ಬೆಂಗಳೂರು: ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ೨ ಚಿತ್ರ ಮಾಡುತ್ತಿರುವ ಮೋಡಿಗೆ ಇಡೀ ಸಿನಿ ಜಗತ್ತೇ ಬೆಕ್ಕಸ ಬೆರಗಾಗಿದೆ, ಕೊರೊನಾ ನಂತರದ ಕಾಲಾವಧಿಯಲ್ಲಿ ಬಿಡುಗಡೆಯಾದ ಈ ಸಿನಿಮಾ ಮಾಡುತ್ತಿರುವ ದಾಖಲೆಗಳು ಒಂದಲ್ಲ ಎರಡಲ್ಲ, ಸತತ ಮೂರನೇ ವಾರವೂ ಎಲ್ಲೆಡೆ ಬಾಕ್ಸ್ ಆಫೀಸ್ ನಲ್ಲಿ ನಂಬರ್ 1 ಸ್ಥಾನದಲ್ಲಿದೆ.


COMMERCIAL BREAK
SCROLL TO CONTINUE READING

ಆರಂಭದಲ್ಲಿ ಹಿಂದಿ ಸಿನಿಮಾಗಳು ಬಿಡುಗಡೆಯಾದ ನಂತರ ಕೆಜಿಎಫ್ ೨ ಚಿತ್ರದ ಬಾಕ್ಸ್ ಆಫೀಸ್ ನಾಗಾಲೋಟಕ್ಕೆ ಅಡ್ಡಿಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು, ಆದರೆ ಕೆಜಿಎಫ್ ಹವಾ ಮಾತ್ರ ಮೂರು ವಾರಗಳು ಕಳೆದು ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದರೂ ಕಡಿಮೆ ಮಾತ್ರ ಆಗಿಲ್ಲ, ಈ ಹಿನ್ನಲೆಯಲ್ಲಿ ಈಗ ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಚಿತ್ರದ ಯಶಸ್ಸಿನ ಬಗ್ಗೆ ಕೆಜಿಎಫ್ ೨ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ವಿಭಿನ್ನವಾಗಿ ಶ್ಲಾಘಿಸಿದ್ದಾರೆ.


ಪ್ರಶಾಂತ್ ನೀಲ್ ಅವರೇ ನೀವು ಒಂದು ಕ್ವಿಂಟಾಲ್ ಹಣವನ್ನು ಮಾಡಿದ್ದೀರಿ, ಆದರೆ ಭಾರತೀಯ ಚಲನಚಿತ್ರೋದ್ಯಮವು 100 ಟನ್ಗಳಷ್ಟು ಹಣವನ್ನು ಕಳೆದುಕೊಳ್ಳುವ ವೆಚ್ಚದಲ್ಲಿ ಅವರೆಲ್ಲರೂ ರೀಶೂಟ್‌ಗಳು, ರಿಡ್ರಾಫ್ಟ್‌ಗಳು, ತಮ್ಮನ್ನು ತಾವು ಮರುಶೋಧಿಸುವಲ್ಲಿ ಮರುಚಿಂತನೆ ಮಾಡುತ್ತಾರೆ, ಕೆಜಿಎಫ್ ೨ ಚಿತ್ರ ಯಾವ ರೀತಿ ಗೆದ್ದಿದೆ ಎನ್ನುವುದು ತಿಳಿಯುತ್ತಿಲ್ಲ' ಎಂದು ಅವರು ಟ್ವೀಟ್ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.