Actress Private Video: ಬಾಲಿವುಡ್ ಖ್ಯಾತ ನಟಿ ಸಾರಾ ಬಾತ್ ರೂಂ ವಿಡಿಯೋ ಹರಿಬಿಟ್ಟ ಸಹೋದರಿ!!

Actress Private Video leaked: ಸಾರಾ ಖಾನ್ ಟಿವಿ ಇಂಡಸ್ಟ್ರಿಯಲ್ಲಿ ಚಿರಪರಿಚಿತ ಹೆಸರು. ಅವರು ತಮ್ಮ ನಟನಾ ವೃತ್ತಿಯನ್ನು 2007 ರಲ್ಲಿ ಟಿವಿ ಧಾರಾವಾಹಿ 'ಸಪ್ನಾ ಬಾಬುಲ್ ಕಾ ಬಿದಾಯಿ’ ಮೂಲಕ ಪ್ರಾರಂಭಿಸಿದರು. ಈ ಧಾರಾವಾಹಿಯಲ್ಲಿ ಸಾರಾ ಮಾಡಿದ ಪಾತ್ರ ಬಹಳ ಜನಪ್ರಿಯವಾಯಿತು.

Written by - Bhavishya Shetty | Last Updated : Jan 31, 2023, 07:34 PM IST
    • ಸಾರಾ ಖಾನ್ ಟಿವಿ ಇಂಡಸ್ಟ್ರಿಯಲ್ಲಿ ಚಿರಪರಿಚಿತ ಹೆಸರು.
    • 2007 ರಲ್ಲಿ ಟಿವಿ ಧಾರಾವಾಹಿ 'ಸಪ್ನಾ ಬಾಬುಲ್ ಕಾ ಬಿದಾಯಿ’ ಮೂಲಕ ಪ್ರಾರಂಭಿಸಿದರು
    • ಸಾರಾ ಅವರ ಸಂಬಂಧವು ಯಾವಾಗಲೂ ವಿವಾದಗಳಿಂದ ಕೂಡಿದೆ
Actress Private Video: ಬಾಲಿವುಡ್ ಖ್ಯಾತ ನಟಿ ಸಾರಾ ಬಾತ್ ರೂಂ ವಿಡಿಯೋ ಹರಿಬಿಟ್ಟ ಸಹೋದರಿ!! title=
Sara Khan

Actress Private Video leaked: ಅನೇಕ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಸಾರಾ ಖಾನ್ ಮತ್ತೊಮ್ಮೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಶೀಘ್ರದಲ್ಲೇ ಅವರು ಶಾಹಿದ್ ಕಾಜ್ಮಿ ಅವರ ಮುಂದಿನ ಚಿತ್ರ '1990' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಸಾರಾ ಅವರ ಸಂಬಂಧವು ಯಾವಾಗಲೂ ವಿವಾದಗಳಿಂದ ಕೂಡಿದೆ. ಜೊತೆಗೆ ಹೊಸ ವಿಚಾರವನ್ನು ರಿಯಾಲಿಟಿ ಶೋವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸಾರಾ ಖಾನ್ ಟಿವಿ ಇಂಡಸ್ಟ್ರಿಯಲ್ಲಿ ಚಿರಪರಿಚಿತ ಹೆಸರು. ಅವರು ತಮ್ಮ ನಟನಾ ವೃತ್ತಿಯನ್ನು 2007 ರಲ್ಲಿ ಟಿವಿ ಧಾರಾವಾಹಿ 'ಸಪ್ನಾ ಬಾಬುಲ್ ಕಾ ಬಿದಾಯಿ’ ಮೂಲಕ ಪ್ರಾರಂಭಿಸಿದರು. ಈ ಧಾರಾವಾಹಿಯಲ್ಲಿ ಸಾರಾ ಮಾಡಿದ ಪಾತ್ರ ಬಹಳ ಜನಪ್ರಿಯವಾಯಿತು.

ಇದನ್ನೂ ಓದಿ: Rashmika Mandanna : "ಅದರಲ್ಲಿ ತಪ್ಪೇನಿದೇ.." ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಹೀಗಂದ್ರು

ನಂತರ 2015 ರಲ್ಲಿ, ಸಾರಾ ಖಾನ್ ‘ಹಮಾರಿ ಅಧೂರಿ; ಕಹಾನಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ, ರಾಜ್‌ಕುಮಾರ್ ರಾವ್ ಮತ್ತು ವಿದ್ಯಾ ಬಾಲನ್ ಮುಖ್ಯ ಭೂಮಿಕೆಯಲ್ಲಿದ್ದರು. ಈ ಸಿನಿಮಾದಲ್ಲಿ ಸಾರಾ, ನೈಲಾ ಎಂಬ ಪಾತ್ರ ಮಾಡಿದ್ದರು. ಇದು ಜನರಿಗೆ ಇಷ್ಟವಾಗಿತ್ತು. ಕಳೆದ ವರ್ಷ, ಕಂಗನಾ ರಣಾವತ್ ಅವರ ಹಿಟ್ ರಿಯಾಲಿಟಿ ಶೋ 'ಲಾಕ್ ಅಪ್' ನಲ್ಲಿ ಕೂಡ ಸಾರಾ ಕಾಣಿಸಿಕೊಂಡಿದ್ದು, ಜನರಿಗೆ ಮತ್ತಷ್ಟು ಹತ್ತಿರವಾಗಿದ್ದರು.

