆಗಳ ಬಗ್ಗೆ ಮಾತನಾಡುವ ಅಸಂಖ್ಯಾತ ಪಾತ್ರಗಳನ್ನು ಡ್ಯಾನಿಶ್ ನಿರ್ವಹಿಸುತ್ತಾರೆ.

Updated: Aug 7, 2020 , 06:52 PM IST
ಕನ್ನಡದಲ್ಲಿ ಡೈಲಾಗ್ ಹೇಳಿದ ಬಾಲಿವುಡ್ ನಟಿ ವಿದ್ಯಾ ಬಾಲನ್..!
Photo Courtsey : screen grab

ಬೆಂಗಳೂರು: ಮಾಜಿ ಆರ್ಜೆ, ನಟ ಮತ್ತು ಕಾಮಿಕ್ ಡ್ಯಾನಿಶ್ ಸೇಟ್ ತಮ್ಮ ಕಿರು ಲಾಕ್‌ಡೌನ್ ವೀಡಿಯೊಗಳ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ, ಇದರಲ್ಲಿ ಲಾಕ್‌ಡೌನ್, ಮತ್ತು ಮುಂತಾದ ವಿವಿಧ ಬೆಳವಣಿಗೆಗಳ ಬಗ್ಗೆ ಮಾತನಾಡುವ ಅಸಂಖ್ಯಾತ ಪಾತ್ರಗಳನ್ನು ಡ್ಯಾನಿಶ್ ನಿರ್ವಹಿಸುತ್ತಾರೆ

ಇತ್ತೀಚಿಗೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದ ಶಕುಂತಲಾ ದೇವಿ ಬಯೋಪಿಕ್ ನಲ್ಲಿ ನಟಿಸಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರನ್ನು ಡ್ಯಾನಿಶ್ ಸೇಟ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಅವರನ್ನು ಸಂದರ್ಶನ ಮಾಡಿದ್ದಾರೆ.

ಕೊನೆಗೆ ಕುಡಕನ ಪಾತ್ರದಲ್ಲಿ ಡ್ಯಾನಿಶ್ ಸಂದರ್ಶನ ಮಾಡುವ ಸಂದರ್ಭದಲ್ಲಿ ಅವನಿಗೆ 'ಥೂ ಬೇವರ್ಸಿ ಕುಡುಕ ಅದು ಮ್ಯಾಕ್ಸ್ ಅಲ್ಲ ಹೋಗು ಇಲ್ಲಿಂದ' ಎಂದು ವಿದ್ಯಾ ಬಾಲನ್ ಕನ್ನಡದಲ್ಲಿ ಡೈಲಾಗ್ ಹೇಳಿದ್ದಾರೆ. ಈಗ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.