Samantha Ruth Prabhu Birthday: ಸೌತ್‌ ಬ್ಯೂಟಿ ಸಮಂತಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಸಿನಿರಂಗದ ಸೆಲಿಬ್ರಿಟಿಗಳು ಸಹ ಸಮಂತಾಗೆ ಬರ್ತ್‌ಡೇ ವಿಶ ಮಾಡುತ್ತಿದ್ದಾರೆ. ಸಮಂತಾ ಸ್ನೇಹಿತರ ಗ್ಯಾಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಸದ್ದು ಮಾಡುತ್ತಿದೆ. ಸಮಂತಾಗೆ ವಿಶೇಷ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಸಮಂತಾ ಗೆಳೆಯರಾದ ನಂದಿನಿ ರೆಡ್ಡಿ, ನೀರಜಾ ಕೋನ, ಡಾ.ಮಂಜುಳಾ, ಪ್ರೀತಮ್ ಮುಂತಾದವರು ವಿಶೇಷ ಶುಭಾಶಯ ಸಂದೇಶ ಕಳಿಸಿದ್ದಾರೆ.


COMMERCIAL BREAK
SCROLL TO CONTINUE READING

ತೆಲುಗು ಸಿನಿರಂಗದ ಮುದ್ದಿನ ಸೆಲೆಬ್ರಿಟಿ ಜೋಡಿ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ಕೊನೆ ಹಾಡಿ ವರ್ಷಗಳೇ ಉರುಳಿವೆ. ಪ್ರೀತಿಸಿ ಮದುವೆಯಾಗಿದ್ದ ಸಮಂತಾ ಮತ್ತು ನಾಗ ಚೈತನ್ಯ ಬೇರೆ ಬೇರೆ ಆಗಿದ್ದಾರೆ. ಆದರೆ ಸಮಂತಾ - ನಾಗ ಚೈತನ್ಯ ಬೇರೆಯಾಗಿರುವುದಕ್ಕೆ ಸಮಂತಾ ಸ್ಟೈಲಿಸ್ಟ್ ಪ್ರೀತಮ್‌ ಜುಕಾಲ್ಕರ್ ಕಾರಣ ಎಂದು ಗಾಸಿಪ್‌ ಹರಿಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇಬ್ಬರ ಬಗ್ಗೆ ಅನೇಕ ಅಂತೆ-ಕಂತೆಯೂ ಎಲ್ಲೆಡೆ ಕೇಳಿಬರುತ್ತವೆ. ಈ ವದಂತಿಯನ್ನ ಸ್ಟೈಲಿಸ್ಟ್ ಪ್ರೀತಮ್‌ ನಯವಾಗಿ ನಿರಾಕರಿಸಿದ್ದರು. ಆದರೂ ಇವರಿಬ್ಬರ ಹಾವಭಾವ ಅನೇಕರ ಬಾಯಿಗೆ ಹೂರಣವಾಗುತ್ತಿದ್ದು, ಸಾಕಷ್ಟು ರೀತಿಯ ಗಾಳಿಸುದ್ದಿ ಆಗಾಗ ಹರಿದಾಡುತ್ತವೆ. 


ಇದನ್ನೂ ಓದಿ: Jr NTR In Pushpa 2 : ಪುಷ್ಪ 2 ಸಿನಿಮಾದಲ್ಲಿ ಜೂ.ಎನ್‌ಟಿಆರ್.!?


ಸಮಂತಾ ಮತ್ತು ಪ್ರೀತಮ್ ನಡುವಿನ ಸಂಬಂಧದ ಬಗ್ಗೆ ಯಾವಾಗಲೂ ವದಂತಿ ಕೇಳಿಬರುತ್ತಲೇ ಇರುತ್ತವೆ. ಪ್ರೀತಮ್ ಕೂಡ ವಿವಿಧ ಪೋಸ್ಟ್‌ಗಳನ್ನು ಮಾಡಿದ್ದಾರೆ. ಆದರೆ ಅವು ಸಮಂತಾಗಾಗಿಯೇ? ಅಥವಾ ಬೇರಾರಗೋ? ಎಂದು ಸ್ಪಷ್ಟವಾಗಿಲ್ಲ. ಸಮಂತಾ ವಿಚ್ಛೇದನದ ಸಮಯದಲ್ಲಿ ಪ್ರೀತಮ್ ಹೆಸರು ಟ್ರೆಂಡಿಂಗ್ ಪ್ರಾರಂಭವಾಯಿತು. ಆದರೆ ಮಧ್ಯದಲ್ಲಿ ಪ್ರೀತಮ್ ಕೂಡ ಸಮಂತಾ ಅವರಿಂದ ದೂರವಾದಂತೆ ಕಂಡರು. ಈಗ ಅವರು ಸಮಂತಾಗೆ ವಿಶೇಷ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. 


