ಬೆಂಗಳೂರು: ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಟನೆಯ ‘ಲವ್ ಬರ್ಡ್ಸ್’ ಸಿನಿಮಾ ಬಾರಿ ಮೆಚ್ಚುಗೆ ಗಳಿಸಿತ್ತು. ಇದೀಗ ಈ ಸಿನಿಮಾದ ನಿರ್ದೇಶಕ ಪಿಸಿ ಶೇಖರ್ ‘ಕಡ್ಡಿಪುಡಿ’ ಚಂದ್ರು ವಿರುದ್ಧ ಹಣಕಾಸಿನ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.


COMMERCIAL BREAK
SCROLL TO CONTINUE READING

ಈ ಸಿನಿಮಾಕ್ಕಾಗಿ ಪಿಸಿ ಶೇಕರ್‌ ಹಾಗೂ ನಿರ್ಮಾಪಕ ಕಡ್ಡಿಪುಡಿ ಚಂದ್ರು ನಡುವೆ  20 ಲಕ್ಷ ರೂಪಾಯಿಗೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತಂತೆ. ಅಗ್ರಿಮೆಂಟ್‌ಗೆ ತಕ್ಕಂತೆ ಪಿಸಿ ಶೇಖರ್ ಕೆಲಸ ಮಾಡಿದ್ದಾರೆ. ಆದರೆ  ಸಿನಿಮಾ ಎಡಿಟಿಂಗ್ ಸಲುವಾಗಿ ನೀರಿಕ್ಷೆ ಮೀರಿ ಐದು ಲಕ್ಷ ರೂಪಾಯಿ ಹೆಚ್ಚುವರಿ ಖರ್ಚು ಆಗಿತ್ತು.


ಇದನ್ನೂ ಓದಿ: Vivek Agnihotri - Aishwarya Rai: ‘ಕಾನ್​ ಅಂದ್ರೆ ಚಿತ್ರೋತ್ಸವವೇ ಹೊರತು ಫ್ಯಾಷನ್​ ಶೋ ಅಲ್ಲ-​ ವಿವೇಕ್​ ಅಗ್ನಿಹೋತ್ರಿ ಟೀಕೆ


ಸಿನಿಮಾ ಸಲುವಾಗಿ  25 ಲಕ್ಷ ರೂಪಾಯಿ ಹಣವನ್ನು ಕಡ್ಡಿಪುಡಿ ಚಂದ್ರು, ನಿರ್ದೇಶಕ ಪಿಸಿ ಶೇಖರ್ ಅವರಿಗೆ  ನೀಡಬೇಕಿತ್ತು.  ಆದರೆ ಈಗ ಬಂದ ಮಾಹಿತಿ ಪ್ರಕಾರ ಕಡ್ಡಿಪುಡಿ ಚಂದ್ರು,  ಶೇಖರ್ ಗೆ  6.5 ಲಕ್ಷ ರೂಪಾಯಿ ಮಾತ್ರ ನೀಡಿದ್ದಾರೆ. ಉಳಿದ ಹಣವನ್ನು ಕೇಳಿದರೇ ಕೆಟ್ಟ ಪದಗಳಿಂದ ನಿಂದಿಸಿದ್ದಾರೆಂದು  ಪಿಸಿ. ಶೇಖರ್ ದೂರು ನೀಡಿದ್ದಾರೆ.


ಅದಲ್ಲದೇ ತಮ್ಮಿಂದ ಕ್ಲಿಯರೆನ್ಸ್ ಪಡೆದಿರುವುದಾಗಿ ಚಂದ್ರು ನಕಲಿ ಸಹಿ ಮಾಡಿದ್ದಾರೆ ಎಂದು ನಿರ್ದೇಶಕ ಪಿಸಿ ಶೇಖರ್ ಆರೋಪ ಮಾಡಿದ್ದಾರೆ. ದೂರಿನಲ್ಲಿ ಹದಿನೆಂಟೂವರೆ ಲಕ್ಷ ರೂಪಾಯಿ ಹಣ ಕೊಟ್ಟಿಲ್ಲ.


ಇದನ್ನೂ ಓದಿ: Rakshit Shetty: ಟೊವಿನೋ ಥಾಮಸ್ ʼARMʼ ಟೀಸರ್ ರಿಲೀಸ್ ಮಾಡಿದ  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 


ನಕಲಿ ಸಹಿ ಮಾಡಿ ನನಗೆ ಕೊಡಬೇಕಿದ್ದ ಹಣ ನೀಡಿಲ್ಲ. ನನ್ನ ಬಗ್ಗೆಯೇ ಕೆಟ್ಟದಾಗಿ ಚಿತ್ರರಂಗದಲ್ಲಿ ಮಾತನಾಡಿದ್ದಾರೆ. ಹಲವಾರು ನಿರ್ಮಾಪಕರ ಬಳಿ ಸಿನಿಮಾದಲ್ಲಿ ಅವಕಾಶ ನೀಡದಂತೆ ಬೆದರಿಸಿದ್ದಾರೆ ಎಂದು ಪಿ.ಸಿ. ಶೇಖರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