Pushpa Box Office Collection:ಕೇವಲ ಎರಡೇ ದಿನಗಳಲ್ಲಿ 100 ಕೋಟಿ ಕ್ಲಬ್ ಗೆ ಶಾಮೀಲಾದ 'ಪುಷ್ಪಾ'

Pushpa Box Office Collection: ಕರೋನಾ ಕಾಲದ ನಂತರ, ಚಿತ್ರಮಂದಿರಗಳು ತೆರೆದ ತಕ್ಷಣ, ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕಗಳನ್ನು ಒಂದರ ನಂತರ ಒಂದರಂತೆ ಘೋಷಿಸಿದ್ದಾರೆ. ಸುಮಾರು ಒಂದು ವರ್ಷ ಮನೆಯಲ್ಲಿ ಕುಳಿತಿದ್ದ ಪ್ರೇಕ್ಷಕರೂ ಕೂಡ ಅದನ್ನು ಅಷ್ಟೇ ಉತ್ಸಾಹದಿಂದ ಸ್ವೀಕರಿಸಿದರು. 

Written by - Nitin Tabib | Last Updated : Dec 19, 2021, 04:43 PM IST
  • ಕೇವಲ ಎರಡೇ ದಿನಗಳಲ್ಲಿ 100 ಕೋಟಿ ಗಳಿಕೆ ಮಾಡಿದ 'ಪುಷ್ಪಾ'
  • ಹಿಂದಿಯಲ್ಲೂ ಕೂಡ ಚಿತ್ರದ ಅದ್ಭುತ ಪ್ರದರ್ಶನ ಮುಂದುವರೆದಿದೆ.
  • ಕೇವಲ ಎರಡೇ ದಿನಗಳಲ್ಲಿ ಚಿತ್ರ ಮಾಡಿದ ಗಳಿಕೆ ಎಷ್ಟು ತಿಳಿಯೋಣ ಬನ್ನಿ
Pushpa Box Office Collection:ಕೇವಲ ಎರಡೇ ದಿನಗಳಲ್ಲಿ 100 ಕೋಟಿ ಕ್ಲಬ್ ಗೆ ಶಾಮೀಲಾದ 'ಪುಷ್ಪಾ' title=
Pushpa Box Office Collection (File Photo)

Pushpa Box Office Collection: ಕರೋನಾ ಕಾಲದ ನಂತರ, ಚಿತ್ರಮಂದಿರಗಳು ತೆರೆದ ತಕ್ಷಣ, ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕಗಳನ್ನು ಒಂದರ ನಂತರ ಒಂದರಂತೆ ಘೋಷಿಸಿದ್ದಾರೆ. ಸುಮಾರು ಒಂದು ವರ್ಷ ಮನೆಯಲ್ಲಿ ಕುಳಿತಿದ್ದ ಪ್ರೇಕ್ಷಕರೂ ಕೂಡ ಅದನ್ನು ಅಷ್ಟೇ ಉತ್ಸಾಹದಿಂದ ಸ್ವೀಕರಿಸಿದರು. ಬಾಲಿವುಡ್ ಮಾತ್ರವಲ್ಲ, ಹಾಲಿವುಡ್, ಸೌತ್ ಚಿತ್ರಗಳಿಗೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ: ದಿ ರೈಸ್' (Pushpa: The Rise) ಸಿನಿಮಾ ಬಹಳ ದಿನಗಳಿಂದ ಸದ್ದು ಮಾಡಿತ್ತು. ಇದೀಗ ಚಿತ್ರ ಬಿಡುಗಡೆಯಾಗಿದ್ದು, ಹೊಸ ದಾಖಲೆ ಬರೆಯುತ್ತಿದೆ. ಮೊದಲ ದಿನವೇ ಚಿತ್ರದ ಕಲೆಕ್ಷನ್ 'ಸೂರ್ಯವಂಶಿ' ಮತ್ತು 'ಸ್ಪೈಡರ್ ಮ್ಯಾನ್' ಹಿಂದಿಕ್ಕಿದೆ. 'ಸ್ಪೈಡರ್ ಮ್ಯಾನ್' ಮೊದಲ ದಿನ 41.50 ಕೋಟಿ ಗಳಿಸಿತ್ತು ಮತ್ತು ಸೂರ್ಯವಂಶಿ 31.40 ಕೋಟಿ ಕಲೆಕ್ಷನ್ ಮಾಡಿತ್ತು. 

