ವಿಶ್ವದಾದ್ಯಂತ 4500 ಪರದೆಗಳಲ್ಲಿ ಅಪ್ಪು ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆ
ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ವಿಶ್ವದಾದ್ಯಂತ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು ತಿಳಿಸಿದ್ದಾರೆ.ಚಿತ್ರದ ಬಿಡುಗಡೆಗೂ ಮುನ್ನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಶ್ವವ್ಯಾಪಿ 4500 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಜೇಮ್ಸ್ ರಿಲೀಸ್ ಆಗಲಿದೆ ಎನ್ನುವ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ಬೆಂಗಳೂರು: ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ವಿಶ್ವದಾದ್ಯಂತ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು ತಿಳಿಸಿದ್ದಾರೆ.ಚಿತ್ರದ ಬಿಡುಗಡೆಗೂ ಮುನ್ನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಶ್ವವ್ಯಾಪಿ 4500 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಜೇಮ್ಸ್ ರಿಲೀಸ್ ಆಗಲಿದೆ ಎನ್ನುವ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: James: ಹಾಲಿವುಡ್ ರೇಂಜ್ ಗೆ ಅಪ್ಪು ಸಾಂಗ್..! ಹೊಸ ದಾಖಲೆ ಬರೆದ 'ಜೇಮ್ಸ್'..!
ಪುನೀತ್ ಅವರ ನಿಧನದ ಹಿನ್ನಲೆಯಲ್ಲಿ ಮೌನಾಚಾರಣೆ ಮಾಡುವುದರ ಮೂಲಕ ಜೇಮ್ಸ್ (James) ಚಿತ್ರದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಚೇತನ್ ಮಾತಾನಾಡಿ "ಪುನೀತ್ ಅವರಿಲ್ಲದೆ ಇದನ್ನ ಕಾರ್ಯಕ್ರಮ ಮಾಡೋದು ಕಷ್ಟ ಆಗುತ್ತೆ, ಅಪ್ಪು ಸರ್ ಬಾಯಿಂದ ಬಂದ ದಿನಾಂಕಕ್ಕೆ ಚಿತ್ರ ರಿಲೀಸ್ ಆಗ್ತಿದೆ,ದೊಡ್ಮನೆ ಋಣ ನಮ್ಮ ಮೇಲಿದೆ, ಎಂದು ಅವರು ಭಾವುಕರಾದರು.
ಇದನ್ನೂ ಓದಿ: James Trademark Song: ಪವರ್ ಸ್ಟಾರ್ ಸಾಂಗ್, ಪವರ್ ಫುಲ್ ರಿಲೀಸ್..! ಹೇಗಿದೆ 'ಜೇಮ್ಸ್' ಹಾಡು..?
"ಇದೇ ವೇಳೆ ಅವರು ಅಪ್ಪು (Puneeth Rajkumar) ಸರ್ ಧ್ವನಿಯನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ, ಶಿವಣ್ಣ ಡಬ್ ಮಾಡಿದ್ದನ್ನ ನೆನಪಿಸಿಕೊಳ್ತೀನಿ, ಇನ್ನೂ ಇದಕ್ಕೆ ರಾಘಣ್ಣನ ಸಪೋರ್ಟ್ ಕೂಡ ತುಂಬಾ ಇದೆ ಅವರು ಸ್ಮರಿಸಿದರು.ಇದು ನನ್ನ ನಾಲ್ಕನೇ ಸಿನಿಮಾ ಐದು ಭಾಷೆಗಳಲ್ಲಿ ಈ ಚಿತ್ರವು ಬಿಡುಗಡೆಯಾಗುತ್ತಿದೆ.ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿದ್ದು, ನಾನು ಅಂದುಕೊಂಡಿದ್ದಕಿಂತ ಇದು ಬೇರೆ ರೀತಿಯಲ್ಲಿ ಬಂದಿದೆ ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.