ಬೆಂಗಳೂರು:  ಎಲ್ಲೆಲ್ಲೂ ʼಜೇಮ್ಸ್‌ʼಜಪ ಶುರುವಾಗಿದೆ. ದೇಶಾದ್ಯಂತ ಅಪ್ಪು ಸಿನಿಮಾ ʼಜೇಮ್ಸ್‌ʼ ಹಬ್ಬದ ಸಂಭ್ರಮ ಹಬ್ಬಿದ್ದು, ಇನ್ನೇನು ಪುನೀತ್ ರಾಜ್‍ ಕುಮಾರ್ ಅವರ ಹುಟ್ಟುಹಬ್ಬಕ್ಕೆ ʼಜೇಮ್ಸ್‌ʼ ಸಿನಿಮಾ ರಿಲೀಸ್ ಆಗಲಿದೆ.ಅಂದರೆ ಮಾರ್ಚ್ 17ಕ್ಕೆ ಪವರ್ ಫುಲ್ ಸಿನಿಮಾ ʼಜೇಮ್ಸ್‌ʼ (James) ರಿಲೀಸ್ ಆಗಲಿದೆ.ಈ ಹೊತ್ತಲ್ಲೇ ಅಪ್ಪು ಅಭಿನಯದ ಕೊನೆಯ ಸಿನಿಮಾ ʼಜೇಮ್ಸ್‌ʼ ಚಿತ್ರಕ್ಕೆ ಸರ್ಟಿಫಿಕೇಟ್ ಸಿಕ್ಕಿದೆ.ಅದು ಯಾವುದು ಅನ್ನೋದನ್ನ ಮುಂದೆ ಹೇಳ್ತೀವಿ ಓದಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹಿರಣ್ಯ ಸಿನಿಮಾದಲ್ಲಿ ದಿವ್ಯಾ ಸುರೇಶ್...ಸ್ಪೆಷಲ್ ರೋಲ್ ನಲ್ಲಿ ಮಿಂಚಲಿದ್ದಾರೆ ಬಿಗ್ ಬಾಸ್ ಚೆಲುವೆ


ಅಪ್ಪು ಅಂದ್ರೆ ಸ್ಟೈಲ್, ಅಪ್ಪು ಅಂದ್ರೆ ಸ್ಮೈಲ್, ಅಪ್ಪು ಅಂದ್ರೆ ಎಲ್ಲವೂ.. ಹೀಗೆ ಸ್ಯಾಂಡಲ್ ವುಡ್ ಮಿಸ್ಟರ್ ಪರ್ಫೆಕ್ಟ್ ಇಂದು ನಮ್ಮೊಂದಿಗಿಲ್ಲ. ಆದರೆ ಸದ್ಯಕ್ಕೆ ಅವರ ಕೊನೆಯ ಚಿತ್ರ ಮಾತ್ರ ನಮ್ಮೊಂದಿಗೆ ಉಳಿದುಕೊಂಡಿದೆ.ಹೀಗೆ ಪವರ್ ಸ್ಟಾರ್ ಅಭಿನಯದ ಕೊನೇ ಚಿತ್ರ ಜೇಮ್ಸ್ ಬೆಂಕಿ ಚೆಂಡಿನಂತೆ ಸಿನಿ ಮಂದಿರಗಳಿಗೆ ಅಪ್ಪಳಿಸಲು ಸಜ್ಜಾಗಿದೆ.ಈ ಹೊತ್ತಲ್ಲೇ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.


ಇದನ್ನೂ ಓದಿ: ಗಾಯನ ಗಂಗೆ ಗಂಗೂಬಾಯಿ ಹಾನಗಲ್ ನೆನಪಿನಲ್ಲಿ....


ಅಪ್ಪು ಸಿನಿಮಾಗೆ U/A


ಹೌದು, ಕನ್ನಡಿಗರು ಕುಟುಂಬ ಸಮೇತರಾಗಿ ನೋಡುವ ಸಿನಿಮಾಗಳನ್ನೇ ಕೊನೆವರೆಗೂ ನೀಡಿದ್ದ ಕನ್ನಡಿಗರ ಪ್ರೀತಿಯ ಅಪ್ಪು,ಇದೀಗ ತಮ್ಮ ಕೊನೆಯ ಸಿನಿಮಾದಲ್ಲೂ ಅದೇ ಪ್ರೀತಿ ತೋರಿದ್ದಾರೆ. ನಮ್ಮ ನಿಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ (Puneeth Rajkumar) ಅಪ್ಪು ಅಭಿನಯದ ಕೊನೆಯ ಸಿನಿಮಾಗೆ U/A ಸರ್ಟಿಫಿಕೇಟ್ ಸಿಕ್ಕಿದೆ.


ಒಟ್ನಲ್ಲಿ ʼಜೇಮ್ಸ್‌ʼ ಚಿತ್ರ ಕನ್ನಡಿಗರ ಪಾಲಿಗೆ ಅವಿಸ್ಮರಣೀಯ. ಅಪ್ಪು ಬಿಟ್ಟು ಹೋದ ಕೊನೆಯ ಚಿತ್ರ. ಹೀಗಾಗಿ ಇಡೀ ದೇಶವೇ ʼಜೇಮ್ಸ್‌ʼ ಚಿತ್ರಕ್ಕಾಗಿ ಕಾದು ಕುಳಿತಿದ್ದು, ಇನ್ನೇನು ಕೆಲವೇ ದಿನದಲ್ಲಿ ʼಜೇಮ್ಸ್‌ʼ ರಿಲೀಸ್‌ ಆಗಲಿದೆ. ಹೀಗಾಗಿ ಕರುನಾಡಲ್ಲಿ ಈ ಬಾರಿ ದೀಪಾವಳಿ ಮಾರ್ಚ್‌ ತಿಂಗಳಲ್ಲೇ ಬರೋದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.