'ಪುಷ್ಪಾ' ಚಿತ್ರದ ಎರಡನೇ ದಿನದ ಗಳಿಕೆಯ ಅಂಕಿ ಅಂಶಗಳು ಪ್ರಕಟಗೊಂಡಿವೆ. ಸದ್ಯ ಹಾಲಿವುಡ್ ಚಿತ್ರ 'ಸ್ಪೈಡರ್ ಮ್ಯಾನ್' ಕೂಡ ಥಿಯೇಟರ್ ನಲ್ಲಿದೆ. ಆದರೆ, ಇದು ‘ಪುಷ್ಪಾ’ ಗಳಿಕೆಯ ಮೇಲೆ ಪರಿಣಾಮ ಬೀರಿಲ್ಲ. ವಿಶ್ವಾದ್ಯಂತ ಚಿತ್ರ 100 ಕೋಟಿ ಗಳಿಕೆ ಮಾಡಿದೆ. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಟ್ವೀಟ್ ನಲ್ಲಿ ಈ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಪುಷ್ಪಾ’ ಚಿತ್ರ ಎರಡೇ ದಿನಗಳಲ್ಲಿ ವಿಶ್ವದಾದ್ಯಂತ 100 ಕೋಟಿ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ-WATCH: ರಣವೀರ್​ ಸಿಂಗ್​​, ಕ್ರಿಕೆಟರ್​ ಶ್ರೀಕಾಂತ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಕಿಚ್ಚ ಸುದೀಪ್

ಹಿಂದಿಯಲ್ಲೂ ಕೂಡ ಭರ್ಜರಿ ಬಿಸ್ನೆಸ್ ಮಾಡಿದೆ ಚಿತ್ರ
ಇನ್ನೊಂದೆಡೆ,  ಚಲನಚಿತ್ರ ವಿಮರ್ಶಕ ತರಣ್ ಆದರ್ಶ್, ಪುಷ್ಪಾ ಚಿತ್ರದ ಹಿಂದಿಯ ಗಳಿಕೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಇದರ ಮುಖ್ಯ ಕಲೆಕ್ಷನ್ ವಿಶೇಷವಾಗಿ ಸಿಂಗಲ್ ಸ್ಕ್ರೀನ್‌ನಲ್ಲಿದೆ. 'ಪುಷ್ಪ' ಹಿಂದಿ ಅವತರಣಿಕೆ ಶುಕ್ರವಾರ 3 ಕೋಟಿ, ಶನಿವಾರ 4 ಕೋಟಿ ಕಲೆಕ್ಷನ್ ಮಾಡಿದೆ. ಎರಡು ದಿನದಲ್ಲಿ ಚಿತ್ರ 7 ಕೋಟಿ ಗಳಿಕೆ ಮಾಡಿದೆ. 

ಇದನ್ನೂ ಓದಿ-ಈ ಒಂದು ಫೋಟೋಗಾಗಿ ಅತ್ತಿದ್ದರಂತೆ.. 36 ವರ್ಷ ಕಾದಿದ್ದರಂತೆ ಕಿಚ್ಚ.. ಇದೇ ನೋಡಿ ಆ ಅಪರೂಪದ ಚಿತ್ರ!

ಮುಂದಿನ ವರ್ಷ ಈ ಚಿತ್ರದ ಭಾಗ 2 ಬಿಡುಗಡೆಯಾಗಲಿದೆ
'ಪುಷ್ಪಾ: ದಿ ರೈಸ್' ಇದು ಈ ಚಿತ್ರದ ಮೊದಲ ಭಾಗವಾಗಿದೆ. ಈ ಚಿತ್ರದ ಎರಡನೇ ಭಾತ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಸುಕುಮಾರ್ ಈ ಚಿತ್ರದ ನಿರ್ದೆಶನದ ಜವಾಬ್ದಾರಿ ಹೊತ್ತಿದ್ದಾರೆ. ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರದಲ್ಲಿ ಅಲ್ಲೂ ಅರ್ಜುನ್ (Allu Arjun) ಜೊತೆ ರಷ್ಮಿಕಾ ಮಂದಣ್ಣ (Rashmika Mandanna) ಹಾಗೂ ಫಹಾದ್ ಫಾಸಿಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ಐಟಂ ಸಾಂಗ್ ವೊಂದರಲ್ಲಿ ಸಮಂತಾ ರುತ್ ಪ್ರಭು (Samantha Ruth Prabhu) ಕೂಡ ಕಾಣಿಸಿಕೊಂಡಿದ್ದು, ಈ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ಸದ್ದು ಮಾಡುತ್ತಿದೆ.

ಇದನ್ನೂ ಓದಿ-Watch: ಗಗನಸಖಿಯ ಹಾಟ್ ಡ್ಯಾನ್ಸ್ ಗೆ ನೆಟಿಜನ್ ಗಳು ಫುಲ್ ಫಿದಾ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News