ಆದಿಪುರುಷ್‌ ಚಿತ್ರದ ಪೋಸ್ಟರ್‌ ರಿಲೀಸ್;‌ ರಾಮಾ ಸೀತೆ ವೇಷದಲ್ಲಿ ಪ್ರಭಾಸ್‌ ಮತ್ತು ಕೃತಿ ..!

Adipurush : ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಆದಿಪುರುಷ, ಹೆಚ್ಚು ನಿರೀಕ್ಷಿತ ಪೌರಾಣಿಕ ಫ್ಯಾಂಟಸಿ ಚಲನಚಿತ್ರಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರಭಾಸ್ ಭಗವಾನ್ ರಾಮನ ಪಾತ್ರದಲ್ಲಿ ನಟಿಸಿದ್ದರೆ, ಕೃತಿ ಸಾನೋನ್‌ ಸೀತೆಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.   

Written by - Zee Kannada News Desk | Last Updated : Mar 31, 2023, 02:16 PM IST
  • ಆದಿಪುರುಷ ರಾಮಾಯಣವನ್ನು ಆಧರಿಸಿದ ಪೌರಾಣಿಕ ನಾಟಕವಾಗಿದೆ.
  • ಚಿತ್ರದಲ್ಲಿ ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನೋನ್ ಮತ್ತು ಸನ್ನಿ ಸಿಂಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
  • ಓಂ ರಾವುತ್ ನಿರ್ದೇಶಿಸಿದ ಈ ಚಿತ್ರವು ಭಾರತದಲ್ಲಿನ ಅತ್ಯಂತ ದುಬಾರಿ ಚಲನಚಿತ್ರಗಳಲ್ಲಿ ಒಂದಾಗಿದೆ.
ಆದಿಪುರುಷ್‌ ಚಿತ್ರದ ಪೋಸ್ಟರ್‌ ರಿಲೀಸ್;‌ ರಾಮಾ ಸೀತೆ ವೇಷದಲ್ಲಿ ಪ್ರಭಾಸ್‌ ಮತ್ತು ಕೃತಿ ..!
Adipurush

Prabhas : ರಾಮನವಮಿಯ ವಿಶೇಷ ಸಂದರ್ಭದಲ್ಲಿ ಮಾರ್ಚ್ 30 ರಿಂದ ಬಹುನಿರೀಕ್ಷಿತ ಚಿತ್ರದ ಪ್ರಮೋಷನ್ ಚಟುವಟಿಕೆಗಳು ಪ್ರಾರಂಭವಾಗಿವೆ. ಪ್ರಭಾಸ್, ಕೃತಿ ಸನೋನ್ ಮತ್ತು ಸನ್ನಿ ಸಿಂಗ್ ಒಳಗೊಂಡಿರುವ ಆದಿಪುರುಷದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಭವ್ಯವಾದ ಸಿನಿಮಾ ಪ್ರಚಾರವನ್ನು ಮಾಡಲಾಯಿತು.

ಆದಿಪುರುಷನ ಹೊಸ ಪೋಸ್ಟರ್ ರಿಲೀಸ್‌ : 
ಈ ಚಿತ್ರವು ಭೂಷಣ್ ಕುಮಾರ್ ಮತ್ತು ಓಂ ರಾವುತ್ ಅವರು ಮಾತಾ ವೈಷ್ಣೋದೇವಿಯವರ ಆರ್ಶೀರ್ವಾದದಡಿಯಲ್ಲಿ ನಿರ್ಮಾಣವಾಗಿದೆ, ಮತ್ತು ಜೂನ್ 16 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಬಿಡುಗಡೆಯಾದ ಆದಿಪುರುಷ ಚಿತ್ರದ ಪೋಸ್ಟರ್ ನಲ್ಲಿ ಪ್ರಭಾಸ್ ರಾಮನಾಗಿ ಮತ್ತು ಕೃತಿ ಸನನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಸನ್ನಿ ಸಿಂಗ್ ಕೂಡ ಪೋಸ್ಟರ್‌ನಲ್ಲಿ ಲಕ್ಷ್ಮಣ್ ಆಗಿ ಕಾಣಿಸಿಕೊಂಡಿದ್ದಾರೆ. ಮೂವರೂ ತಮ್ಮ ತಮ್ಮ ವೇಷಭೂಷಣದಲ್ಲಿ ಕಂಗೊಳಿಸಿದ್ದಾರೆ. ಇದು ಪ್ರಧಾನವಾಗಿ ಪ್ರಭು ಶ್ರೀರಾಮನ ಕಥೆಯನ್ನು ವಿವರಿಸುತ್ತದೆ ಎಂದು ಚಿತ್ರದ ಪೋಸ್ಟರ್‌ ತಿಳಿಸುತ್ತಿದೆ. 

