ಫಿಫಾ ವಿಶ್ವಕಪ್ ಪುಟ್ಬಾಲ್ ನಲ್ಲಿ ಅಪ್ಪು ದರ್ಶನ...!

ಕನ್ನಡಿಗರ ಕಣ್ಮಣಿ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ ಅವರು ನಿಧನರಾಗಿ ಒಂದು ವರ್ಷ ಮೇಲಾಯಿತು, ಆ ದಾಗ್ಯೂ ಇಂದಿಗೂ ಕೂಡ ಅವರ ನೆನಪೂ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ

Written by - Zee Kannada News Desk | Last Updated : Dec 9, 2022, 10:47 PM IST
  • ಈಗ ಜಗತ್ತಿನಲ್ಲೆಡೆ ಪುಟ್ಬಾಲ್ ವಿಶ್ವಕಪ್ ಟೂರ್ನಿಯದ್ದೇ ಸದ್ದು,
  • ಇಂತಹ ಜಾಗತಿಕ ಟೂರ್ನಿಯ ವೇದಿಕೆಯಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬ
  • ಅಪ್ಪು ಅವರ ಫೋಟೋವನ್ನು ತೋರಿಸುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಫಿಫಾ ವಿಶ್ವಕಪ್ ಪುಟ್ಬಾಲ್ ನಲ್ಲಿ ಅಪ್ಪು ದರ್ಶನ...! title=
Photo Courtsey: Facebook

ಬೆಂಗಳೂರು: ಕನ್ನಡಿಗರ ಕಣ್ಮಣಿ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ ಅವರು ನಿಧನರಾಗಿ ಒಂದು ವರ್ಷ ಮೇಲಾಯಿತು, ಆದಾಗ್ಯೂ ಇಂದಿಗೂ ಕೂಡ ಅವರ ನೆನಪೂ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ

ಪ್ರತಿ ಊರು ನಗರಗಳಲ್ಲಿ, ಜಾತ್ರೆ ,ಕಾರ್ಯಕ್ರಮಗಳಲ್ಲಿ ಅವರ ಫೋಟೋಗಳು ರಾರಾಜಿಸುತ್ತವೆ. ಅವರ ಹೆಸರಿನಲ್ಲಿ ವೃತ್ತಗಳು ಕೂಡ ರಾಜ್ಯದೆಲ್ಲೆಡೆ ನಿರ್ಮಾಣಗುತ್ತಿವೆ.ಆ ಮೂಲಕ ನಮ್ಮೆಲ್ಲರ ನೆಚ್ಚಿನ ಆರಾಧ್ಯದೈವ ಅಪ್ಪು ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಲೇ ಅವರನ್ನು ಚಿರಸ್ಥಾಯಿಯಾಗಿಸುವ ಪ್ರಯತ್ನಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ.

ಈಗ ಜಗತ್ತಿನಲ್ಲೆಡೆ ಪುಟ್ಬಾಲ್ ವಿಶ್ವಕಪ್ ಟೂರ್ನಿಯದ್ದೇ ಸದ್ದು, ಇಂತಹ ಜಾಗತಿಕ ಟೂರ್ನಿಯ ವೇದಿಕೆಯಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬ ಅಪ್ಪು ಅವರ ಫೋಟೋವನ್ನು ತೋರಿಸುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇದನ್ನು ನೋಡಿದ ಅಭಿಮಾನಿಗಳು ಭಾವಪರವಶರಾಗಿದ್ದಾರೆ. ಒಟ್ಟಿನಲ್ಲಿ ಏನೇ ಆಗಲಿ ಅಪ್ಪು ಅವರ ಅಕಾಲಿಕ ನಿಧನವು ಇಂದಿಗೂ ಕೂಡ ನಂಬಲಾರ್ಹ ಸಂಗತಿಯಾಗಿದೆ.ಅವರು ಭೌತಿಕವಾಗಿ ನಮ್ಮನ್ನು ಅಗಲಿರಬಹುದು,ಆದರೆ ಅವರು ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಉಳಿದಿರುವ ನಗುಮುಖದ ರಾಜಕುಮಾರರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News