ಪ್ರಶಾಂತ್ ನೀಲ್ & ಜ್ಯೂ. NTR ಕಾಂಬೋದಲ್ಲಿ ಸಿನಿಮಾ..! ಇಲ್ಲಿದೆ ಬಿಗ್ ಅಪ್‌ಡೇಟ್
Jr.Ntr-Prashanth Neel: ಕೆಜಿಎಫ್ ಸರಣಿ ಚಿತ್ರಗಳಿಂದ ಸದ್ದು ಮಾಡಿ, ಸಿನಿರಂಗದಲ್ಲಿ ಅತ್ಯಂತ ಭರವಸೆಯ ನಿರ್ದೇಶಕರಾದ ಪ್ರಶಾಂತ್ ನೀಲ್ ಸದ್ಯ ಜ್ಯೂ.ಎನ್‌ಟಿಆರ್ (Jr.Ntr) ನಟನೆಯ 31ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
Jr NTR New Movie: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಭರ್ಜರಿ ಸೌಂಡ್ ಮಾಡಿದ್ದು ಎಲ್ಲರಿಗೂ ಗೊತ್ತೆ ಇದೆ. ಈ ಸರಣಿ ಸಿನಿಮಾಗಳು ವಿದೇಶಿಗರ ಮೆಚ್ಚುಗೆಯನ್ನು ಪಡೆದುಕೊಂಡು ಕನ್ನಡಿಗರ ಗರಿಮೆಯನ್ನು ಹೆಚ್ಚಿಸಿವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಇಂತಹ ಮೈಂಡ್ ಬ್ಲೋಯಿಂಗ್ ಸಿನಿಮಾಗಳನ್ನು ನೀಡಿದ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಇದೀಗ ಜ್ಯೂನಿಯರ್ NTR ಜೊತೆ ಕೈ ಜೋಡಿಸಲಿದ್ದಾರೆ. ಹೌದು ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಎಂದು ಕಳೆದ ವರ್ಷವೇ ಅನೌನ್ಸ್ ಮಾಡಲಾಗಿತ್ತು. ಇದೀಗ ಚಿತ್ರದ ಚಿತ್ರೀಕರಣ ಶುರುವಾಗುವುದರ ಕುರಿತು ಬಿಗ್ ಅಪ್‌ಡೇಟ್ ಹೊರಬಿದ್ದಿದೆ.
ಇದನ್ನೂ ಓದಿ-ಅ.19ರಂದು ಕರುನಾಡ ಚಕ್ರವರ್ತಿ ಶಿವಣ್ಣ ಅಭಿನಯದ ಬಹುನಿರೀಕ್ಷಿತ ‘ಘೋಸ್ಟ್’ ತೆರೆಗೆ
ನಿರ್ದೇಶಕ ಪ್ರಶಾಂತ್ ನೀಲ್ ಜ್ಯೂ.ಎನ್‌ಟಿಆರ್ ಕಾಂಬೋ ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ 2024ರ ಏಪ್ರಿಲ್‌ನಿಂದ ಪ್ರಾರಂಭಮಾಡಲು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಧರಿಸಿದೆ.
ಸದ್ಯ ಜ್ಯೂ.ಎನ್‌ಟಿಆರ್ ‘ದೇವರ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಪ್ರಶಾಂತ್ ನೀಲ್ ಪ್ರಭಾಸ್ ಜೊತೆಗಿನ ಸಲಾರ್ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಈ ಎರಡು ಚಿತ್ರಗಳ ಬಳಿಕ ಈ ಕಾಂಬೋ ಚಿತ್ರ ರೆಡಿಯಾಗಲಿದೆ.
ಇನ್ನು ಕಳೆದ ವರ್ಷವೇ ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹೊಸ ಪ್ರಾಜೆಕ್ಟ್ ಬಗ್ಗೆ ನಿರ್ಮಾಣ ಸಂಸ್ಥೆ ಘೋಷಣೆ ಮಾಡಿತ್ತು. ಅದರಲ್ಲಿ ಜ್ಯೂ.ಎನ್‌ಟಿಆರ್ ಖಡಕ್ ಹಾಗೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ-Janhvi Kapoor : ಕ್ಯೂಟ್ ನೋಟದಿಂದಲೇ ಯುವಕರ ಹೃದಯಕ್ಕೆ ಸಿಹಿ ಗಾಯ ಮಾಡಿದ ಜಾನ್ವಿ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.