ಬೆಂಗಳೂರು: ಪ್ರತಿಷ್ಠಿತ 'ಹೊಂಬಾಳೆ ಫಿಲ್ಮ್ಸ್‌' ಬ್ಯಾನರ್‌ನಲ್ಲಿ ಸೆಟ್ಟೇರಲಿರುವ ಹೊಸ ಸಿನಿಮಾ ಯಾವುದು ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಟಾಲಿವುಡ್‌ ನಟ ಪ್ರಭಾಸ್‌ ಜೊತೆ ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವುದಾಗಿ ಇಂದು ಅನೌನ್ಸ್‌ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಕೆಜಿಎಫ್ ಚಾಪ್ಟರ್-1 ಮತ್ತು ಕೆಜಿಎಫ್-2(KGF-2) ಚಿತ್ರಗಳು ಭಾರತ ಸಿನಿಮಾ ರಂಗದಲ್ಲಿ ಸಖತ್ ಟ್ರೆಂಡ್ ಸೆಟ್ ಮಾಡಿವೆ. ಈ ಸಿನಿಮಾಗಳ ನಿರ್ದೇಶನ ಮತ್ತು ಮೇಕಿಂಗ್ ನೋಡಿದ ಎಲ್ಲರೂ ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಸ್ಟನ್ ಆಗಿದ್ದರು. ಕೆಜಿಎಫ್-2 ಸಿನಿಮಾ ಮುಗಿದ ಬಳಿಕ ಪ್ರಶಾಂತ್ ನೀಲ್ ಅವರು ಯಾವ ಸಿನಿಮಾ ಮಾಡಲಿದ್ದಾರೆ ಎಂದು ದೇಶಾದ್ಯಂತ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು.


Pregnant ಪತ್ನಿ Anushka Sharmaಳಿಂದ ಶಿರ್ಷಾಸನ ಮಾಡಿಸಿದ ಪತಿ Virat Kohli, PIC ವಿಕ್ಷೀಸಿ


ಈಗ ಈ ಕೂತೂಹಲಕ್ಕೆ ತೆರ ಬಿದ್ದಿದ್ದು, ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಪ್ಯಾನ್ ಇಂಡಿಯಾ ಮೂವಿ ಘೋಷಣೆಯಾಗಿದೆ. ಈ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹೀರೋ ಆಗಿ ಅಭಿನಯಿಸಲಿದ್ದಾರೆ. ಜೊತೆಗೆ ನೀಲ್ ಪ್ರಭಾಸ್ ಜೋಡಿಯ ಮೊದಲ ಸಿನಿಮಾಗೆ ಸಲಾರ್ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ಕೆಜಿಎಫ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಚಿತ್ರ ಸಿದ್ಧವಾಗಲಿದೆ.


ಮನೆ ಸಿಬ್ಬಂದಿಯೊಂದಿಗೆ ಜಬರ್ದಸ್ತ್ ಸ್ಟೆಪ್ಸ್ ಹಾಕಿದ Elli Avrram, Video Viral


ಅದರಂತೆ ಇಂದು ಎರಡು ಗಂಟೆ 9 ನಿಮಿಷಕ್ಕೆ ಯುಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಎಕೆ-47 ಗನ್ ಹಿಡಿದುಕೊಂಡು ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಬಿಡುಗಡೆ ಮಾಡಿದೆ. ಜೊತೆಗೆ ಅತ್ಯಂತ ಹಿಂಸಾತ್ಮಕ ಮನುಷ್ಯ, ಆತ ಒಬ್ಬನೇ, ಆದರೆ ಆತ ಬಹಳ ವೈಲೆಂಟ್ ಎಂದು ಬರೆದುಕೊಂಡಿದೆ. ಜೊತೆಗೆ ನಮ್ಮ ಮುಂದಿನ ಸಿನಿಮಾ ಇದೆ. ಇದು ಒಂದು ಆ್ಯಕ್ಷನ್ ಚಿತ್ರ ಎಂದು ತಿಳಿಸಿದೆ.


'Adipurush'ನಿಂದ 'Radhe Shyam' ಚಿತ್ರದವರೆಗೆ Prabhas ಮೇಲಾಗಿರುವ ಹೂಡಿಕೆ ಎಷ್ಟು ಗೊತ್ತಾ?