Kiran Raj New Film: ಹರ್ಷ ಎಂದೇ ಖ್ಯಾತಿ ಪಡೆದಿರುವ ಕಿರಣ್‌ ರಾಜ್‌ಗೆ ಧಾರವಾಹಿಗಳ ಮೇಲೆ ಮುನಿಸೇತಕೆ ? 

Kiran Raj New Film: ಕನ್ನಡತಿ ಧಾರವಾಹಿಯ ಹರ್ಷ ಎಂದೇ ಫೇಮಸ್‌ ಆಗಿದ್ದ ಕಿರಣ್‌ರಾಜ್‌ ಪ್ರತಿಯೊಬ್ಬರಿಗೂ ಪರಿಚಯದ ಮುಖ ತಮ್ಮ ನಟನೆ ಮೂಲಕ ಎಲ್ಲರ ಮನಗೆದ್ದಿದ್ದರು.  ಇದೀಗ ಕನ್ನಡತಿ ಸೀರಿಯಲ್‌ ಮಾಡುವ ಮೊದಲು ನಟಿಸುತ್ತಿದ್ದ ಧಾರವಾಹಿಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ.

Written by - Zee Kannada News Desk | Last Updated : Mar 31, 2023, 02:57 PM IST
  • ಧಾರವಾಹಿಯಿಂದ ಸಿನಿಮಾ ಕಡೆ ಮುಖ ಮಾಡಿದ ಕಿರಣ್‌ ರಾಜ್‌
  • ಹರ್ಷ ಎಂದೇ ಖ್ಯಾತಿ ಪಡೆದಿರುವ ಕಿರಣ್‌ ರಾಜ್‌ , ಇನ್ನು ಮುಂದೆ ಸೀರಿಯಲ್‌ ಮಾಡಲ್ಲ
  • ಕಿನ್ನರಿ ಸೀರಿಯಲ್‌ನಲ್ಲಿ ನಟಿಸಿದ್ದರೂ ಫೇಮಸ್ಸು ಆಗಿದ್ದು ಮಾತ್ರ ಕನ್ನಡತಿಯಿಂದ ಎಂದರು
Kiran Raj New Film: ಹರ್ಷ ಎಂದೇ ಖ್ಯಾತಿ ಪಡೆದಿರುವ ಕಿರಣ್‌ ರಾಜ್‌ಗೆ ಧಾರವಾಹಿಗಳ ಮೇಲೆ ಮುನಿಸೇತಕೆ ? 

Kannadathi  Serial: ಕನ್ನಡತಿ ಧಾರವಾಹಿಯ ಹರ್ಷ ಎಂದೇ ಫೇಮಸ್‌ ಆಗಿದ್ದ ಕಿರಣ್‌ರಾಜ್‌ ಪ್ರತಿಯೊಬ್ಬರಿಗೂ ಪರಿಚಯದ ಮುಖ  ತನ್ನದೇ ರೀತಿಯಲ್ಲಿ ಛಾಪುನ್ನು  ಮೂಡಿಸಿದ್ದರು. ಇದೀಗ ಕನ್ನಡತಿ ಸೀರಿಯಲ್‌ ಮಾಡುವ ಮೊದಲು ನಟಿಸುತ್ತಿದ್ದ ಧಾರವಾಹಿಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ.

ಕನ್ನಡತಿ ಧಾರಾವಾಹಿಯ ಮೊದಲು  'ಕಿನ್ನರಿ'ಸೀರಿಯಲ್‌ನಲ್ಲಿ ನಕುಲ್ ಆಗಿ ನಟಿಸಿದ್ದರೂ ಫೇಮಸ್ಸು ಆಗಿದ್ದು ಮಾತ್ರ  ಕನ್ನಡತಿಯಿಂದ ಎಂದಿದ್ದಾರೆ.ಕನ್ನಡತಿ ಧಾರವಾಹಿಯ ಮೊದಲು ನಾನು ಅಭಿನಯ ಮಾಡುತ್ತಿದ್ದರೂ ನನ್ನನ್ನು ಗುರುತಿಸುವವರಿರಲಿಲ್ಲ,  ನನಗೆ ಯಾವುದೇ ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿರಲಿಲ್ಲ.

ಇದನ್ನೂ ಓದಿ: Veena Ponnappa: ಐದು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಾಲಿಟ್ಟಿರುವ ವೀಣಾ ಪೊನ್ನಪ್ಪ! 

