Puneeth Rajkumar Birthday : ಇಂದು ಬರೀ ಕರ್ನಾಟಕ ರತ್ನ, ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಮಾತ್ರವಲ್ಲ, ಕನ್ನಡವನ್ನು ಪ್ರೀತಿ, ಉಳಿಸಿ ಬೆಳೆಸುವ ಪ್ರತಿಯೊಬ್ಬರಿಗೂ ಒಂದು ಶುಭ ದಿನ ಅಂದ್ರೆ ತಪ್ಪಾಗಲ್ಲ. ಕನ್ನಡದ ಕಂದ ರಾಜಣ್ಣನ ಮುದ್ದು ಮಗ ಅಪ್ಪು ನಮ್ಮನ್ನ ಅಗಲಿ ಇಂದಿಗೆ 2 ವರ್ಷಗಳು ಕಳೆದಿವೆ. ಆದ್ರೆ ನಮ್ಮ ಮಧ್ಯ ಅವರಿಲ್ಲ ಎನ್ನುವ ನೋವಿಗಿಂತ ಅವರು ಎಲ್ಲೂ ಹೋಗಿಲ್ಲ ಎನ್ನುವ ಬಲವಾದ ನಂಬಿಕೆ ಎಲ್ಲರಲ್ಲಿಯೂ ಇಂದಿಗೂ ಇದೆ. ಇಲ್ಲೋ ಎಲ್ಲೋ ಹೋಗಿದ್ದಾರೆ ಬರ್ತಾರೆ ಎನ್ನುವ ಭಾವನೆ ಸದಾ ಇರುತ್ತದೆ.
ಮಾರ್ಚ್ 17 ಪ್ರತಿವರ್ಷ ಈ ದಿನವನ್ನು ಅಪ್ಪು ಮಯವಾಗಿ ಆಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯೋತ್ಸವ ಬಿಟ್ಟರೆ ಅಪ್ಪು ಹುಟ್ಟುಹಬ್ಬದಂದೇ ಹೆಚ್ಚಾಗಿ ಕನ್ನಡ ಧ್ವಜಗಳ ಹಾರಾಟವನ್ನು ಗಮನಿಸಬಹುವುದು. ಕನ್ನಡ ಅಂದ್ರೆ ಪುನೀತ್ ರಾಜ್ಕುಮಾರ್ ಅವರಿಗೆ ಅಷ್ಟೋಂದು ಪ್ರೀತಿ. ಅದಕ್ಕಾಗಿ ಒಂದೂ ಪರಭಾಷೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲೂ ಸಹ ಅಪ್ಪು ಕಾಣಿಸಿಕೊಂಡಿಲ್ಲ. ರಾಜ್ ಕುಟುಂಬದ ಕನ್ನಡದ ಪ್ರೀತಿಗೆ ಸಾಕ್ಷಿ ಅಂದ್ರೆ ಅವರನ್ನು ಪ್ರೀತಿಸುವ ಅಪಾರ ಅಭಿಮಾನಿಗಳ ಪಡೆ. ಅವರ ಕನ್ನಡಾಭಿಮಾನದ ಬಗ್ಗೆ ಮಾತನಾಡುವಂತಿಲ್ಲ ಬಿಡಿ..
ಇದನ್ನೂ ಓದಿ:VISHWA MAANAVA APPU: ಸ್ಫೂರ್ತಿ ದಿನಕ್ಕೆ ಗಾಯಕ ನವೀನ್ ಸಜ್ಜುರಿಂದ ಮತ್ತೊಂದು ಸ್ಫೂರ್ತಿದಾಯಕ ಹಾಡು
ಇಂದು (ಮಾರ್ಚ್ 17) ಅಪ್ಪು ಅವರ ಜನ್ಮದಿನ. ಪುನೀತ್ ಅವರಿಗೆ ಚಿತ್ರರಂಗದ ತಾರೆಗಳು ಹಾಗೂ ಫ್ಯಾನ್ಸ್, ರಾಜಕೀಯ ನಾಯಕರು ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಪುನೀತ್ ನಮ್ಮ ಜೊತೆ ಇದ್ದಿದ್ದರೆ ಈ ದಿನದ ಮೆರುಗು ಮತ್ತಷ್ಟು ಹೆಚ್ಚುತ್ತಿತ್ತು. ಆದರೆ, ಅವರಿಲ್ಲ ಎನ್ನುವ ಬೇಸರದಲ್ಲೇ ಈ ದಿನವನ್ನು ಆಚರಿಸಲಾಗುತ್ತಿರುವುದು ನಿಜಕ್ಕೂ ದುಃಖಕರ ವಿಚಾರ. ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ದಿನದ ಮತ್ತೊಂದು ವಿಶೇಷ ಅಂದ್ರೆ, ಅಪ್ಪು ಅವರ ಕನಸಿನ ಕೂಸು ʼಗಂಧದ ಗುಡಿʼ ಸಾಕ್ಷ್ಯಚಿತ್ರವನ್ನು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡಲಾಗುವುದು. ಕುಟುಂಬ ಸಮೇತ ಮನೆಯಲ್ಲಿಯೇ ಕುಳಿತು ಅಪ್ಪುವನ್ನು ಕಣ್ತುಂಬಿಕೊಳ್ಳಬಹುದು. ಅಪ್ಪು ಕನಸ್ಸಾಗಿದ್ದ ಈ ಡಾಕ್ಯುಮೆಂಟರಿ, ಅಕ್ಟೋಬರ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದನ್ನು ನೋಡಿ ಅನೇಕರು ಮೆಚ್ಚಿಕೊಂಡಿದ್ದರು.
ಇದನ್ನೂ ಓದಿ: ʼಕಾಂತಾರʼದ ಮೂಲಕ ವಿಶ್ವಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆ ಮಹತ್ವ ಸಾರಿದ ರಿಷಬ್..!
ಆರ್. ಚಂದ್ರು ನಿರ್ದೇಶನ ಬಿಗ್ ಬಜೆಟ್ ಸಿನಿಮಾ ಕಬ್ಜಗೆ ಅಪ್ಪು ಸಪೋರ್ಟ್ ನೀಡಿದ್ದರು. ಪುನೀತ್ ರಾಜ್ಕುಮಾರ್ ಬದುಕಿರುವಾಗಲೇ ‘ಕಬ್ಜ’ ಚಿತ್ರ ಸೆಟ್ಟೇರಿತ್ತು. ನಿರ್ದೇಶಕ ಆರ್. ಚಂದ್ರು ಅವರನ್ನು ಅಪ್ಪು ಹುರಿದುಂಬಿಸಿದ್ದರು. ಈ ಕಾರಣಕ್ಕೆ ಪುನೀತ್ ಬಗ್ಗೆ ಚಂದ್ರುಗೆ ವಿಶೇಷ ಗೌರವ ಇದೆ. ಪುನೀತ್ ಅವರ ನೆನಪಿನಲ್ಲೇ ‘ಕಬ್ಜ’ ಚಿತ್ರ ಇಂದು (ಮಾರ್ಚ್ 17) ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ್, ಮತ್ತು ಶಿವಣ್ಣ ನಟಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.