'Adipurush'ನಿಂದ 'Radhe Shyam' ಚಿತ್ರದವರೆಗೆ Prabhas ಮೇಲಾಗಿರುವ ಹೂಡಿಕೆ ಎಷ್ಟು ಗೊತ್ತಾ?

ನಟ ಪ್ರಭಾಸ್ ಅವರನ್ನು ಚಿತ್ರರಂಗದ ಬಾಹುಬಲಿ ಎಂದು ಕರೆಯಲಾಗುತ್ತದೆ. ಅವರು ದಕ್ಷಿಣ ಚಿತ್ರರಂಗದ ಅತ್ಯಂತ ಪ್ರಸಿದ್ಧ ಮತ್ತು ಕಾರ್ಯನಿರತ ನಟರಲ್ಲಿ ಒಬ್ಬರು. ಫಿಲ್ಮ್ ಪ್ರಾಜೆಕ್ಟ್ ಗಳ ವಿಷಯ ಬಂದಾಗಲೂ ಪ್ರಭಾಸ್ ಗೆ ಸರಿಸಾಟಿ ಇಲ್ಲ. ಅವರು ಈ ಕಾಲದ ಅತ್ಯಂತ ಕಾರ್ಯನಿರತ ಖ್ಯಾತನಾಮರಲ್ಲಿ ಒಬ್ಬರು. ಪ್ರಭಾಸ್ ಅನೇಕ ದೊಡ್ಡ ಬಜೆಟ್ ಚಲನಚಿತ್ರಗಳನ್ನು ಹೊಂದಿದ್ದಾರೆ.

Last Updated : Nov 28, 2020, 07:57 PM IST
  • ನಟ ಪ್ರಭಾಸ್ ಅವರನ್ನು ಚಿತ್ರರಂಗದ ಬಾಹುಬಲಿ ಎಂದು ಕರೆಯಲಾಗುತ್ತದೆ.
  • ಅವರು ದಕ್ಷಿಣ ಚಿತ್ರರಂಗದ ಅತ್ಯಂತ ಪ್ರಸಿದ್ಧ ಮತ್ತು ಕಾರ್ಯನಿರತ ನಟರಲ್ಲಿ ಒಬ್ಬರು.
  • ಫಿಲ್ಮ್ ಪ್ರಾಜೆಕ್ಟ್ ಗಳ ವಿಷಯ ಬಂದಾಗಲೂ ಪ್ರಭಾಸ್ ಗೆ ಸರಿಸಾಟಿ ಇಲ್ಲ.
'Adipurush'ನಿಂದ 'Radhe Shyam' ಚಿತ್ರದವರೆಗೆ Prabhas ಮೇಲಾಗಿರುವ ಹೂಡಿಕೆ ಎಷ್ಟು ಗೊತ್ತಾ? title=

ನವದೆಹಲಿ: ನಟ ಪ್ರಭಾಸ್ ಅವರನ್ನು ಚಿತ್ರರಂಗದ ಬಾಹುಬಲಿ ಎಂದು ಕರೆಯಲಾಗುತ್ತದೆ. ಅವರು ದಕ್ಷಿಣ ಚಿತ್ರರಂಗದ ಅತ್ಯಂತ ಪ್ರಸಿದ್ಧ ಮತ್ತು ಕಾರ್ಯನಿರತ ನಟರಲ್ಲಿ ಒಬ್ಬರು. ಫಿಲ್ಮ್ ಪ್ರಾಜೆಕ್ಟ್ ಗಳ ವಿಷಯ ಬಂದಾಗಲೂ ಪ್ರಭಾಸ್ ಗೆ ಸರಿಸಾಟಿ ಇಲ್ಲ. ಅವರು ಈ ಕಾಲದ ಅತ್ಯಂತ ಕಾರ್ಯನಿರತ ಖ್ಯಾತನಾಮರಲ್ಲಿ ಒಬ್ಬರು. ಪ್ರಭಾಸ್ ಅನೇಕ ದೊಡ್ಡ ಬಜೆಟ್ ಚಲನಚಿತ್ರಗಳನ್ನು ಹೊಂದಿದ್ದಾರೆ.

ಆದಿಪುರಶ್, ರಾಧೆ ಶ್ಯಾಮ್ ಮತ್ತು ನಿರ್ದೇಶಕ ನಾಗ್ ಅಶ್ವಿನ್ ಅವರ ವೈಜ್ಞಾನಿಕ ಕಾಲ್ಪನಿಕ ಚಿತ್ರದಲ್ಲಿ ಪ್ರಭಾಸ್ (Prabhas) ಕೆಲಸ ಮಾಡುತ್ತಿದ್ದಾರೆ. ಸುದ್ದಿಗಳ ಪ್ರಕಾರ, ಪ್ರಭಾಸ್ ಅವರ ಮುಂಬರುವ ಪ್ರಾಜೆಕ್ಟ್ಸ್ ಗಳ ಒಟ್ಟು ಮೌಲ್ಯ ಸುಮಾರು 1000 ಕೋಟಿಗಿಂತ ಹೆಚ್ಚು ಎಂದು ಅಂದಾಜಿಸಲಾಗುತ್ತಿದೆ. ಹೌದು, ಪ್ರಭಾಸ್ ಮೇಲೆ ಉದ್ಯಮ ಮಾಡಿರುವ ಒಟ್ಟು ಹೂಡಿಕೆ 1000 ಕೋಟಿ ರೂ.ಗಿಂತಲೂ ಹೆಚ್ಚಾಗಿದೆ.

