VISHWA MAANAVA APPU: ಸ್ಫೂರ್ತಿ ದಿನಕ್ಕೆ ಗಾಯಕ ನವೀನ್ ಸಜ್ಜುರಿಂದ ಮತ್ತೊಂದು ಸ್ಫೂರ್ತಿದಾಯಕ ಹಾಡು

VISHWA MAANAVA Lyrical Video: ಡಾ.ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮತ್ತು ಸ್ಫೂರ್ತಿ ದಿನದ ಅಂಗವಾಗಿ ‘ವಿಶ್ವಮಾನವ’ ಲಿರಿಕಲ್ ವಿಡಿಯೋವನ್ನು ತಮ್ಮದೇ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆ ಮಾಡಿದ್ದಾರೆ.

Written by - Zee Kannada News Desk | Last Updated : Mar 16, 2023, 10:05 PM IST
  • ಸ್ಫೂರ್ತಿ ದಿನಕ್ಕೆ ಗಾಯಕ ನವೀನ್ ಸಜ್ಜುರಿಂದ ಮತ್ತೊಂದು ಸ್ಫೂರ್ತಿದಾಯಕ ಹಾಡು
  • ವಿಶ್ವಮಾನವ ‘ಅಪ್ಪು’ಗೆ ಮತ್ತೊಮ್ಮೆ ಗೀತ ನಮನ ಸಲ್ಲಿಸಿದ ನವೀನ್ ಸಜ್ಜು & ಚೇತನ್ ಕುಮಾರ್ ಜೋಡಿ
  • ಡಾ.ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಹಾಡು ಬಿಡುಗಡೆ
VISHWA MAANAVA APPU: ಸ್ಫೂರ್ತಿ ದಿನಕ್ಕೆ ಗಾಯಕ ನವೀನ್ ಸಜ್ಜುರಿಂದ ಮತ್ತೊಂದು ಸ್ಫೂರ್ತಿದಾಯಕ ಹಾಡು title=
‘ವಿಶ್ವಮಾನವ’ನಾದ ಅಪ್ಪು

ಬೆಂಗಳೂರು: ಸ್ಯಾಂಡಲ್‌ವುಡ್‌ನ ಗಾಯಕ, ಮ್ಯೂಸಿಕ್ ಕಂಪೋಸರ್ ನವೀನ್ ಸಜ್ಜು ತಮ್ಮ ವಿಶಿಷ್ಟ ಕಂಠದ ಮೂಲಕ ಲಕ್ಷಾಂತರ ಅಭಿಮಾನಿಗಳು ಸಂಪಾದಿಸಿದ್ದಾರೆ. ‘ದೊಡ್ಮನೆ ದೊರೆಯೇ’ ಹಾಡಿನ ಮೂಲಕ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರಿಗೆ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿದ್ದರು.    

ನವೀನ್‌ ಸಜ್ಜು ಹಾಡಿರುವ ‘ದೊಡ್ಮನೆ ದೊರೆಯೇ’ ಹಾಡನ್ನು ‘ಜೇಮ್ಸ್‌’ ನಿರ್ದೇಶಕ, ಭರ್ಜರಿ ಖ್ಯಾತಿಯ ಚೇತನ್‌ ಕುಮಾರ್‌ ಬರೆದಿದ್ದರು. ಈ ಹಾಡಿಗೆ ನವೀನ್ ಅವರೇ ಸ್ವತಃ ಸಂಗೀತ ಸಂಯೋಜನೆ ಮಾಡಿ ವಿಭಿನ್ನ ಕಾನ್ಸೆಪ್ಟ್‌  ರೂಪಿಸಿದ್ದರು. ಈ ಹಾಡಿನ ಥೀಮ್‌ ನೋಡಿದ ಪ್ರತಿಯೊಬ್ಬರಿಗೂ ಇಷ್ಟವಾಗಿದೆ.   

ಇದನ್ನೂ ಓದಿ: Weekend with Ramesh : ʼವೀಕೆಂಡ್ ವಿತ್ ರಮೇಶ್ʼ ಫಸ್ಟ್‌ ಗೆಸ್ಟ್‌ ಯಾರ್‌ ಗೊತ್ತಾ..! ಶಾಕಿಂಗ್‌ ವಿಚಾರ ಇಲ್ಲಿದೆ ನೋಡಿ

2022ರ ಮಾರ್ಚ್ 20ರಂದು ತಮ್ಮದೇ ‘Naveen Sajju’ ಯುಟ್ಯೂಬ್ ಚಾನೆಲ್‍ನಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿತ್ತು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಈ ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಇದುವರೆಗೆ ‘ದೊಡ್ಮನೆ ದೊರೆಯೇ’ ಹಾಡನ್ನು 68 ಲಕ್ಷ(6.8M)ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

‘ದೊಡ್ಮನೆ ದೊರೆಯೇ’ ಹಾಡಿನ ಬಳಿಕ ನವೀನ್ ಸಜ್ಜು ಮತ್ತು ಚೇತನ್ ಕುಮಾರ್ ಜೋಡಿ ಇದೀಗ ಮತ್ತೊಂದು ಹಾಡು ರೂಪಿಸಿದೆ. ಡಾ.ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮತ್ತು ಸ್ಫೂರ್ತಿ ದಿನದ ಅಂಗವಾಗಿ ‘ವಿಶ್ವಮಾನವ’ ಲಿರಿಕಲ್ ವಿಡಿಯೋವನ್ನು ತಮ್ಮದೇ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆ ಮಾಡಿದ್ದಾರೆ. ‘ಯುದ್ಧ ಇರದೆ ರಾಜ್ಯ ಗೆದ್ದ ಶ್ರೇಷ್ಠ ಮಾನವ. ಜೀವನಪೂರ್ತಿ ನೀವೇ ಸ್ಫೂರ್ತಿ’ ಎಂಬ ಸಾಲುಗಳನ್ನು ಹೊಂದಿರುವ ಈ ಹಾಡನ್ನು ಸ್ಫೂರ್ತಿ ದಿನದ ಶುಭಾಶಯಗಳೊಂದಿಗೆ ರಿಲೀಸ್ ಮಾಡಲಾಗಿದೆ.

ಇದನ್ನೂ ಓದಿ: Weekend With Ramesh 5: ಈ ದಿನದಿಂದ 'ವೀಕೆಂಡ್ ವಿಥ್ ರಮೇಶ್‌ ಸೀಸನ್ 5' ಶೋ ಶುರು!!

3 ನಿಮಿಷ 19 ಸೆಕೆಂಡುಗಳಿರುವ ಈ ವಿಶೇಷ ಹಾಡಿನಲ್ಲಿ ಕರುನಾಡಿನ ಮನೆಮಗ ‘ಅಪ್ಪು’, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು 'ವಿಶ್ವಮಾನವ'ನಾಗಿ ಕಾಣಿಸಿಕೊಂಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News