ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ‘ಜೇಮ್ಸ್’ ಸಿನಿಮಾ ಮೇಕಿಂಗ್ ಹೇಗಿತ್ತು ಗೊತ್ತಾ..?
‘ಜೇಮ್ಸ್’ ಪೋಸ್ಟರ್ ರಿಲೀಸ್ ಆಗಿದ್ದೇ ತಡ ಇಡೀ ಭಾರತೀಯ ಚಿತ್ರರಂಗ ಅಪ್ಪು ಅವರ ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದೆ.
ಬೆಂಗಳೂರು: ಕನ್ನಡಿಗರೆಲ್ಲಾ ಉಸಿರು ಬಿಗಿಹಿಡಿದು ಕಾಯುತ್ತಿರುವ ‘ಜೇಮ್ಸ್’ ಸಿನಿಮಾ(James Movie) ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ಫಸ್ಟ್ ಲುಕ್ ಮೂಲಕ ಧೂಳ್ ಎಬ್ಬಿಸಿರುವ ಅಪ್ಪು ಅಭಿನಯದ ಕೊನೇ ಚಿತ್ರ, ಇದೀಗ ತನ್ನ ಮೇಕಿಂಗ್ ಫೋಟೋಸ್ ಮೂಲಕ ಅಭಿಮಾನಿಗಳನ್ನು ಸೆಳೆದಿಟ್ಟಿದೆ.
‘ಜೇಮ್ಸ್’ ಬರೀ ಸಿನಿಮಾ ಅಲ್ಲ, ಅದೊಂದು ಹಬ್ಬವೇ ಸರಿ. ಯಾಕಂದ್ರೆ ಅಪ್ಪು ಅಭಿನಯದ ಕೊನೇ ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಇಡೀ ದೇಶವೇ ಕಾಯುತ್ತಿದೆ. ಜನವರಿ 26ರ ಗಣರಾಜ್ಯೋತ್ಸವದ ದಿನ ಜೇಮ್ಸ್ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಹಾಗೇ ಕೆಲದಿನಗಳ ಹಿಂದೆ ರಿಲೀಸ್ ಆಗಿದ್ದ ಟೀಸರ್ ಕೂಡ ದಾಖಲೆ ಸೃಷ್ಟಿಸಿತ್ತು. ಇದೀಗ ಅಪ್ಪು ಸಿನಿಮಾದ ಮೇಕಿಂಗ್ ಸ್ಟಿಲ್ಸ್(James Movie Making) ರಿವೀಲ್ ಆಗಿದೆ.
ಇದನ್ನೂ ಓದಿ: ಕನ್ನಡ ಪ್ರೇಕ್ಷಕನಿಗೆ ನಗುವಿನಲ್ಲೇ ಕಿಕ್ ಕೊಟ್ಟ 'ಓಲ್ಡ್ ಮಾಂಕ್'
ಕೌಂಟ್‌ಡೌನ್ ಶುರು..!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ಅಭಿನಯದ ಕೊನೇ ಸಿನಿಮಾ ‘ಜೇಮ್ಸ್’ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಮಾರ್ಚ್ 17ರಂದು ಅಂದ್ರೆ ಅಪ್ಪು ಹುಟ್ಟಹಬ್ಬದಂದು ‘ಜೇಮ್ಸ್’ ಜಗತ್ತಿನಾದ್ಯಂತ ರಿಲೀಸ್(James Movie Release)ಆಗಲಿದೆ. ಇದಕ್ಕಾಗಿ ಭರ್ಜರಿ ತಯಾರಿ ಕೂಡ ಸಾಗಿದೆ.
ಫ್ಯಾನ್ಸ್ ಸಂಭ್ರಮ
‘ಜೇಮ್ಸ್’ ಪೋಸ್ಟರ್ ರಿಲೀಸ್ ಆಗಿದ್ದೇ ತಡ ಇಡೀ ಭಾರತೀಯ ಚಿತ್ರರಂಗ ಅಪ್ಪು ಅವರ ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರಕ್ಕಾಗಿ ಅಪ್ಪು ಅಭಿಮಾನಿ ಬಳಗ ಕಾತರದಿಂದ ಕಾಯುತ್ತಿದೆ. ‘ಜೇಮ್ಸ್’ ಚಿತ್ರವನ್ನು ಕನ್ನಡ ಭಾಷೆಯ ಜೊತೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ‘ಜೇಮ್ಸ್’ಗೆ ಅಪ್ಪು ಡಬ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಪ್ಪುಗೆ ಅವರ ಸಹೋದರ ಶಿವರಾಜ್‌ಕುಮಾರ್(Shivarajkumar) ಧ್ವನಿ ನೀಡಿದ್ದಾರೆ.
ಇದನ್ನೂ ಓದಿ: Salman Khan Suicide Attempt : ಈ ಕಾಯಿಲೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಸಲ್ಮಾನ್ ಖಾನ್!
ಒಟ್ನಲ್ಲಿ ಬೆಟ್ಟದಷ್ಟು ನಿರೀಕ್ಷೆ ಹೊತ್ತು ಭಾರತೀಯ ಚಿತ್ರರಂಗ(Sandalwood)ದಲ್ಲಿ ಸಂಚಲನ ಸೃಷ್ಟಿಸಲು ‘ಜೇಮ್ಸ್’ ಸಜ್ಜಾಗಿದೆ. ಅಪ್ಪು ಮೇಲಿನ ಅಭಿಮಾನ ಸಾಗರದಂತೆ ಭೋರ್ಗರೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮೂವಿ ಕೂಡ ತೆರೆಗೆ ಬರಲಿದ್ದು, ಕನ್ನಡ ಸಿನಿರಂಗಕ್ಕೆ ಅದು ಮರೆಯಲಾಗದ ದಿನ ಎನ್ನಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.