PS2 box office : ಬಹುನಿರೀಕ್ಷಿತ `ಪೊನ್ನಿಯಿನ್ ಸೆಲ್ವನ್-2` ಚಿತ್ರ ಮೊದಲ ದಿನ ಗಳಿಸಿದ್ದೇಷ್ಟು...?
Ponniyin Selvan 2 collection : ಬರಹಗಾರ ಕಲ್ಕಿ ಅವರ ಪ್ರಸಿದ್ಧ ಕಾದಂಬರಿ ಆಧಾರಿತ `ಪೊನ್ನಿಯಿನ್ ಸೆಲ್ವನ್` ಸಿನಿಮಾವನ್ನು ಮಣಿರತ್ನಂ ಅವರು ಎರಡು ಭಾಗಗಳಲ್ಲಿ ನಿರ್ದೇಶಿಸಿದ್ದಾರೆ. ಪೊನ್ನಿಯಿನ್ ಸೆಲ್ವನ್ ಭಾಗ 2 ಇಂದು ಬಿಡುಗೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
Ponniyin Selvan 2 : ಕಾಲಿವುಡ್ ಬಹುನಿರೀಕ್ಷಿತ ಸಿನಿಮಾ ಪೊನ್ನಿಯಿನ್ ಸೆಲ್ವನ್ 2 ಇಂದು ಬಿಡುಗಡೆಯಾಗಿದೆ. ಬಹು ತಾರಾಗಣ ಹೊಂದಿರುವ ಈ ಸಿನಿಮಾವನನು ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ, ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ತ್ರಿಶಾ, ಶೋಭಿತಾ ಧುಲಿಪಾಲ್, ಪ್ರಕಾಶ್ ರಾಜ್ ಸೇರಿದಂತೆ ಹಲವು ನಟರಿದ್ದಾರೆ. ಬಿಡುಗಡೆಯಾದ ಮೊದಲ ದಿನ ಪಿಎಸ್ 2 ಗಳಿಸಿ ಮೊತ್ತ ಎಷ್ಟು ಅಂತ ನೋಡೋಣ.
ಪೊನ್ನಿನ್ ಸೆಲ್ವನ್ ಭಾಗ 1, ಕಳೆದ ವರ್ಷ ಸೆಪ್ಟೆಂಬರ್. 30ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿತ್ತು. ಮೊದಲ ಭಾಗ ಎರಡನೇ ಭಾಗದ ನಿರೀಕ್ಷೆಯನ್ನೂ ಹೆಚ್ಚಿಸಿತ್ತು. ಗಮನಾರ್ಹವಾಗಿ, ಮೊದಲ ಭಾಗವು ವಿಶ್ವಾದ್ಯಂತ ರೂ 500 ಕೋಟಿ ಗಳಿಸಿತು. ಅಲ್ಲದೆ, ತಮಿಳು ಚಿತ್ರರಂಗದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆಯಾಗಿದೆ. ಇದೀಗ ಈ ಸಿನಿಮಾದ ಎರಡನೇ ಭಾಗ ಇಂದು ಅಂದ್ರೆ, ಎಪ್ರೀಲ್ 30 ರಂದು ರಿಲೀಸ್ ಆಗಿದೆ.
ಇದನ್ನೂ ಓದಿ: Madhuri Dixit : ಕೊನೆಗೂ ಬಯಲಾಯ್ತು ʼಮಾಧುರಿ ದೀಕ್ಷಿತ್ʼ ಸೌಂದರ್ಯದ ರಹಸ್ಯ..! ನೀವು ಟ್ರೈ ಮಾಡಿ..
ಮೊದಲ ಭಾಗದಲ್ಲೇ ಆದಿತಾ ಕರಿಗಾಲನ್, ಅರುಣ್ಮೋಳಿವರ್ಮನ್, ಕುಂತವೈ, ನಂದಿನಿ, ವಂದಿಯತೇವನ್, ಪೂಂಗುಝಲಿ ಮುಂತಾದ ಪ್ರಮುಖ ಪಾತ್ರಗಳು ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಹಾಗಾಗಿ, ಎರಡನೇ ಭಾಗದಲ್ಲೂ ಆ ಪಾತ್ರಗಳನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಅದರಂತೆ ನಿನ್ನೆ ಪೊನ್ನಿಯ ಸೆಲ್ವನ ಎರಡನೇ ಭಾಗ ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿದೆ. ಚಿತ್ರವು ವಿಶ್ವದಾದ್ಯಂತ ವಿವಿಧ ಭಾಷೆಗಳಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಪ್ರಸ್ತುತ ಭಾಗ II ಬುಕಿಂಗ್‌ನಲ್ಲಿಯೂ ಮುಂಚೂಣಿಯಲ್ಲಿದ್ದು, ಇದೀಗ ಮೊದಲ ದಿನದ ಕಲೆಕ್ಷನ್ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಮೊದಲ ದಿನ ಚಿತ್ರ ಒಟ್ಟು ರೂ. 38 ಕೋಟಿ ಸಂಗ್ರಹವಾಗಿದೆ. ಅದರಲ್ಲೂ ತಮಿಳುನಾಡಿನಲ್ಲಿ ಈ ಚಿತ್ರ ರೂ. 25 ಕೋಟಿ ಗಳಿಕೆ ಕಂಡಿದೆ. ಇದರ ಮೊದಲ ಭಾಗ ಮೊದಲ ದಿನವೇ ಒಟ್ಟು ರೂ. 40 ಕೋಟಿ ಕಲೆಕ್ಷನ್ ಮಾಡಿತ್ತು. ಪಿಎಸ್ - 2 ಆಂಧ್ರಪ್ರದೇಶ, ತೆಲಂಗಾಣದಲ್ಲಿ ರೂ. 3-4 ಕೋಟಿ ಮತ್ತು ಕರ್ನಾಟಕದಲ್ಲಿ ರೂ. 4-5 ಕೋಟಿ ಕೂಡ ಸಂಗ್ರಹ ಮಾಡಿದೆ ಎಂಬ ವರದಿಗಳು ಹೊರಬಿದ್ದಿವೆ. ಮೊದಲ ದಿನ ಮೊದಲ ಭಾಗಕ್ಕಿಂತ ಕೊಂಚ ಕಡಿಮೆ ಕಲೆಕ್ಷನ್ ಮಾಡಿದ್ದು, ಚಿತ್ರದ ಸ್ವಾಗತ ನೋಡಿದರೆ ಮುಂದಿನ ದಿನಗಳಲ್ಲಿ ರಾಕೆಟ್ ಗತಿಯಲ್ಲಿ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.