Panama Papers Case: ಇ.ಡಿ ವಿಚಾರಣೆಗೆ ಹಾಜರಾದ ನಟಿ ಐಶ್ವರ್ಯಾ ರೈ ಬಚ್ಚನ್
‘ಪನಾಮಾ ಪೇಪರ್ಸ್’ ಬಹಿರಂಗಪಡಿಸಿರುವ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ ಸೇರಿದಂತೆ ಸುಮಾರು 500 ಭಾರತೀಯರ ಹೆಸರುಗಳಿವೆ ಎಂದು ವರದಿಯಾಗಿದೆ.
ನವದೆಹಲಿ: ಪನಾಮಾ ಪೇಪರ್ಸ್ ಪ್ರಕರಣ(Panama Papers Case) ಸಂಬಂಧ ಫಾರೆಕ್ಸ್ ಉಲ್ಲಂಘನೆ ಆರೋಪದ ಮೇಲೆ ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಜಾರಿ ನಿರ್ದೇಶನಾಲಯ ಇಂದು(ಡಿ.20) ವಿಚಾರಣೆ ನಡೆಸಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ತನಿಖಾ ಸಂಸ್ಥೆಯು ವಿದೇಶದಲ್ಲಿ ಸಂಪತ್ತನ್ನು ಸಂಗ್ರಹಿಸಿರುವ ಆರೋಪದ ಮೇಲೆ ದೆಹಲಿಯ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ 48 ವರ್ಷದ ನಟಿ(Aishwarya Rai Bachchan)ಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಸೊಸೆ ಐಶ್ವರ್ಯಾ ರೈ ಅವರಿಗೆ ಈ ಹಿಂದೆಯೂ ಸಮನ್ಸ್ ನೀಡಲಾಗಿತ್ತು ಆದರೆ 2 ಬಾರಿ ಹೆಚ್ಚಿನ ಸಮಯ ಕೋರಿದ್ದರು.
ಇದನ್ನೂ ಓದಿ: ದ್ವೇಷದ ಬೆಂಕಿ ಆರಲಿ.. ಕನ್ನಡದ ಬಾವುಟ ಹಾರಲಿ: ನಟಿ ಹರಿಪ್ರಿಯಾ
ಜಾರಿ ನಿರ್ದೇಶನಾಲಯವು 2017ರಲ್ಲಿ ವಿದೇಶಿ ವಿನಿಮಯ ಉಲ್ಲಂಘನೆ(Foreign Exchange Violations)ಯ ಆರೋಪಗಳ ತನಿಖೆಯನ್ನು ಪ್ರಾರಂಭಿಸಿತು. ಭಾರತೀಯ ರಿಸರ್ವ್ ಬ್ಯಾಂಕ್‌ನ ಉದಾರೀಕೃತ ರವಾನೆ ಯೋಜನೆ (ಎಲ್‌ಆರ್‌ಎಸ್) ಅಡಿಯಲ್ಲಿ 2004ರಿಂದ ಅವರ ವಿದೇಶಿ ರವಾನೆಗಳ ಬಗ್ಗೆ ವಿವರಣೆ ನೀಡುವಂತೆ ಬಚ್ಚನ್ ಕುಟುಂಬಕ್ಕೆ ಅದು ನೋಟಿಸ್ ನೀಡಿದೆ. ಐಶ್ವರ್ಯಾ ರೈ ಅವರು ಕಳೆದ 15 ವರ್ಷಗಳಲ್ಲಿ ಪಡೆದ ವಿದೇಶಿ ಪಾವತಿಗಳ ಬಗ್ಗೆ ಈಗಾಗಲೇ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2 ಬಾರಿ ಸಮನ್ಸ್ ನೀಡಿದರೂ ತನಿಖೆಗೆ ಹಾಜರಾಗದ ಹಿನ್ನೆಲೆ 3ನೇ ಬಾರಿ ಐಶ್ವರ್ಯಾ ರೈ(Aishwarya Rai)ಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ‘ಪನಾಮಾ ಪೇಪರ್ಸ್’(Panama Papers) ಬಹಿರಂಗಪಡಿಸಿರುವ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ ಸೇರಿದಂತೆ ಸುಮಾರು 500 ಭಾರತೀಯರ ಹೆಸರುಗಳಿವೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಐಶ್ವರ್ಯಾ ರೈ, ‘ಪನಾಮಾ ಪೇಪರ್ಸ್ ಪಟ್ಟಿಯಲ್ಲಿ ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರು ಇರುವುದು ಸಂಪೂರ್ಣ ಸುಳ್ಳು’ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.