ತಮ್ಮ ಚಿತ್ರದ ಬಗ್ಗೆ ಮೂರು ಭಾಷೆಗಳಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡ ಪ್ರಭಾಸ್, "ಮಂತ್ರೋನ್ ಸೆ ಬಧ್ಕೆ ತೇರಾ ನಾಮ್. ಜೈ ಶ್ರೀ ರಾಮ್" ಎಂದು ಶೀರ್ಷಿಕೆ ನೀಡಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Prabhas (@actorprabhas)

ಇದನ್ನೂ ಓದಿ-ಹೊಯ್ಸಳ ಸಿನಿಮಾ ನೋಡಿ ಎಂದ ರಮ್ಯಾಗೆ ನೆಟ್ಟಿಗರಿಂದ ಕ್ಲಾಸ್..!‌ 

ಆದಿಪುರುಷ ಚಿತ್ರದ ವಿಶೇಷತೆ : 
ಆದಿಪುರುಷ ರಾಮಾಯಣವನ್ನು ಆಧರಿಸಿದ ಪೌರಾಣಿಕ ನಾಟಕವಾಗಿದೆ. ಚಿತ್ರದಲ್ಲಿ ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನೋನ್ ಮತ್ತು ಸನ್ನಿ ಸಿಂಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವನ್ನು ಟಿ-ಸೀರೀಸ್ ಫಿಲ್ಮ್ಸ್ ಮತ್ತು ರೆಟ್ರೋಫೈಲ್ಸ್‌ನಿಂದ 500 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಓಂ ರಾವುತ್ ನಿರ್ದೇಶಿಸಿದ ಈ ಚಿತ್ರವು ಭಾರತದಲ್ಲಿನ ಅತ್ಯಂತ ದುಬಾರಿ ಚಲನಚಿತ್ರಗಳಲ್ಲಿ ಒಂದಾಗಿದೆ.

ಜೂನ್ 16, 2023 ರಂದು ಈ ಚಿತ್ರ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಇದು ಪ್ರಭಾಸ್ ಭಗವಾನ್ ರಾಮನ ಪಾತ್ರವನ್ನು ಮತ್ತು ಸೈಫ್ ಅಲಿ ಖಾನ್ ರಾವಣನ ಪಾತ್ರವನ್ನು ಚಿತ್ರೀಕರಿಸಿದೆ. ಆದಿಪುರುಷ 2023 ರ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಚಿತ್ರದ ಕಥಾಹಂದರವು 7000 ವರ್ಷಗಳ ಹಿಂದೆ ಲಂಕಾ ದ್ವೀಪಕ್ಕೆ ಪ್ರಯಾಣಿಸಿದ ಅಯೋಧ್ಯೆಯ ರಾಜ ರಾಘವನ ಕುರಿತು ಹೇಳುತ್ತದೆ. ಲಂಕಾದ ರಾಜ ಲಂಕೇಶ್‌ನಿಂದ ಅಪಹರಣಕ್ಕೊಳಗಾದ ತನ್ನ ಪತ್ನಿ ಜಾನಕಿಯನ್ನು ರಕ್ಷಿಸುವುದು ಅವನ ಒಂದು ಗುರಿಯಾಗಿತ್ತು. ಜಾನಕಿ ಪಾತ್ರದಲ್ಲಿ ಕೃತಿ ಸಾನೋನ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ-ಫಸ್ಟ್ ಡೇ ಗಳಿಕೆಯಲ್ಲಿ ಚಿರಂಜೀವಿ ಚಿತ್ರವನ್ನೇ ಓವರ್‌ ಟೇಕ್‌ ಮಾಡಿದ ನಾನಿ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News