ಬೆಂಗಳೂರು : ಸಾಕಷ್ಟು ನಿರೀಕ್ಷೆಗಳ ಮೂಲಕ ಇಂದು ರಿಲೀಸ್ ಆಗಿರುವ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ಅಭಿಮಾನಿಗಳ ದಿಲ್ ಖುಷ್ ಮಾಡಿದೆ. ಚಿತ್ರದ ನಾಯಕನ ಪ್ರೀತಿಯ ಶ್ರದ್ಧೆ ಎಲ್ಲರಿಗೂ ಇಷ್ಟವಾಗಿದೆ.
ಅಷ್ಟಕ್ಕೂ ಪ್ರೇಮ್(Prem) ಸಿನಿಮಾ ಅಂದಮೇಲೆ ಒಂದಷ್ಟು ಸರ್ಪ್ರೈಸ್ ಇದ್ದೇ ಇರುತ್ತೆ. ಅದರಲ್ಲೂ ಪ್ರೇಮ್ ಸಿನಿಮಾಗಳಲ್ಲಿ ಮ್ಯೂಸಿಕ್ ಮೋಡಿ ಮಾಡದೇ ಇದ್ದರೆ ಅದು ಪ್ರೇಮ್ ಸಿನಿಮಾ ಅಲ್ಲ ಅನ್ನಬಹುದು. ಹೀಗೆ 'ಏಕ್ ಲವ್ ಯಾ' ಕೂಡ ಇಂಪಾದ ಸಂಗೀತದ ಜೊತೆಗೆ ಅಭಿಮಾನಿಗಳ ಮನಸ್ಸು ಗೆದ್ದಿದೆ. ಈ ಮೂಲಕ ಪ್ರೇಮ್ ಮತ್ತೆ ಸಕ್ಸಸ್ ಗಿಟ್ಟಿಸಿದ್ದಾರೆ.
ಇದನ್ನೂ ಓದಿ : 'ಅಯೋಗ್ಯ-2' ಸೆಟ್ಟೇರುವುದು ಗ್ಯಾರಂಟಿ..! ಸಿನಿಮಾ ಶೂಟಿಂಗ್ಗೆ ಕೌಂಟ್ಡೌನ್..!
ಸಮಾಜಕ್ಕೂ ಸಂದೇಶ
ಪ್ರೇಮ ಕಥೆ(Love Story)ಯ ಜೊತೆಗೆ ಸಮಾಜಕ್ಕೂ ಸಂದೇಶ ನೀಡುವ ಮೂಲಕ ಪ್ರೇಮ್ ಮತ್ತೊಂದು ಡಿಫರೆಂಟ್ ಸಿನಿಮಾ ತೆರೆಗೆ ತಂದಿದ್ದಾರೆ. ಪ್ರೇಮ್ ಸಿನಿಮಾದಲ್ಲಿ ಲವ್ ಸ್ಟೋರಿ ಬಂದರೆ ಅದಕ್ಕೆ ಅದ್ಭುತ ತಿರುವು ಸಿಕ್ಕೇ ಸಿಗುತ್ತದೆ. ಹಾಗೇ ಈ ಸಿನಿಮಾದಲ್ಲೂ ಪ್ರೀತಿಯ ಕಥೆ ಅದ್ಭುತವಾಗಿದೆ. 'ಏಕ್ ಲವ್ ಯಾ' ಸಿನಿಮಾ ಟ್ರೇಲರ್ ಮತ್ತು ಹಾಡುಗಳ ಮೂಲಕ ಮಾಡಿದ್ದ ಮೋಡಿ ತೆರೆಯ ಮೇಲೂ ಕಾಣಬಹುದು.
'ಏಕ್ ಲವ್ ಯಾ'(Ek Love Ya) ಓಪನಿಂಗ್ ಪಡೆಯೋದೆ ಚಿತ್ರದ ನಾಯಕ ನಟ ಅಮರ್ ಇಂಟ್ರೋದಿಂದ. ಅಂದಹಾಗೆ ಈ ಚಿತ್ರದಲ್ಲಿ ಆರಂಭದಿಂದಲೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಾ ಹೋಗುತ್ತದೆ. ಏಪ್ರಿಲ್ 28 ನಾಯಕನ ಜೀವನವನ್ನೇ ಬದಲಿಸಿ ಹೊಸ ತಿರುವು ನೀಡುತ್ತದೆ. ಇದೇ ದಿನಾಂಕದ ಆಧಾರದಲ್ಲಿ ನಾಯಕನ ಫಸ್ಟ್ ಲವ್ ಕಹಾನಿ ರಿವೀಲ್ ಆದ ಬಳಿಕ ಸೆಕೆಂಡ್ ಆಫ್ ಮತ್ತಷ್ಟು ಕುತೂಹಲ ತೆರೆದಿಡುತ್ತದೆ.
ಇದನ್ನೂ ಓದಿ : ಹಾಸನ: ರಾತ್ರಿ ಕಳೆದು ಬೆಳಗಾಗೊವಷ್ಟರಲ್ಲಿ ಪ್ರಾಣ ಬಿಟ್ಟ ಇಡೀ ಕುಟುಂಬ!
ಒಟ್ಟಾರೆ ಹೇಳುವುದಾದರೆ ಮ್ಯೂಸಿಕ್ ಮೂಲಕ ಪ್ರೀತಿಯ ಕಥೆ ಹೇಳಿರುವ ನಿರ್ದೇಶಕ ಪ್ರೇಮ್ ಸಾಮಾಜಿಕ ಸಂದೇಶವನ್ನೂ ನೀಡಿದ್ದಾರೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಅಭಿಮಾನಿಗಳ ಪ್ರತಿಕ್ರಿಯೆಗೆ ಪ್ರೇಮ್ ಖುಷ್ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.