ಇನ್ನು ಸಾರಾ ಖಾನ್ ಅವರ ವೈಯಕ್ತಿಕ ಜೀವನವು ಧಾರಾವಾಹಿಗಳು ಮತ್ತು ಚಲನಚಿತ್ರಗಳಿಗಿಂತ ಹೆಚ್ಚು ಮುಖ್ಯಾಂಶಗಳಲ್ಲಿ ಉಳಿದಿದೆ. ಲಾಕ್‌ಅಪ್‌ ಶೋ ನಲ್ಲಿ ಸಾರಾ ತಮ್ಮ ಜೀವನದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಟಿ ತನ್ನ ಮಾಜಿ ಪತಿ ಅಲಿ ಮರ್ಚೆಂಟ್ ಬಗ್ಗೆಯೂ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. “ಮದುವೆಯ ಸಮಯದಲ್ಲಿ ನನಗೆ ಅಷ್ಟು ಮನಸ್ಸು ಇರಲಿಲ್ಲ. ನಾನು ತುಂಬಾ ಚಿಕ್ಕವಳು. ಆದರೆ ಅವರಿಗೆ ಪ್ರಚಾರದ ಹಸಿವಿತ್ತು. ಜೊತೆಗೆ ವಿವಾದಗಳು ಬೇಕಾಗಿತ್ತು” ಎಂದು ಕಟುವಾಗಿ ಹೇಳಿದ್ದಾರೆ.  

ಸಾರಾ ಖಾನ್ 2010 ರಲ್ಲಿ ಅಲಿ ಮರ್ಚೆಂಟ್ ಎಂಬವರನ್ನು ವಿವಾಹವಾಗಿದ್ದರು. ಆದರೆ, ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರೂ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ ಸಂದರ್ಶನವೊಂದರಲ್ಲಿ, ರಾಷ್ಟ್ರೀಯ ಟಿವಿಯಲ್ಲಿ ಪ್ರಚಾರಕ್ಕಾಗಿ ಇಬ್ಬರೂ ಮದುವೆಯಾದರು ಎಂದು ಸಾರಾ ಹೇಳಿದ್ದಾರೆ.

ಅನೇಕ ಜನರು ಸಾರಾ ಅವರನ್ನು ಇಷ್ಟಪಡುತ್ತಿದ್ದರೆ, ಇನ್ನೂ ಕೆಲವರು ಅವರನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸುವುದಿಲ್ಲ. ಇವೆಲ್ಲದರ ಜೊತೆಗೆ ಸಾರಾ ಬಾತ್ ರೂಂಲ್ಲಿ ಸ್ನಾನ ಮಾಡುತ್ತಿರುವ ವೀಡಿಯೊ ಸೋರಿಕೆಯಾಗಿತ್ತು. ಈ ವಿಡಿಯೋ ಹರಿಬಿಟ್ಟಿದ್ದು, ಸಾರಾ ಸಹೋದರಿ.

ಇದನ್ನೂ ಓದಿ:   Pathaan : ಪಠಾಣ್‌ ಅಬ್ಬರ..! ವಿವಾದದ ನಡುವೆಯೂ 429 ಕೋಟಿ ಬಾಚಿದ ಕಿಂಗ್‌ ಖಾನ್‌

ಸಾರಾ ಅವರ ಖಾಸಗಿ ವಿಡಿಯೋ ಸೋರಿಕೆಯಾದಾಗ ಜನರು ಸಾರಾ ಅವರನ್ನು ಸಾಕಷ್ಟು ಟ್ರೋಲ್ ಮಾಡಿದ್ದರು. ನಂತರ, ಈ ವೀಡಿಯೊದ ಬಗ್ಗೆ ಸ್ಪಷ್ಟನೆ ನೀಡಿದ ಸಾರಾ, “ನನ್ನ ಸಹೋದರಿ  ನಗ್ನ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾಳೆ. ಆದರೆ ತಕ್ಷಣ ಈ ವಿಡಿಯೋವನ್ನೂ ಡಿಲೀಟ್ ಮಾಡಿದ್ದಳು. ಆದರೆ ಕೆಲವೇ ಸಮಯದಲ್ಲಿ ಈ ವಿಡಿಯೋ ವೈರಲ್ ಆಗಿದೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News