Ponniyin Selvan-2: ಐಮ್ಯಾಕ್ಸ್ ಕಾರ್ಪೊರೇಷನ್ ಮತ್ತು ಲೈಕಾ ಪ್ರೊಡಕ್ಷನ್ಸ್ ದಕ್ಷಿಣ ಭಾರತದ ಬಹುನಿರೀಕ್ಷಿತ ಚಿತ್ರ ‘ಪೊನ್ನಿಯಿನ್ ಸೆಲ್ವನ್-2’ ತಮಿಳು ಹಾಗೂ ಹಿಂದಿ ಆವೃತ್ತಿ ಐಮ್ಯಾಕ್ಸ್ ನಲ್ಲಿ ಬಿಡುಗಡೆಯಾಗುತ್ತಿರುವುದನ್ನು ಖಾತ್ರಿಪಡಿಸಿದೆ. ತಮಿಳು ಚಿತ್ರರಂಗದ ಬಿಗ್ ಪ್ರಾಜೆಕ್ಟ್ ಹಾಗೂ ಸ್ಟಾರ್ ತಾರಾಗಣವನ್ನೊಳಗೊಂಡ ‘ಪೊನ್ನಿಯಿನ್ ಸೆಲ್ವನ್-2’ ಏಪ್ರಿಲ್ 28ರಂದು ಬಿಡುಗಡೆಯಾಗುತ್ತಿದ್ದು, ಭಾರತದಾದ್ಯಂತ ಚಿತ್ರದ ತಮಿಳು ಹಾಗೂ ಹಿಂದಿ ಆವೃತ್ತಿ ಐಮ್ಯಾಕ್ಸ್ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Actress Private Video: ಬಾಲಿವುಡ್ ಖ್ಯಾತ ನಟಿ ಸಾರಾ ಬಾತ್ ರೂಂ ವಿಡಿಯೋ ಹರಿಬಿಟ್ಟ ಸಹೋದರಿ!!


ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್' ಸಿನಿಮಾ. ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ರಂತಹ ದಿಗ್ಗಜ ಕಲಾವಿದರ ಸಮಾಗಮವಿರುವ ಈ ಚಿತ್ರ ಪ್ರೇಕ್ಷಕ ಮಹಾಶಯರಿಂದಲೂ ಬಹುಪರಾಕ್ ಪಡೆದುಕೊಂಡಿತ್ತು. ಇದೀಗ ಸೀಕ್ವೆಲ್ 2 ಏಪ್ರಿಲ್ 28ರಂದು ಮನರಂಜನೆ ನೀಡಲು ಸಜ್ಜಾಗಿದೆ. ಪ್ಯಾನ್ ಇಂಡಿಯಾ ಚಿತ್ರದ ತಮಿಳು ಹಾಗೂ ಹಿಂದಿ ಸೀಕ್ವೆಲ್ ಐಮ್ಯಾಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ.


ಇದನ್ನೂ ಓದಿ: ಬ್ಯಾಂಕಾಕ್ ಇಂಟರ್ ನ್ಯಾಶನಲ್  ಫೆಸ್ಟಿವಲ್ ನಲ್ಲಿ ಎಲ್ಲರ ಮನಗೆದ್ದ ಕನ್ನಡ ಸಿನಿಮಾ


ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಪ್ರಖ್ಯಾತಿ ಗಳಿಸಿರುವ ಲೈಕಾ ಸ್ಟುಡಿಯೋ ತಮಿಳು ಚಿತ್ರರಂಗದ ಬಿಗ್ ಬಜೆಟ್ ಸಿನಿಮಾಗಳಾದ ‘ಐ’, ‘ರೋಬೋಟ್ 2.0’ ಹಾಗೂ ‘ಪೊನ್ನಿಯಿನ್ ಸೆಲ್ವನ್- 1’ ನಿರ್ಮಾಣ ಮಾಡಿದೆ. ಇದೀಗ ‘ಪೊನ್ನಿಯಿನ್ ಸೆಲ್ವನ್- 2’ ಕೂಡ ಇದೇ ಸಂಸ್ಥೆಯಡಿ ನಿರ್ಮಾಣವಾಗಿ ತೆರೆ ಕಾಣುತ್ತಿದೆ. ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ, ರವಿವರ್ಮನ್ ಛಾಯಾಗ್ರಹಣ, ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ. ಸಾಕಷ್ಟು ನಿರೀಕ್ಷೆ ಕ್ರಿಯೇಟ್ ಮಾಡಿರುವ 'ಪೊನ್ನಿಯಿನ್ ಸೆಲ್ವನ್- 2' ಏಪ್ರಿಲ್ 28ರಂದು ಬಿಡುಗಡೆಯಾಗುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.