Puneeth Rajkumar Birthday: 1975, ಮಾರ್ಚ್ 17 ರಂದು ಅಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಪಾರ್ವತಮ್ಮರವರು ಗಂಡು ಮಗುವೊಂದಕ್ಕೆ ಜನ್ಮ ನೀಡುತ್ತಾರೆ. ಆ ಚಿಕ್ಕ ಬಾಲಕ ಮನೆ ಮಂದಿಗೆ ಮಾತ್ರವಲ್ಲದೇ ಇಡೀ ಕರುನಾಡಿಗೆ ಮುದ್ದಿನ ಮಗವಾಗಿದ್ದವರೇ  ಡಾ.ಪುನೀತ್ ರಾಜ್‌ಕುಮಾರ್ ! ಕರುನಾಡಿನ ಯುವರತ್ನ ಯುವಕರಿಗೆ ಹೇಗೆ ಸ್ಫೂರ್ತಿ ಆದರು  ನೋಡೊಣ..


COMMERCIAL BREAK
SCROLL TO CONTINUE READING

ಬಾಲ್ಯದಲ್ಲೇ ನಟನೆ ಮೂಲಕ ಎಲ್ಲರ ಮನೆ ಗೆದ್ದಿದ್ದ ಇವರು .... ನಟನೆಗಾಗಿ  ಕೇಂದ್ರ ಸರ್ಕಾರ ಅತ್ಯುತ್ತಮ ಬಾಲನಟ ಕೆಟಗರಿ ಅಡಿಯಲ್ಲಿ ರಾಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಷ್ಟೇ ದೊಡ್ಡ ಕಲಾವಿದನಾದರೂ ಅಪ್ಪುರವರ  ಸರಳತೆ, ವಿನಯತೆ ಎಲ್ಲರಿಗೂ ಮಾದರಿ.


ಇದನ್ನೂ ಓದಿ: VISHWA MAANAVA APPU: ಸ್ಫೂರ್ತಿ ದಿನಕ್ಕೆ ಗಾಯಕ ನವೀನ್ ಸಜ್ಜುರಿಂದ ಮತ್ತೊಂದು ಸ್ಫೂರ್ತಿದಾಯಕ ಹಾಡು


ಅವರು ಸಾರ್ಥಕತೆಯ ಬದುಕನ್ನು ಬದುಕಿದ್ದರು. ಯಾವುದೇ ಪ್ರಚಾರ ಬಯಸದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾಗಿದ್ದರು.ಅಪ್ಪು ಅಂದ್ರೆ ವಿನಯತೆ, ಸದ್ದಿಲ್ಲದೇ ಸಾಮಾಜಿಕ ಕಾರ್ಯಕ್ರಮಗಳ್ಲಿ ತೊಡಗಿಸಿಕೊಂಡ ರೀತಿಗೆ ಸಾಕ್ಷಿಯಾಗಿ ಅಷ್ಟು ದೊಡ್ಡ ಕಲಾವಿದನಾಗಿದ್ದರೂ, ಸದ್ದೇ ಮಾಡದೇ 26ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮ ಹಾಗೂ 4800ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ಓದಿಗೆ ನೀಡಿದ ದಾನವು ಸ್ಫೂರ್ತಿಯಾಗಿವೆ ..


 ಅಪ್ಪು ಸರಳ ವ್ಯಕ್ತಿತ್ವ ಎಂಬುವುದನ್ನು ವಿವರಿಸಬೇಕಿಲ್ಲ ಎನಿಸುತ್ತದೆ...
ಕಾರಣ, ಸಾಧಾರಣ ಜನರ ಜೊತೆ ಸಾಮಾನ್ಯರಂತೆ ಇರುತ್ತಿದ್ದರೆಂಬುವುದಕ್ಕೆ ತಮ್ಮ ಸಿನಿಮಾ ಬಿಡುಗಡೆ ಪ್ರಚಾರ ವೇಳೆ ಅಭಿಮಾನಿಗಳ ಜೊತೆ  ಬೆರೆಯುತ್ತಿದ್ದ ಕ್ಷಣಗಳೇ ಸಾಕ್ಷಿಯಾಗಿದ್ದವು.. ಐಷಾರಾಮಿ ಕಾರುಗಳಿದ್ದರೂ ಅವರು ದರ್ಪ ತೋರಲಿಲ್ಲ. ಉಡುಗೆ ತೊಡುಗೆ ವಿಚಾರದಲ್ಲಿ ನಾನು ಸಿರಿವಂತ ಎಂದು ಆಡಂಬರದಿಂದ ಬೀಗದೆ ಮೊದಲಿನಿಂದ  ಕೊನೆಯ ವರೆಗೂ ಸರಳತೆ ಮುನ್ನುಡಿಯಾಗಿದ್ದರು..


ಇದನ್ನೂ ಓದಿ: Puneeth Rajkumar : ಸಾಕಷ್ಟು ಪ್ರಶಸ್ತಿ, ಸೂಪರ್‌ ಸ್ಟಾರ್‌ ಮಗ.. ʼಬೆಟ್ಟದ ಹೂವಿʼಗೆ ಅಹಂಕಾರವೇ ಇರಲಿಲ್ಲ


ಅಷ್ಟೇ ಅಲ್ಲದೇ  ತಮ್ಮ ಸಿನಿಮಾಗಳ ಮೂಲಕ ಸಾಮಾಜಿಕ ಕಳಕಳಿಗೆ ಸ್ಫೂರ್ತಿಯಾಗಿ ಅಂದರೆ ಶಿಕ್ಷಣ ವ್ಯವಸ್ಥೆಯ ಖಾಸಗೀಕರಣ ಮತ್ತು ರಾಜಕೀಯ ಕಾರಣಗಳಿಂದಾಗಿ ಈಗ ಮುಚ್ಚುವ ಅಂಚಿನಲ್ಲಿರುವ ಪ್ರತಿಷ್ಠಿತ ಕಾಲೇಜು ಕುರಿತು ಖಾಸಗೀಕರಣದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ  ʼಯುವರತ್ನʼ ಸಿನಿಮಾದ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.