ಆದರೆ 'ಕನ್ನಡತಿ' ಧಾರಾವಾಹಿಯಿಂದ ಮೂರು ಬಾರಿ ನಾನು ಅನುಬಂಧ ಅವಾರ್ಡ್ಸ್ ನಂತಹ ದೊಡ್ಡ ದೊಡ್ಡ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ಪಡೆಯಲು ಸಾಧ್ಯವಾಯಿತು. ನನ್ನ ಪ್ರಕಾರ ಒಳ್ಳೆಯ ಕಾರ್ಯಗಳು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. ಅದಕ್ಕಾಗಿ ನಾವು ತಾಳ್ಮೆಯಿಂದ ನಂಬಿಕೆ ಇಟ್ಟು ಕಾಯಬೇಕಷ್ಟೆ. ನಮ್ಮಲ್ಲಿ ನಮಗೆ ನಂಬಿಕೆ ಇದ್ದರೆ ಯಾವುದನ್ನು ಬೇಕಾದರೂ ಮಾಡಲು ಸಾಧ್ಯ. ತಾಳ್ಮೆ ಹಾಗೂ ನಂಬಿಕೆ ಜೀವನದಲ್ಲಿ ಬಹಳ ಮುಖ್ಯ ಎಂಬುದನ್ನು ನಾನು ಕನ್ನಡತಿ ಧಾರಾವಾಹಿ ಹಾಗೂ ಅದರಿಂದ ಸಿಕ್ಕಿರುವ ಯಶಸ್ಸಿನಿಂದ ಕಲಿತಿದ್ದೇನೆಂದು  ಕಿರಣ್‌ ರಾಜ್‌ ಹೇಳಿದರು. 

ಅಂತ್ಯದ ಹಿಂದೆ ಆರಂಭ ಇದ್ದೆ ಇರುತ್ತೆ ಎಂಬ ಮಾತನ್ನು ನಂಬುತ್ತೆನೆ ಹಾಗಾಗಿ  ಯಾವಾಗಲೂ ಎಂತದ್ದೇ ಒಳ್ಳೆಯದಾದರೂ ಅದು ಮುಗಿಯಲೂ ಒಂದು ಕಾಲ ಇದ್ದೇ ಇರುತ್ತದೆ. ಅದೇ ರೀತಿ 'ಕನ್ನಡತಿ' ಧಾರಾವಾಹಿ ಮುಗಿಯುತ್ತಿರುವುದು ಇನ್ಯಾವುದೋ ಅದ್ಭುತವಾದ ಹೊಸದೊಂದರ ಆರಂಭದ ಸೂಚನೆ ನಂಬಿದ್ದೆ ಎಂದರು.  ಈ ಧಾರಾವಾಹಿ ನನಗೆ ತಂದುಕೊಟ್ಟ ಆತ್ಮವಿಶ್ವಾಸ ಹಾಗೂ ಯಶಸ್ಸಿನ ಬಗ್ಗೆ ನನಗೆ ಸದಾ ಸಂತೋಷವಿದೆ.

ಇದನ್ನೂ ಓದಿ: Puttakkana Makkalu Serial: ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಕಂಠಿ ವಿದ್ಯಾರ್ಹತೆ ಗೊತ್ತಾ..? 

ಇನ್ನು ಮುಂದೆ ನಾನು ಸಿನಿಮಾಗಳನ್ನು ಮಾಡಲು  ಇಚ್ಚಿಸುತ್ತೇನೆ. ಅವಕಾಶಗಳು ಬಂದು ಒಳ್ಳೆಯ ಕಥೆಗಳಿದ್ದರೆ ಸಿನಿಮಾಗಳಲ್ಲಿ ಪಾತ್ರ ಮಾಡಿ ನನ್ನ ನಟನೆಯನ್ನು ಸಾಬೀತು ಮಾಡಿಕೊಳ್ಳುವ ಕಾಲ ಇದೀಗ ಬಂದಿದೆ ಎಂದರು.   'ಕನ್ನಡತಿ ಧಾರವಾಹಿಯ ಸಹನಟರನ್ನು ಮಿಸ್ ಮಾಡಿಕೊಳ್ಳುತ್ತೇನೆ.ಆದರೆ ಇದು ಅನಿವಾರ್ಯವಾಗಿರುವುದರಿಂದ ಜೀವನವೂ ಇದೇ ರೀತಿ ಇರುವುದರಿಂದ ನಾವೆಲ್ಲರೂ ಇದನ್ನು ಸಮವಾಗಿ ಸ್ವೀಕರಿಸಿಕೊಂಡು ಮುಂದೆ ಹೋಗಬೇಕಿದೆ ಕನ್ನಡತಿ ಮೇಲಿನ ಪ್ರೀತಿ ವ್ಯಕ್ತ ಪಡಿಸಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

More Stories

Trending News