ಇದನ್ನು ಓದಿ-Video: ಯುವರತ್ನ'ನ ಪವರ್ ಫುಲ್ ಸ್ಟೆಪ್ ಗೆ ಪುನೀತ್ ರಾಜಕುಮಾರ್ ಅಭಿಮಾನಿಗಳು ಫಿದಾ

ಪ್ರಭಾಸ್ ನಟಿ ಪೂಜಾ ಹೆಗ್ಡೆ ಅವರೊಂದಿಗೆ ರಾಧೆ ಶ್ಯಾಮ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು 250 ಕೋಟಿ ರೂ.ಗಳ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿರುವ ಪೀರಿಯಡ್ ಡ್ರಾಮಾ ಮತ್ತು ರೋಮ್ಯಾನ್ಸ್ ಚಿತ್ರವಾಗಿದೆ. ಚಿತ್ರದ ಪೋಸ್ಟರ್‌ಗಳು ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾರ್ವಜನಿಕರಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಧಾ ಕೃಷ್ಣ ಕುಮಾರ್ ಅವರು ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಆದಿಪುರುಶ್ ಚಿತ್ರ ಪ್ರಭಾಸ್ ಅವರ ಎರಡನೆಯ ದೊಡ್ಡ ಫಿಲ್ಮ್ ಪ್ರಾಜೆಕ್ಟ್ ಆಗಿದೆ. ನಿರ್ದೇಶಕ ಓಂ ರೌತ್ ಅವರ ಈ ಚಿತ್ರವನ್ನು ರಾಮಾಯಣದ ಮಹಾಕಾವ್ಯದ ಮೇಲೆ ನಿರ್ಮಿಸಲಾಗುತ್ತಿದೆ. ಇದರಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಹಾಗೂ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸುದ್ದಿಯ ಪ್ರಕಾರ, ಈ ಚಿತ್ರದ ಬಜೆಟ್ 450 ಕೋಟಿ ರೂ. ಈ ಚಿತ್ರವು ಆಗಸ್ಟ್ 11, 2022 ರಂದು ಬಿಡುಗಡೆಯಾಗಲಿದೆ.

ಇದನ್ನು ಓದಿ- ಪವರ್ ಸ್ಟಾರ್ ಫ್ಯಾನ್ಸ್ ಗೆ ' ಗುಡ್ ನ್ಯೂಸ್': ಆರಂಭವಾಯ್ತು 'ಯುವರತ್ನ'ನ ಆರ್ಭಟ!

ಬಾಹುಬಲಿ ಪ್ರಭಾಸ್ ದೀಪಿಕಾ ಪಡುಕೋಣೆ ಅವರೊಂದಿಗೂ ಕೂಡ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ನಾಗ್ ಅಶ್ವಿನ್ ಅವರ ಈ ವೈಜ್ಞಾನಿಕ ಫಿಕ್ಷನ್ ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ, ಆದರೆ ಇದು ಸಾಕಷ್ಟು ಸದ್ದು ಮಾಡುತ್ತಿದೆ. ಹೆಸರಿಡದ ಈ ಚಿತ್ರದ ಬಜೆಟ್ 300 ಕೋಟಿ ಎಂದು ವರದಿಯಾಗಿದೆ. ಇದು ತೆಲುಗು ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆ ಅವರ ಚೊಚ್ಚಲ ಚಿತ್ರ ಕೂಡ ಹೌದು.

ಈ ಮೂರು ದೊಡ್ಡ ಪ್ರಾಜೆಕ್ಟ್ಸ್ ಗಳನ್ನೂ ಹೊರತುಪಡಿಸಿ ಪ್ರಭಾಸ್ ತೆಲುಗು ಚಲನಚಿತ್ರ ನಿರ್ಮಾಪಕ ಕೊರಟಾಲ ಶಿವ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇವರಿಬ್ಬರ ಹೊಸ ಪ್ರಾಜೆಕ್ಟ್ ಪ್ರಾರಂಭವಾಗಲು ಸುಮಾರು ಎರಡು ವರ್ಷಗಳು ಬೇಕಾಗುತ್ತದೆ ಎಂದು ವರದಿಯಾಗಿದೆ. ಈ ಹಿಂದೆ ಪ್ರಭಾಸ್ ಮತ್ತು ಶಿವ ತೆಲುಗು ಆಕ್ಷನ್ ಡ್ರಾಮಾ ಚಿತ್ರ 'ಮಿರ್ಚಿ'ಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಇದನ್ನು ಓದಿ- ಏಕಾಏಕಿ Twitter ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಟ್ರೆಂಡಿಂಗ್ ಆಗಿದ್ದೇಕೆ?

ಪ್ರಸ್ತುತ ಪ್ರಭಾಸ್ ರಾಧೇ ಶಾಮ್ ಚಿತ್ರದ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. ಈ ಚಿತ್ರದಲ್ಲಿ ಅವರು ವಿಕ್ರಮಾದಿತ್ಯ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡತಿ ಪೂಜಾ ಹೆಗ್ಡೆ ಈ ಚಿತ್ರದಲ್ಲಿ ಮ್ಯೂಸಿಕ್ ಟೀಚರ್ ಪಾತ್ರ ನಿರ್ವಹಿಸುತ್ತಿದ್ದಾರೆ. ರಾಧೇ ಶಾಮ್ ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Trending News