Akshay Kumar trolls : ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರ ಮುಂಬರುವ ʼವೇದಾತ್ ಮರಾಠೆ ವೀರ್ ದೌಡ್ಲೆ ಸಾತ್‌ʼ ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಲುಕ್‌ ರಿಲೀಸ್‌ ಮಾಡಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಕಿಲಾಡಿ ಅಕ್ಷಯ್‌ ಕುಮಾರ್ ಕಾಣಿಸಿಕೊಂಡಿದ್ದಾರೆ. ಫಸ್ಟ್‌ ಲುಕ್‌ ಬಿಡುಗಡೆಯಾದಾಗಿನಿಂದ ಅಕ್ಕಿ ಮೇಲೆ ಟ್ರೋಲ್‌ಗಳ ಮಳೆ ಸುರಿಯತ್ತಿದೆ. ಈಗ ನಟ ಪ್ರಕಾಶ್ ರಾಜ್ ಕೂಡಾ ಅಕ್ಷಯ್ ಕುಮಾರ್‌ ಕಾಲೆಳೆದಿದ್ದಾರೆ.


COMMERCIAL BREAK
SCROLL TO CONTINUE READING

ಅಕ್ಷಯ್ ಕುಮಾರ್ ಅವರ ಛತ್ರಪತಿ ಶಿವಾಜಿ ಮಹಾರಾಜರ ಲುಕ್‌ನಲ್ಲಿರವ ವಿಡಿಯೋ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಶಿವಾಜಿ ಮಾಹಾರಾಜ ಪ್ರವೇಶ ಮಾಡುವ ವೇಳೆ ಅವರ ಹಿಂಬದಿಯಲ್ಲಿ ದೀಪಗಳ ಗೊಂಚಲು ಕಾಣಿಸುತ್ತದೆ. ಅದನ್ನು ಸ್ಪಷ್ಟವಾಗಿ ನೋಡಿದಾಗ ಅದು ವಿದ್ಯುತ್‌ ದೀಪಗಳು ಎಂದು ತಿಳಿದು ಬರುತ್ತದೆ. ಸದ್ಯ ಇದೇ ವಿಚಾರ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ, ಟ್ರೋಲ್‌ಗಳಿಗೆ ಆಹಾರವಾಗಿದೆ.


ಇದನ್ನೂ ಓದಿ: Danube Home : ಬೆಂಗಳೂರಿನಲ್ಲಿ 'ಡ್ಯಾನ್ಯೂಬ್ ಹೋಮ್' ಶೋ ರೂಮ್ ಉದ್ಘಾಟಿಸಿದ ನಟಿ ಶ್ರೀನಿಧಿ ಶೆಟ್ಟಿ


ವಿದ್ಯುತ್‌ ದೀಪಗಳನ್ನು ನೋಡಿದ ನೆಟ್ಟಿಗರು, 1630 ರಿಂದ 1680 ರವರೆಗೆ ಆಳಿದ ಛತ್ರಪತಿ ಶಿವಾಜಿ ಮಹಾರಾಜರ ಅವಧಿಯ ನಂತರ ಬಲ್ಬ್‌ಗಳನ್ನು ಕಂಡುಹಿಡಿಯಲಾಗಿದೆ ಇದೇ ವಿಚಾರವನ್ನು ಇಟ್ಟುಕೊಂಡು ಸಖತ್‌ ಟ್ರೋಲ್‌ ಮಾಡುತ್ತಿದ್ದಾರೆ. ವಿದ್ಯುತ್‌ ಬಲ್ಬ್‌ಗಳನ್ನು ಗಮನಿಸಿರುವ ನೆಟಿಜನ್‌ಗಳು ತಕ್ಷಣ, ಅಕ್ಷಯ್ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಅಲ್ಲದೆ, ಈ ರೀತಿಯಾಗಿ ಮರಾಠಾ ರಾಜನ ಚರಿತ್ರೆಯನ್ನು ಅವಮಾನಿಸಬೇಡಿ ಎಂದು ವಿನಂತಿಸಿದ್ದಾರೆ.


ಫಿಫಾ ವಿಶ್ವಕಪ್ ಪುಟ್ಬಾಲ್ ನಲ್ಲಿ ಅಪ್ಪು ದರ್ಶನ...!


ಮೆಮ್‌ನಲ್ಲಿ ಮೋದಿ ಅವರು ಅಕ್ಷಯ್ ಅವರನ್ನು ನೋಡಬಹುದು. ಮೋದಿ "ಶಿವಾಜಿ ಮಹಾರಾಜ್ ಕೆ ಟೈಮ್ ಎಲೆಕ್ಟ್ರಿಕ್ ಬಲ್ಬ್ ಕೈಸೆ ಆ ಗಯೇ ಗುಟ್ಕಾ ಖೋರ್?" ಅದಕ್ಕೆ ಅಕ್ಷಯ್, "ವೈಸೆ ಹೈ ಜೈಸೆ ಆಪ್ಕೆ ಪಾಸ್ 1988 ಮೇ ಡಿಜಿಟಲ್ ಕ್ಯಾಮೆರಾ ಆ ಗಯಾ ಥಾ" ಎಂದು ಉತ್ತರಿಸುತ್ತಾನೆ. ಇದೀಗ ಪ್ರಕಾಶ್‌ ಅವರು ಹಂಚಿಕೊಂಡಿರುವ ಈ ಮೆಮ್‌ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.