Prabhas Siddharth Anand : ಇಷ್ಟು ದಿನ ಆದಿಪುರಷ ಸಿನಿಮಾ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಪ್ರಭಾಸ್‌ ಇದೀಗ ಮತ್ತೇ ಬಾಲಿವುಡ್‌ ಅಂಗಳದಿಂದ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ʼಪಠಾಣ್‌ʼ ನಿರ್ದೇಶಕ ಸಿದ್ದಾರ್ಥ್ ಆನಂದ್ ಮತ್ತು ಪ್ರಭಾಸ್ ಆದಿಪುರುಷ ಚಿತ್ರದ ಚಿತ್ರೀಕರಣ ಮುಗಿದಿದೆ. ಆದರೆ, ಇದೀಗ ಮೈತ್ರಿ ಮೂವಿಸ್‌ ಜೊತೆ ಹೊಸ ಸಿನಿಮಾ ಮಾಡಲು ಡಾರ್ಲಿಂಗ್‌ ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಆದಿಪುರುಷ, ಸಲಾರ್‌, ಪ್ರಾಜೆಕ್ಟ್‌ ಕೆ, ಸೇರಿದಂತೆ ಪ್ರಭಾಸ್‌ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಅಲ್ಲದೆ, ಕಳಪೆ ಗ್ರಾಫಿಕ್ಸ್‌ ಮೂಲಕ ಟೀಕೆಗೆ ಗುರಿಯಾಗಿದ್ದ ಆದಿಪುರಷ ಸಿನಿಮಾ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಮುಂದಾಗಿದೆ. ಈ ವರ್ಷ ಆದಿಪುರುಷ, ಪ್ರಾಜೆಕ್ಟ್ ಕೆ ಸಿನಿಮಾ ತೆರೆ ಮೇಲೆ ಬರುವ ಸಾಧ್ಯತೆಗಳಿವೆ. ಈ ಎರಡು ಚಿತ್ರಗಳ ಹೊರತಾಗಿ ಸಲಾರ್ ಕೂಡ ಈ ಸಾಲಿನಲ್ಲಿದೆ. ಇದಲ್ಲದೇ ಮಾರುತಿ ನಿರ್ದೇಶನದಲ್ಲಿ ಮತ್ತೊಂದು ಚಿತ್ರವೂ ಸಿದ್ಧವಾಗುತ್ತಿದೆ. ಇದೆಲ್ಲ ಮುಗಿದ ನಂತರ ʼಸ್ಪಿರಿಟ್ʼ ಸಿನಿಮಾ ಶುರುವಾಗುವ ಲಕ್ಷಣ ಕಾಣುತ್ತಿದೆ.


ಇದನ್ನೂ ಓದಿ: Poonam Pandey : ಪೂನಂ ಅವತಾರ ನೋಡಿ ʼಚಡ್ಡಿ ಹಾಕಿದಿ ಏನಮ್ಮಾʼ ಎಂದ ನೆಟ್ಟಿಗರು..! ವಿಡಿಯೋ ನೋಡಿ


ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಭಾಸ್ ಅವರ ಮುಂಬರುವ ಚಿತ್ರ ʼಸ್ಪಿರಿಟ್ʼ ಬ್ಯಾಕ್ ಡ್ರಾಪ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ತಿಳಿದಿದೆ. ಇದರಲ್ಲಿ ಪ್ರಭಾಸ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಪಕ್ಕಕ್ಕಿಟ್ಟು.. ಈಗ ಪ್ರಭಾಸ್ ಅವರ ಹೊಸ ಪ್ರಾಜೆಕ್ಟ್‌ನ ಅಪ್‌ಡೇಟ್‌ ಬಂದಿದೆ. ಮೈತ್ರಿ ಮೂವೀಸ್ ಯಾವಾಗಲೂ ಪ್ರಭಾಸ್ ಜೊತೆ ಸಿನಿಮಾ ಮಾಡಲು ಪ್ರಯತ್ನಿಸುತ್ತಿರುತ್ತದೆ. ಇದೀಗ ಪ್ರಭಾಸ್ ಅವರಿಗೆ ಸೂಕ್ತವಾದ ಕಥೆ ಮತ್ತು ನಿರ್ದೇಶಕರು ಸಿಕ್ಕಿದ್ದಾರಂತೆ. ಸಿದ್ಧಾರ್ಥ್ ಆನಂದ್ ʼವಾರ್ʼ ಚಿತ್ರದ ಮೂಲಕ ಬಾಲಿವುಡ್ ಬಾಕ್ಸ್ ಆಫೀಸ್ ಅನ್ನು ಅಲ್ಲಾಡಿಸಿದರು.


ಈಗ ಶಾರುಖ್ ಖಾನ್ ಜೊತೆ ಪಠಾಣ್ ಎಂಬ ಸಿನಿಮಾ ಮಾಡಿದ್ದಾರೆ. ಚಿತ್ರ ಜನವರಿ 25 ರಂದು ಬಿಡುಗಡೆಯಾಗಲಿದೆ. ಆದರೆ ಈಗ ಸಿದ್ಧಾರ್ಥ್ ಆನಂದ್ ಪ್ರಭಾಸ್ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವೀಸ್ ನಿರ್ಮಿಸುತ್ತಿದೆ. ಈ ಕುರಿತು ಮೈತ್ರಿ ಮೂವೀಸ್ ಮಾಹಿತಿ ತಿಳಿಸಿದೆ. ವೀರಸಿಂಹ ರೆಡ್ಡಿ ಪ್ರಚಾರದ ವೇಳೆ ಮೈತ್ರಿ ನಿರ್ಮಾಪಕರು ಪ್ರಭಾಸ್‌, ಸಿದ್ಧಾರ್ಥ್ ಆನಂದ್ ಚಿತ್ರದ ಕುರಿತು ಖಚಿತಪಡಿಸಿದ್ದಾರೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಯೋಜಿಸಲಾಗಿದೆಯಂತೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.