Duniya Vijay : 'ಸಲಗ' ಬಳಿಕ ಮತ್ತೊಂದು ಮಾಸ್‌ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ದುನಿಯಾ ವಿಜಿ

ಕನ್ನಡಿಗರ ಮೆಚ್ಚುಗೆಗೆ ಪಾತ್ರವಾದ 'ಸಲಗ' ಚಿತ್ರಮಂದಿರದಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿ, ಗಲ್ಲಾಪೆಟ್ಟಿಗೆಯಲ್ಲೂ ದಾಖಲೆ ಬರೆದಿತ್ತು. ಇದೀಗ ದುನಿಯಾ ವಿಜಿ 'ಸಲಗ' ಬಳಿಕ ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಸಜ್ಜಾಗಿದ್ದಾರೆ.

Written by - Malathesha M | Last Updated : Feb 25, 2022, 04:46 PM IST
  • ಸ್ಯಾಂಡಲ್‌ವುಡ್‌ನಲ್ಲಿ 'ಸಲಗ' ಸಿನಿಮಾ ಸಖತ್‌ ಸದ್ದು ಮಾಡಿತ್ತು
  • ಸಲಗ' ಯಶಸ್ಸಿನ ಬಳಿಕ ಮತ್ತೊಂದು ಮಾಸ್‌ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ದುನಿಯಾ ವಿಜಿ
  • ವಿಕೆ 28 ಎಂಬ ಟೈಟಲ್​ ಇರುವ ಫೋಟೋವನ್ನು ದುನಿಯಾ ವಿಜಯ್​ ಶೇರ್​ ಮಾಡಿಕೊಂಡಿದ್ದಾರೆ.
Duniya Vijay : 'ಸಲಗ' ಬಳಿಕ ಮತ್ತೊಂದು ಮಾಸ್‌ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ದುನಿಯಾ ವಿಜಿ title=

ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ 'ಸಲಗ' ಸಿನಿಮಾ ಸಖತ್‌ ಸದ್ದು ಮಾಡಿತ್ತು. ಕನ್ನಡಿಗರ ಮೆಚ್ಚುಗೆಗೆ ಪಾತ್ರವಾದ 'ಸಲಗ' ಚಿತ್ರಮಂದಿರದಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿ, ಗಲ್ಲಾಪೆಟ್ಟಿಗೆಯಲ್ಲೂ ದಾಖಲೆ ಬರೆದಿತ್ತು. ಇದೀಗ ದುನಿಯಾ ವಿಜಿ 'ಸಲಗ' ಬಳಿಕ ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಸಜ್ಜಾಗಿದ್ದಾರೆ.

 'ಸಲಗ' ಯಶಸ್ಸಿನ ಬಳಿಕ ಮತ್ತೊಂದು ಮಾಸ್‌ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ದುನಿಯಾ ವಿಜಿ(Duniya Vijay). 'ಸಲಗ' ಯಶಸ್ಸಿನ ನಂತರ ನಟ ದುನಿಯಾ ವಿಜಯ್‌ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಇದೀಗ ವಿಜಯ್ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನಟ ದುನಿಯಾ ವಿಜಯ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದು, ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Ek Love Ya success : ಪ್ರೇಕ್ಷಕರ ಮನ ಗೆದ್ದ 'ಏಕ್ ಲವ್ ಯಾ'! ಪ್ರೇಮ್‌ ಸಿನಿಮಾದಲ್ಲಿ ಮತ್ತೆ ಮ್ಯೂಸಿಕ್‌ ಮೋಡಿ

ವಿಜಯ್​ ಸೋಷಿಯಲ್​ ಮೀಡಿಯಾ(Social Media)ದಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದು, ಇದು ಅವರ ನಟನೆಯ 28ನೇ ಸಿನಿಮಾ ಆಗಲಿದೆ. ಪೋಸ್ಟರ್‌ ಮೂಲಕ ಕ್ರೇಜ್‌ ಕ್ರಿಯೇಟ್‌ ಮಾಡಿರುವ ದುನಿಯಾ ವಿಜಿ, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ.

ಏನಿದೆ ಪೋಸ್ಟರ್‌ನಲ್ಲಿ..?

ಅದರ ಫಸ್ಟ್​ ಲುಕ್ ಕೂಡ ರಿಲೀಸ್​ ಆಗಿದೆ. ವಿಕೆ 28(VK28) ಎಂಬ ಟೈಟಲ್​ ಇರುವ ಫೋಟೋವನ್ನು ದುನಿಯಾ ವಿಜಯ್​ ಶೇರ್​ ಮಾಡಿಕೊಂಡಿದ್ದಾರೆ. ಈ ಹೊಸ ಸಿನಿಮಾದ ಪೋಸ್ಟರ್​ನಲ್ಲಿ ಆರ್​​​ಎಕ್ಸ್​ ಬೈಕ್​ನಲ್ಲಿ ವ್ಯಕ್ತಿಯೊಬ್ಬ ಕೂತಿರುವ ಚಿತ್ರವಿದೆ. ಕೈ ಹಾಗೂ ಯಮಹಾ ಆರ್​ಎಕ್ಸ್​ 100 ಬೈಕ್​ ತೋರಿಸಲಾಗಿದೆ. ಕೈ ರಕ್ತಸಿಕ್ತವಾಗಿದ್ದು, ಈ ಸಿನಿಮಾ ಕೂಡ ರೌಡಿಸಂ ಸಿನಿಮಾ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ.

ಇದನ್ನೂ ಓದಿ : 'ಅಯೋಗ್ಯ-2' ಸೆಟ್ಟೇರುವುದು ಗ್ಯಾರಂಟಿ..! ಸಿನಿಮಾ ಶೂಟಿಂಗ್‌ಗೆ ಕೌಂಟ್‌ಡೌನ್..!

ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರ(VK28 Movie )ಕ್ಕೆ ಮಾಸ್ತಿ ಸಂಭಾಷಣೆ ಬರೆಯವ ಸಾಧ್ಯತೆಯಿದೆ. ಸಂಗೀತ ನಿರ್ದೇಶಕ ಚರಣ್‌ ರಾಜ್‌ ದುನಿಯಾ ವಿಜಯ್‌ ಅವರ ಹೊಸ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News