ಲಕ್ಷಾಂತರ ವೀಕ್ಷಣೆ ಪಡೆದು ಟ್ರೆಂಡಿಂಗ್ನಲ್ಲಿದೆ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಟೀಸರ್..!
ಮಾರ್ಟಿನ್ ಸಿನಿಮಾದ ಅಪ್ಡೇಟ್ ಗಾಗಿ ಕಾಯ್ತಾ ಇದ್ದ ಅಭಿಮಾನಿಗಳಿಗೆ ಸಖತ್ ಸ್ವೀಟ್ ಸಿಕ್ಕಾಗಿದೆ. ಇನ್ನೇನಿದ್ರೂ ಸಿನಿಮಾ ರಿಲೀಸ್ ಆದಮೇಲೆ ಬಿರಿಯಾನಿ ತಿನ್ನೋದು ಮಾತ್ರ ಬಾಕಿ. ಪರಭಾಷೆಯಲ್ಲೂ ಮಾರ್ಟಿನ್ ಟೀಸರ್ ಧೂಳೆಬ್ಬಿಸಿದೆ.
ಬೆಂಗಳೂರು: ಕನ್ನಡ ಚಿತ್ರರಂಗದಿಂದ ಮಾರ್ಟಿನ್ ಎಂಬ ಸೂಪರ್ ಡೂಪರ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಧ್ರುವ ಸರ್ಜಾ ಅವರ ಅಗ್ರೇಸಿವ್ ಅಪಿಯರೆನ್ಸ್, ಉದಯ್ ಮೆಹ್ತಾ ಅವರ ಗ್ರಾಂಡ್ ಸ್ಕೇಲ್, ಎಪಿ ಅರ್ಜುನ್ ಅವರ ಶಾಟ್ ಕಂಪೋಸಿಟ್ ಹಾಗೂ ಎಲ್ಲಾ ಟೆಕ್ನಿಷಿಯನ್ಗಳ ಕೆಲಸವನ್ನ ಇಡೀ ಜಗತ್ತೇ ಮೆಚ್ಚಿ ಕೊಂಡಾಡುತ್ತಿದೆ.
ಮಾರ್ಟಿನ್ ಸಿನಿಮಾದ ಅಪ್ಡೇಟ್ ಗಾಗಿ ಕಾಯ್ತಾ ಇದ್ದ ಅಭಿಮಾನಿಗಳಿಗೆ ಸಖತ್ ಸ್ವೀಟ್ ಸಿಕ್ಕಾಗಿದೆ. ಇನ್ನೇನಿದ್ರೂ ಸಿನಿಮಾ ರಿಲೀಸ್ ಆದಮೇಲೆ ಬಿರಿಯಾನಿ ತಿನ್ನೋದು ಮಾತ್ರ ಬಾಕಿ. ಪರಭಾಷೆಯಲ್ಲೂ ಮಾರ್ಟಿನ್ ಟೀಸರ್ ಧೂಳೆಬ್ಬಿಸಿದೆ.
ಇದನ್ನೂ ಓದಿ- "ನನ್ನ ಮರ್ಮಾಂಗಕ್ಕೆ ಗುದ್ದುತ್ತಿದ್ದ" ಪ್ರಸಿದ್ಧ ನಿರ್ಮಾಪಕನ ವಿಕೃತ ಮನಸ್ಥಿತಿ ಬಿಚ್ಚಿಟ್ಟ ನಟಿ
ಪ್ರತಿಯೊಬ್ಬರೂ ಕೂಡ ಟೀಸರ್ ನೋಡಿ ವಾವ್ ಅಂತ ಹೇಳುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ಹ್ಯಾಪಿ ಮ್ಯಾಟರ್ ಏನಪ್ಪಾ ಅಂದ್ರೆ ಟೀಸರ್ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವ್ಯೂಸ್ ಪಡ್ಕೊಂಡಿದೆ.
ಮಾರ್ಟಿನ್ ಸಿನಿಮಾ ಭಾರತ ಚಿತ್ರರಂಗದಲ್ಲಿ ಮತ್ತೊಂದು ಮೈಲಿ ಗಲ್ಲು ಖಂಡಿತ ಆಗುತ್ತೆ ಅಂತ ಪ್ರತಿಯೊಬ್ಬರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ನೂರು ಕೋಟಿ ವೆಚ್ಚದಲ್ಲಿ ಮೂಡಿ ಬಂದಿರುವ ಮಾರ್ಟಿನ್ ಚಿತ್ರವನ್ನು ಬೆಂಗೂಳೂರು, ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿರಲಿದೆ.
ಬೆಂಕಿಯಂತೆ ಸುಡುತ್ತಿದೆ ಪ್ಯಾನ್ ಇಂಡಿಯಾ ಮೂವಿ "ಮಾರ್ಟಿನ್ " ಸಿನಿಮಾ ಟೀಸರ್.. ಹೇಗಿದೆ ಗೊತ್ತಾ "ಮಾರ್ಟಿನ್" ಟೀಸರ್..?
ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿರೋದು ಚಿತ್ರದ ಮತ್ತೊಂದು ಹೈಲೇಟ್ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.