Dhoomam on Ott : ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್‌ ನಿರ್ದೇಶನದ ಧೂಮಂ ಸಿನಿಮಾ ಥಿಯೇಟರ್‌ ಬಳಿಕ ಒಟಿಟಿಗೆ ಲಗ್ಗೆ ಇಡಲು ಮುಂದಾಗಿದೆ. ಮಾಲಿವುಡ್‌ ಖ್ಯಾತ ನಟ ಫಹಾದ್ ಫಾಸಿಲ್ ನಟನೆಯ ಧೂಮಂ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಧೂಮಂ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿದೆ. ಈಗ ಒಟಿಟಿಗೆ ಎಂಟ್ರಿ ಕೊಡಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.


COMMERCIAL BREAK
SCROLL TO CONTINUE READING

ಜೂನ್ 23ರಂದು ರಿಲೀಸ್ ಆದ ಧೂಮಂ ಸಿನಿಮಾದಲ್ಲಿ ಫಹಾದ್ ಫಾಸಿಲ್ ಮತ್ತು ಅಪರ್ಣ ಬಾಲಮುರಳಿ ಪ್ರಮುಖ ನಟಿಸಿದ್ದಾರೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಈ ನಿರ್ಮಾಣ ಮಾಡಿದೆ. ಕನ್ನಡದಲ್ಲಿಯೂ ಸಹ ಧೂಮಂ ತೆರೆ ಕಂಡಿದೆ. ಅದ್ರೆ ಅಷ್ಟಾಗಿ ಸದ್ದು ಮಾಡಿಲ್ಲ.


ಇದನ್ನೂ ಓದಿ: ಗರೇಟು ಸೇದುವುದರಲ್ಲಿ ಹೆಣ್ಮಕ್ಳೆ ಸ್ಟ್ರಾಂಗು ಗುರು; ಈ ಪಟ್ಟಣಕ್ಕೆ ಏನಾಗಿದೆ ಎಂದ ನೆಟ್ಟಿಗರು!


ಸದ್ಯ ಧೂಮಂ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಅಮೆಜಾನ್ ಧೂಮಂ ಸಿನಿಮಾವನ್ನು ಖರೀದಿ ಮಾಡಿದ್ದು ಬಿಡುಗಡೆ ದಿನಾಂಕ ಕೂಡ ನಿಗಧಿ ಮಾಡಿಕೊಂಡಿದೆ ಎನ್ನಲಾಗಿದೆ. ಜುಲೈ 21ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ ಎಂದು ಸುದ್ದಿಯಾಗಿದೆ. ಆದ್ರೆ ಈ ಕುರಿತು ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ.


ಮೊದಲ ಬಾರಿಗೆ ಫಹಾದ್ ಫಾಸಿಲ್ ಹೊಂಬಾಳೆ ಫಿಲ್ಮ್ಸ್‌ ಸಿನಿಮಾ ಬ್ಯಾನರ್‌ ಅಡಿಯ ಸಿನಿಮಾದಲ್ಲಿ ನಟಿಸಿದ್ದಾರೆ. ಕೆಜಿಎಫ್ ಮತ್ತು ಕಾಂತಾರ ಸಕ್ಸಸ್‌ನಲ್ಲಿದ್ದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಧೂಮಂ ಸೋಲು ನೀಡಿದೆ. ಸದ್ಯ ಒಟಿಟಿ ಪ್ರೇಕ್ಷಕರಿಗಾದರೂ ಇಷ್ಟವಾಗುತ್ತಾ ಅಂತ ಕಾದುನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.