#27YearsOfKichcha : ಕಿಚ್ಚನ ಸಿನಿ ಪಯಣಕ್ಕೆ 27 ವರ್ಷ, ಫ್ಯಾನ್ಸ್‌ಗೆ ಬಿಗ್‌ ಸರ್‌ಪ್ರೈಸ್?

Kiccha Sudeep : ಕಿಚ್ಚ ಸುದೀಪ್ ಅವರ ಜೀವನದಲ್ಲಿ ಜನವರಿ 31 ಬಹಳ ವಿಶೇಷವಾದ ದಿನ. ಇಂದಿಗೆ ಸುದೀಪ್ ಚಿತ್ರರಂಗಕ್ಕೆ ಸುದೀಪ್‌ ಕಾಲಿಟ್ಟು 27 ವರ್ಷಗಳಾಗಿವೆ. ನಟ ಕಿಚ್ಚ ಸುದೀಪ್ ಕೂಡ ಈ ದಿನವನ್ನು ಬಹಳ ಸಂತಸದಿಂದ ಸೆಲಿಬ್ರೆಟ್‌ ಮಾಡುತ್ತಾರೆ. 

Written by - Chetana Devarmani | Last Updated : Jan 31, 2023, 07:28 AM IST
  • ಕಿಚ್ಚನ ಸಿನಿ ಪಯಣಕ್ಕೆ 27 ವರ್ಷ
  • ಧನ್ಯವಾದ ತಿಳಿಸಿ ಟ್ವೀಟ್‌ ಮಾಡಿದ ಸುದೀಪ್‌
  • ಅಭಿಮಾಣಿಗಳಿಗೆ ಸಿಗಲಿದ್ಯಾ ಬಿಗ್‌ ಸರ್‌ಪ್ರೈಸ್?
#27YearsOfKichcha : ಕಿಚ್ಚನ ಸಿನಿ ಪಯಣಕ್ಕೆ 27 ವರ್ಷ, ಫ್ಯಾನ್ಸ್‌ಗೆ ಬಿಗ್‌ ಸರ್‌ಪ್ರೈಸ್? title=
#27YearsOfKichcha

27 Years Of Kichcha : ಕಿಚ್ಚ ಸುದೀಪ್ ಅವರ ಜೀವನದಲ್ಲಿ ಜನವರಿ 31 ಬಹಳ ವಿಶೇಷವಾದ ದಿನ. ಇಂದಿಗೆ ಸುದೀಪ್ ಚಿತ್ರರಂಗಕ್ಕೆ ಸುದೀಪ್‌ ಕಾಲಿಟ್ಟು 27 ವರ್ಷಗಳಾಗಿವೆ. 27 ವರ್ಷಗಳ ಹಿಂದೆ ಜನವರಿ 31 ರಂದು ಸುದೀಪ್ ತಮ್ಮ ಮೊದಲ ಚಿತ್ರಕ್ಕೆ ಬಣ್ಣ ಹಚ್ಚಿ, ಸಿನಿಲೋಕಕ್ಕೆ ಕಾಲಿಟ್ಟಿದ್ದರು. 

ನಟ ಕಿಚ್ಚ ಸುದೀಪ್ ಕೂಡ ಈ ದಿನವನ್ನು ಬಹಳ ಸಂತಸದಿಂದ ಸೆಲಿಬ್ರೆಟ್‌ ಮಾಡುತ್ತಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ, "ಪ್ರತಿ ಬಾರಿಯೂ ನನ್ನ ಜೊತೆಗೆ ನಿಂತಿದ್ದಕ್ಕೆ ನನ್ನ ಗೆಳೆಯರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನನ್ನು ನೀವೆಲ್ಲ ಆಶೀರ್ವದಿಸಿರುವಿರಿ ಮತ್ತು ತುಂಬಾ ಪ್ರೀತಿ ನಿಮ್ಮಿಂದ ಸಿಕ್ಕಿದೆ. ನನಗೆ ಅವಕಾಶಗಳನ್ನು ನೀಡಿದ್ದಕ್ಕಾಗಿ ಕೆಎಫ್‌ಐಗೆ ಧನ್ಯವಾದಗಳು. ನನ್ನನ್ನು ನಂಬಿದ್ದಕ್ಕಾಗಿ ಹಿಂದಿ, ತಮಿಳು ಮತ್ತು ತೆಲುಗು ಭ್ರಾತೃತ್ವಕ್ಕೆ ನಾನು ಧನ್ಯವಾದ ಹೇಳದಿದ್ದರೆ ಅದು ಅಪೂರ್ಣವಾಗಿರುತ್ತದೆ" ಎಂದು ಕಿಚ್ಚ ಬರೆದುಕೊಂಡಿದ್ದಾರೆ. 

ಇದನ್ನೂ ಓದಿ : CCL 2023 : ʼಸೆಲೆಬ್ರಿಟಿ ಕ್ರಿಕೆಟ್ ಲೀಗ್‌ʼ ಶುರು.. ಸುದೀಪ್‌ ʼಕರ್ನಾಟಕ ಬುಲ್ಡೋಜರ್ಸ್ʼ ತಂಡ ಸೇರಿ 8 ಟೀಂ ಭಾಗಿ

 

 

"ಇದು ಖಂಡಿತವಾಗಿಯೂ ಸ್ಮರಣೀಯ ಪ್ರಯಾಣವಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಈ 27 ವರ್ಷಗಳಲ್ಲಿ ನಾನು ಅನೇಕ ಅದ್ಭುತ ಪ್ರತಿಭೆಗಳೊಂದಿಗೆ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದೇನೆ. ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ತಲುಪಿಸಲು ನನಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಆ ಎಲ್ಲ ಅದ್ಭುತ ಪ್ರತಿಭೆಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.  

ಇನ್ನೂ ವಿಕ್ರಾಂತ್‌ ರೋಣ ಬಳಿಕ ಸುದೀಪ್‌ ಯಾವುದೇ ಸಿನಿಮಾ ಅನೌನ್ಸ್‌ ಮಾಡಿಲ್ಲ. ಸದ್ಯ ಕಬ್ಜ ಸಿನಿಮಾ ಮತ್ತು CCL ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರ ಮುಂದಿನ ಚಿತ್ರ ಯಾವುದೆಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇಂದು ಸುದೀಪ್‌ ಸಿನಿರಂಗ ಪ್ರವೇಶ ಮಾಡಿ 27 ವರ್ಷ ಪೂರೈಸಿದ ಹಿನ್ನೆಲೆ ಮುಂದಿನ ಸಿನಿಮಾ ಬಗ್ಗೆ ಏನಾದರೂ ಅಪ್‌ಡೇಟ್‌ ಮಾಡ್ತಾರಾ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. 

ಇದನ್ನೂ ಓದಿ : ಫೆ.4ಕ್ಕೆ "ಕಬ್ಜ" ಸಿನಿಮಾದ ಹಾಡು ರಿಲೀಸ್.. ಹೈದ್ರಾಬಾದ್ನಲ್ಲಿ ಅದ್ಧೂರಿ ಕಾರ್ಯಕ್ರಮ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News