Karavali Promo:ಸ್ಯಾಂಡಲ್‌ವುಡ್‌ನಲ್ಲಿ ಕಾಂತಾರ ಸಿನಿಮಾ ಬಳಿಕ ಕರಾವಳಿ ಭಾಗದ ಕಥೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದ್ದು, ಕನ್ನಡ ಫಿಲ್ಮ್ ಮೇಕರ್ಸ್ ಅಲ್ಲಿನ ಕಥೆಗಳನ್ನು ಹುಡುಕಿ ಹುಡುಕಿ ತೆಗೆಯುತ್ತಿದ್ದಾರೆ. ಮತ್ತೊಂದು ದಕ್ಷಿಣ ಕನ್ನಡ ಭಾಗದ ಕಥೆಯನ್ನೇ ಪ್ರೇಕ್ಷಕರಿಗೆ ಹೇಳುವುದಕ್ಕೆ  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಚಿತ್ರತಂಡ ಹೊರಟಿದ್ದು, ನಿರ್ದೇಶಕ ಗುರುದತ್ ಗಾಣಿಗ ಜೋಡಿಯ ಚಿತ್ರಕ್ಕೆ 'ಕರಾವಳಿ' ಎಂದು ಟೈಟಲ್ ಇಟ್ಟಿದ್ದಾರೆ. ಈ ಸಿನಿಮಾದ ಟೈಟಲ್ ಟೀಸರ್ ಸದ್ಯ ಸಿನಿಪ್ರಿಯರನ್ನು ಸೆಳೆಯುತ್ತಿದ್ದು, ಎಮ್ಮೆ ಏರಿ ಬರುವ ಪ್ರಜ್ವಲ್ ದೇವರಾಜ್ ಪಾತ್ರ ಪ್ರೇಕ್ಷಕರನ್ನು ಈಗಾಗಲೇ ಕಾಡುವುದಕ್ಕೆ ಶುರು ಮಾಡಿದೆ. 


COMMERCIAL BREAK
SCROLL TO CONTINUE READING

ದಕ್ಷಿಣ ಕನ್ನಡ ಭಾಗದ ಕಥೆಯೇ ಆಗಿರುವುದರಿಂದ 'ಕರಾವಳಿ'ಚಿತ್ರದ ಟೀಸರನ್ನು ಮಂಗಳೂರಿನಲ್ಲಿಯೇ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಇದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ 40ನೇ ಸಿನಿಮಾವಾಗಿದ್ದು, ಗುರುದತ್ ಗಾಣಿಗ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಪ್ರಜ್ವಲ್ ದೇವರಾಜ್ ಹಾಗೂ ಗುರುದತ್ ಗಾಣಿಗ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಚೊಚ್ಚಲ ಸಿನಿಮಾ. ಈ ಹಿಂದೆ ರೆಬೆಲ್‌ಸ್ಟಾರ್ ಅಂಬರೀಶ್ ನಟಿಸಿದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನ ಮಾಡಿದ್ದಾರೆ.


ಇದನ್ನೂ ಓದಿ: ಸಲಾರ್‌ 2ನೇ ಟ್ರೇಲರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್: ಕ್ರೇಜ್ ದುಪ್ಪಟ್ಟು ಮಾಡಲು ರೆಡಿಯಾಗುತ್ತಿದೆ ಹೊಸ ಝಲಕ್!


'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಂತೆ 'ಕರಾವಳಿ' ಟೀಸರ್ ಕೂಡ ಅಷ್ಟೇ ಕುತೂಹಲಕಾರಿಯಾಗಿದ್ದು, ಒಂದು ಕಡೆ ತಾಯಿ ಮಗುವಿಗೆ ಜನ್ಮ ಕೊಡುವ ದೃಶ್ಯವಿದೆ. ಅದೇ ಇನ್ನೊಂದು ಕಡೆ ಎಮ್ಮೆ ಕೂಡ ತನ್ನ ಮಗುವಿಗೆ ಜನ್ಮ ಕೊಡುವ ದೃಶ್ಯ. ಈ ಎರಡೂ ವಿಭಿನ್ನ ದೃಶ್ಯಗಳು ಒಂದೇ ಕಾಲಘಟ್ಟದಲ್ಲಿ ನಡೆಯುತ್ತವೆ. ಅದ್ಯಾಕೆ ಈ ದೃಶ್ಯ? ಈ ದೃಶ್ಯದ ಮೂಲಕ ಅದೇನು ಹೇಳುವುದಕ್ಕೆ ಹೊರಟಿದ್ದಾರೆ? ಯಕ್ಷಗಾನದ ಹಿನ್ನೆಲೆ ಧ್ವನಿ ಎಲ್ಲವೂ ಕುತೂಹಲವನ್ನು ಕೆರಳಿಸುತ್ತಿದೆ.ಟೀಸರ್ ಕೊನೆಯಲ್ಲಿ ಪ್ರಜ್ಚಲ್ ದೇವರಾಜ್ ಎಮ್ಮೆ ಮೇಲೆ ಏರಿ ಬಂದು ತಕ್ಷಣವೇ ಬೇರೊಂದು ವೇಷಕ್ಕೆ ಬದಲಾಗುವ ದೃಶ್ಯ ಮೈಝುಂ ಎನಿಸುತ್ತದೆ.


ಸಿನಿಮಾದ ಟೈಟಲ್ ಕರಾವಳಿ ಆಗಿರುವುದರಿಂದ ಆ ಭಾಗದ ಸಂಸ್ಕೃತಿ, ದೈವ, ಯಕ್ಷಗಾನ ಮುಖ್ಯವಾಗಿ ಕಂಬಳ ಸೇರಿದಂತೆ ಎಲ್ಲವನ್ನು ಈ ಸಿನಿಮಾದಲ್ಲಿ ನೋಡುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದು, ಅಭಿಮನ್ಯೂ ಸದಾನಂದನ್ ಕ್ಯಾಮರಾವರ್ಕ್ ಇದೆ. ಪ್ರಜ್ವಲ್ ದೇವರಾಜ್  ವೃತ್ತಿ ಬದುಕಿಗೆ ಸಿಕ್ಕಿರೋ ವಿಭಿನ್ನ ಪಾತ್ರವಾಗಿದ್ದು, ಈ ನಟನ 40ನೇ ಸಿನಿಮಾ ತುಂಬಾ ವಿಶೇಷ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ.'ಕರಾವಳಿ'ಚಿತ್ರ ಈ ತಿಂಗಳ ಕೊನೆಯಲ್ಲಿ, ಇಲ್ಲವೇ ಹೊಸ ವರ್ಷದ ಪ್ರಾರಂಭದಲ್ಲಿ ಸೆಟ್ಟೀಗೇರಲಿದ್ದು, ಕರಾವಳಿ ಭಾಗದ ಕಥೆಯಾಗಿದ್ದರಿಂದ ಮಂಗಳೂರು ಸುತ್ತಮುತ್ತವೇ ಶೂಟಿಂಗ್ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.