ಇದನ್ನೂ ಓದಿ: Pushpa Box Office Collection:ಕೇವಲ ಎರಡೇ ದಿನಗಳಲ್ಲಿ 100 ಕೋಟಿ ಕ್ಲಬ್ ಗೆ ಶಾಮೀಲಾದ 'ಪುಷ್ಪಾ'
ಜಾರಿ ನಿರ್ದೇಶನಾಲಯ(Enforcement Directorate)ದ ಮೂಲಗಳ ಪ್ರಕಾರ, ಐಶ್ವರ್ಯಾ ರೈ ನಿರ್ದೇಶಕಿಯಾಗಿ 2004ರಲ್ಲಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ನಲ್ಲಿ ಅಮಿಕ್ ಪಾರ್ಟ್‌ನರ್ಸ್ ಎಂಬ ಕಡಲಾಚೆಯ ಕಂಪನಿಯನ್ನು ಸಂಘಟಿಸಲಾಯಿತು. ಕಾನೂನು ಸಂಸ್ಥೆ ಮೊಸಾಕ್ ಫೋನ್ಸೆಕಾ ಕಂಪನಿಯನ್ನು ನೋಂದಾಯಿಸಿತ್ತು. ಇದು 50 ಸಾವಿರ ಅಮೆರಿಕನ್ ಡಾಲರ್ ಮೊತ್ತದ ಪಾವತಿಸಿದ ಬಂಡವಾಳವನ್ನು ಹೊಂದಿತ್ತು. 2009ರಲ್ಲಿ ಐಶ್ವರ್ಯಾ ರೈ ಕಂಪನಿಯಿಂದ ನಿರ್ಗಮಿಸಿದ್ದರು. ಇದನ್ನು ದುಬೈ ಮೂಲದ BKR ಅಡೋನಿಸ್ ಸ್ವಾಧೀನಪಡಿಸಿಕೊಂಡಿದೆ.
‘ಪನಾಮ ಪೇಪರ್ಸ್’ ಪ್ರಕರಣ(Panama Papers Case)ವು 2016ರಲ್ಲಿ ಲಕ್ಷಾಂತರ ದಾಖಲೆಗಳನ್ನು ಕದ್ದು ಮಾಧ್ಯಮಗಳಿಗೆ ಸೋರಿಕೆಯಾದ ವಿಸ್ತಾರವಾದ ತನಿಖೆಯಾಗಿದೆ. ಈ ಪ್ರಕರಣವು ತೆರಿಗೆಗಳನ್ನು ತಪ್ಪಿಸಲು ಕಡಲಾಚೆಯ ಖಾತೆಗಳು ಅಥವಾ ಶೆಲ್ ಕಂಪನಿಗಳನ್ನು ಸ್ಥಾಪಿಸಿದ ಆರೋಪಗಳನ್ನು ಒಳಗೊಂಡಿದೆ. ವಿಶ್ವಾದ್ಯಂತ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಮತ್ತು ಸೆಲೆಬ್ರಿಟಿಗಳ ಸೋರಿಕೆಯಾದ ಹಣಕಾಸು ದಾಖಲೆಗಳನ್ನು ಇಂಟರ್ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ ಪರಿಶೀಲಿಸಿದೆ ಮತ್ತು ಈ ಬಗ್ಗೆ ವರದಿ ಪ್ರಕಟಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.