[[{"fid":"302758","view_mode":"default","fields":{"format":"default","field_file_image_alt_text[und][0][value]":"Samantha Ruth Prabhu Birthday","field_file_image_title_text[und][0][value]":"Samantha Ruth Prabhu Birthday"},"type":"media","field_deltas":{"1":{"format":"default","field_file_image_alt_text[und][0][value]":"Samantha Ruth Prabhu Birthday","field_file_image_title_text[und][0][value]":"Samantha Ruth Prabhu Birthday"}},"link_text":false,"attributes":{"alt":"Samantha Ruth Prabhu Birthday","title":"Samantha Ruth Prabhu Birthday","class":"media-element file-default","data-delta":"1"}}]]


ಸಮಂತಾ ಅವರಂತೆ ನಾನು ಕ್ಯಾಟ್ ವಾಕ್ ಮಾಡಲು ಸಾಧ್ಯವಿಲ್ಲ ಎಂದು ಸಮಂತಾ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಲವ್ವಿ ನನ್ನ ನೆಚ್ಚಿನ ಜಿಜಿಗೆ ಜನ್ಮದಿನದ ಶುಭಾಶಯಗಳು ಎಂದು ಹೇಳಿದರು. ಅದಕ್ಕೆ ಸಮಂತಾ ಕೂಡ ಪ್ರತಿಕ್ರಿಯಿಸಿದ್ದಾರೆ. ಲವ್ ಸಿಂಬಲ್ಸ್ ಹಂಚಿಕೊಂಡಿದ್ದಾರೆ. 2022 ರಲ್ಲಿ ಬಹುತೇಕ ಪ್ರತಿ ತಿಂಗಳು Ormax ನ 'ಅತ್ಯಂತ ಜನಪ್ರಿಯ ಮಹಿಳಾ ತಾರೆ' ಪಟ್ಟಿಯಲ್ಲಿ ಸತತವಾಗಿ ಅಗ್ರಸ್ಥಾನದಲ್ಲಿರುವುದು ಸಮಂತಾ ರುತ್ ಪ್ರಭು. ಈ ವರ್ಷ ಸಮಂತಾ ಎಷ್ಟೊಂದು ಬ್ಯುಸಿ ಶೆಡ್ಯೂಲ್ ಹೊಂದಿದ್ದಾರೆಂದರೆ, ಹುಟ್ಟುಹಬ್ಬದ ದಿನವೂ ತನ್ನ ಮುಂಬರುವ ಸರಣಿ ಸಿಟಾಡೆಲ್‌ನ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಏಪ್ರಿಲ್ 28ಕ್ಕೆ ಸಮಂತಾ 36ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.


ಇದನ್ನೂ ಓದಿ: ನಟನೆಯ ಜೊತೆ ಬ್ಯುಸಿನೆಸ್‌ನಿಂದಲೂ ಲಕ್ಷಗಟ್ಟಲೆ ಗಳಿಸುತ್ತಾರೆ ಈ ಬಾಲಿವುಡ್ ನಟಿಯರು!


ಸಮಂತಾ ಅವರ ವೇಳಾಪಟ್ಟಿಯು ಮುಂದಿನ ಎರಡು ತಿಂಗಳುಗಳ ಕಾಲ ಬ್ಲಾಕ್ ಆಗಿದೆ. ಈ ವರ್ಷ ಜನ್ಮದಿನವನ್ನು ಸಹ ಶೂಟಿಂಗ್‌ನಲ್ಲಿಯೇ ಕಳೆಯಬೇಕಿದೆ. ಈ ಸರಣಿಯ 10-ದಿನದ ವೇಳಾಪಟ್ಟಿಗಾಗಿ ಮಧ್ಯಪ್ರದೇಶದ ಓರ್ಚಾದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಸಮಂತಾ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರು, ಅವರು ರಾಷ್ಟ್ರದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 


ಸಿಟಾಡೆಲ್ ಜೊತೆಗೆ, ವಿಜಯ್ ದೇವರಕೊಂಡ ಜೊತೆ ನಟಿಸಿರುವ ಖುಷಿ ಬಿಡುಗಡೆಗೆ ಸಮಂತಾ ಸಜ್ಜಾಗುತ್ತಿದ್ದಾರೆ. ಸಮಂತಾ ಇತ್ತೀಚೆಗೆ ಸಿಟಾಡೆಲ್‌ನ ಲಂಡನ್ ಪ್ರೀಮಿಯರ್‌ನಲ್ಲಿ ನಟ ವರುಣ್ ಧವನ್ ಮತ್ತು ಚಲನಚಿತ್ರ ನಿರ್ಮಾಪಕರಾದ ರಾಜ್ ಮತ್ತು ಡಿಕೆ ಅವರೊಂದಿಗೆ ಹಾಜರಾಗಿದ್ದರು. ಅವರು ಸರಣಿಯ ಭಾರತೀಯ ಆವೃತ್ತಿಯನ್ನು ಹೆಲ್ಮ್ ಮಾಡುತ್ತಿದ್ದಾರೆ. ಮೂಲತಃ ರುಸ್ಸೋ ಬ್ರದರ್ಸ್ ರಚಿಸಿದ ಸಿಟಾಡೆಲ್‌ನ ಭಾರತೀಯ ಆವೃತ್ತಿಯಲ್ಲಿ ಸಮಂತಾ ಮತ್ತು ವರುಣ್ ನಟಿಸಲಿದ್ದು, ಇಬ್ಬರೂ ಒದೇ ಮೊದಲ ಬಾರಿ ಸ್ಕ್ರೀನ್‌ ಶೇರ್‌ ಮಾಡುತ್ತಿದ್ದಾರೆ.   


ಇದನ್ನೂ ಓದಿ: ಶೂಟಿಂಗ್‌ ಸೆಟ್‌ನಲ್ಲಿ ಸಿಗರೇಟ್‌ ಹೊಡೆದ ಸಲ್ಮಾನ್‌ ಖಾನ್‌, ವೈರಲ್‌ ಆಯ್ತು ವಿಡಿಯೋ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.