Priyanka Chopra : ಪ್ರಿಯಾಂಕಾ ಚೋಪ್ರಾ ನಟನೆಯ ಸಾಕಷ್ಟು ನಿರೀಕ್ಷಣೆಯನ್ನು ಹೊಂದಿದ ಇಂಗ್ಲೀಷ್‌ ವೆಬ್‌ಸೀರಿಸ್ 'ಸಿಟಾಡೆಲ್' ಸ್ಟ್ರೀಮಿಂಗ್ ಆಗಲಿದೆ. ಈ ಸಿರೀಸ್‌ಗೆ ಜೋಶ್ ಅಫೆಲ್​ಬ್ಯಾಮ್ ಹಾಗೂ ಬ್ರ್ಯಾನ್ ಓಹ್ ಆಕ್ಷನ್ ಕಟ್ ಹೇಳಿದ್ದು, ಅಮೆಜಾನ್ ಪ್ರೈಂನಲ್ಲಿ ಏಪ್ರಿಲ್ 28ರಂದು ವೀಕ್ಷಣೆಗೆ ಸಿಗಲಿದೆ. ಇಬ್ಬರು ಗೂಢಾಚಾರಿಗಳು ತಮ್ಮ ಹಳೇ ನೆನಪುಗಳನ್ನು ಮರೆತಿರುವ ಹಾಗೂ ಅವರಿಗೆ ಎದುರಾದ ಮಿಷನ್‌ನ ಹೇಗೆ ಗೆದ್ದು ತೋರಿಸಿದರು ಅನ್ನೋದೆ ಸೀರಿಸ್‌ ಕಥೆ. 


COMMERCIAL BREAK
SCROLL TO CONTINUE READING

ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಪ್ರಿಯಾಂಕ ಚೋಪ್ರಾ ಜಬರ್ದಸ್ತ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವೆಂಜರ್ಸ್, ಕ್ಯಾಪ್ಟನ್ ಅಮೆರಿಕ ಖ್ಯಾತಿಯ ನಿರ್ದೇಶಕರಾದ ರುಸ್ಸೋ ಬ್ರದರ್ಸ್ 'ಸಿಟಾಡೆಲ್' ಈ ವೆಬ್‌ ಸೀರಿಸ್‌ ಅನ್ನು ನಿರ್ಮಾಣ ಮಾಡಿದ್ದಾರೆ. ಪ್ರಿಯಾಂಕ ಅಭಿಮಾನಿಗಳಂತೂ ಈ ವೆಬ್ ಸೀರಿಸ್ ಮಿಸ್ ಮಾಡಿಕೊಳ್ಳೋಕೆ ಸಾಧ್ಯನೇ ಇಲ್ಲ.  ಪ್ರಿಯಾಂಕ ಗೂಢಚಾರಿಣಿಯಾಗಿ ಸಿಕ್ಕಾಪಟ್ಟೆ ಹಾಟ್ ಆಗಿಯೂ ಕಾಣಿಸಿಕೊಂಡು ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸಿದ್ದಾರೆ.


 


 

 

 

 



 

 

 

 

 

 

 

 

 

 

 

A post shared by Priyanka (@priyankachopra)


 


ಇದನ್ನೂ ಓದಿ-Kiran Raj New Film: ಹರ್ಷ ಎಂದೇ ಖ್ಯಾತಿ ಪಡೆದಿರುವ ಕಿರಣ್‌ ರಾಜ್‌ಗೆ ಧಾರವಾಹಿಗಳ ಮೇಲೆ ಮುನಿಸೇತಕೆ ?   


ಟ್ರೇಲರ್‌ ನಲ್ಲಿಯೇ ಪ್ರಿಯಾಂಕಾ ಸಖತ್ ಬೋಲ್ಡ್‌ ಆಗಿ ನಟಿಸಿರೋದು ನೆಟ್ಟಿಗರ ಗಮನ ಸೆಳೆದಿದೆ. ಇನ್ನು ರಿಚರ್ಡ್ ಮ್ಯಾಡೆನ್ ಹಾಗೂ ಪಿಗ್ಗಿ ಕೆಮೆಸ್ಟ್ರಿ ಕೂಡ ವರ್ಕೌಟ್‌ ಆಗಿರುವಂತೆ ಕಾಣಿಸುತ್ತಿದೆ. 6 ಭಾಷೆಗಳಲ್ಲಿ 'ಸಿಟಾಡೆಲ್' ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಕನ್ನಡಕ್ಕೂ ಡಬ್ ಆಗಿ ಈ ಸ್ಪೈ ಥ್ರಿಲ್ಲರ್ ವೆಬ್‌ ಸೀರಿಸ್ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ಕನ್ನಡ ಟ್ರೈಲರ್ ಕೂಡ ರಿಲೀಸ್ ಆಗಿದೆ.  


ಇದನ್ನೂ ಓದಿ-ಆದಿಪುರುಷ್‌ ಚಿತ್ರದ ಪೋಸ್ಟರ್‌ ರಿಲೀಸ್;‌ ರಾಮಾ ಸೀತೆ ವೇಷದಲ್ಲಿ ಪ್ರಭಾಸ್‌ ಮತ್ತು ಕೃತಿ ..!  


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.