ಮಾತ್ರವಲ್ಲದೇ ವೃದ್ಧಶ್ರಮಕ್ಕೆ ತಂದೆ ತಾಯಿಯನ್ನು ಕಳುಹಿಸುವ ಮಕ್ಕಳಿಗೆ ಸಾಕಿ ಸಲುಹಿದ ತಂದೆ ತಾಯಿಯೇ ದೇವರು ಎಂದು ಸಾರುವ ಮಾದರಿಯಲ್ಲಿ ರಾಜಕುಮಾರಾಗಿದ್ದಾರೆ . ನಿಸರ್ಗಕ್ಕೂ ಇವರ ಹೃದಯ ಶೀಲತೆ ನೆರೆವಿನಲ್ಲಿ  ಮಾನವನ ದುರಾಸೆಗೆ ಪ್ರಸ್ತುತದಲ್ಲಿ ಕಾಡು ನಶಿಸುವ ಅಂಚಿನಲ್ಲಿದೆ ಅದರ ಕುರಿತಂತೆ ನಿಸರ್ಗವೇವ ಹೀರೋ, ನೀರಿನಾಳದ ರಮಣೀಯತೆಯೇ ನಿಸರ್ಗದ ನಟಿ ಎನ್ನುವ ಮೂಲಕ ಗಂಧದ ಗುಡಿ ಸಿನಿಮಾದಲ್ಲಿ ಕರುನಾಡಿನ ಶ್ರೀಗಂಧ ಇವರಾಗಿದ್ದಾರೆ..


ಇದನ್ನೂ ಓದಿ: Puneeth Rajkumar Birthday : ʼರಾಜರತ್ನʼನಿಲ್ಲ ಎನ್ನುವ ಮಾತೇ ಇಲ್ಲ..! ಕನ್ನಡಿಗರ ಹೃದಯಾಳದಲ್ಲಿ ʼಅಪ್ಪು ಸದಾ ಅಮರʼ
ಪ್ರೀತಿಯಲ್ಲಿ ಬಿದ್ದವನಿಗೆ ಪ್ರೀತಿಯನ್ನು ಕಳೆದುಕೊಳ್ಳಲು ತಯಾರಿರಬೇಕು ಪಡೆದುಕೊಳ್ಳುವ ಹುಮ್ಮಸ್ಸು ಇರಬೇಕು ಹಾಗೆಯೇ ದಾಂಪತ್ಯ ಜೀವನದಲ್ಲಿ ಏಳು ಬೀಳುಗಳು ಸಾಮಾನ್ಯ . . ಪ್ರತಿ ದಾಂಪತ್ಯ ಜೀವನದ ಸಮಸ್ಯೆಗೆ  ಡೀವೊರ್ಸ್‌ ಒಂದೇ ಅಂತಿಮ ನಿರ್ಧಾರವಾಗಿರಬಾರದು ಎಂದು  ದಾಂಪತ್ಯ ಜೀವನದ ʼಮಿಲನʼ   ಮೂಲಕ   ದಂಪತಿಗಳಿಗೆ ಆಸರೆಯಾಗಿದ್ದಾರೆ..


ಹೀಗೆ ಹೇಳುತ್ತಾ ಹೋದರೆ ಪ್ರತಿಯೊಂದು ಸಿನಿಮಾದ ಮೂಲಕ ಸಾಮಾಜಿಕ ಸಂದೇಶ ಸಾರಿದ್ದಾರೆ..
ಚಿಕ್ಕಮಕ್ಕಳೆಂದರೆ ಅಪ್ಪುಗೆ ಎಲ್ಲಿಲ್ಲದ ಪ್ರೀತಿ. ಸದಾ ನಗುಮುಖದಿಂದಲೇ ಎಲ್ಲರನ್ನು ಮಾತನಾಡಿಸುತ್ತಿದ್ದರು. ಸಮಾಜದಲ್ಲಿ ಪ್ರತಿಯಬ್ಬರ ಜೊತೆಗೆ ಬೆರೆಯುವ ಗುಣ ಹೊಂದಿದ್ದ ಅವರು ಹಸನ್ಮುಖಿ ಗುಣಗಳಿಗೂ ಕಾರಣರಾಗಿದ್ದರು..ಅಷ್ಟೇ ಅಲ್ಲದೇ ʼಜೊತೆಗಿಲ್ಲದ ಜೀವ ಎಂದಿಗೂ ಜೀವಂತʼ ಎಂಬ ಸಾಲುಗಳಿಗೆ ಮಾದರಿಯಾಗಿದ್ದಾರೆ. ವಿನಯತೆ,ಸಾಮಾಜಿಕ ಕಳಕಳಿ, ಸರಳತೆ,ಪ್ರೀತಿ , ಗೌರವ ಎಲ್ಲಾ ಗುಣ ಹೊಂದಿದ ಇವರು ಕೋಟ್ಯಂತರ ಜನರ ಆರಾಧ್ಯ ದೈವನಾಗಲು ಇದಕ್ಕಿಂತ ಬೇರೆ ಕಾರಣ ಬೇಕೆ..https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.