James Trademark Song: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Powerstar Puneeth Rajkumar) ಅಭಿನಯದ 'ಜೇಮ್ಸ್' ಸಿನಿಮಾದ 'ಟ್ರೆಡ್ ಮಾರ್ಕ್' ಸಾಂಗ್ ಇಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಟೀಸರ್ ನಲ್ಲಿ 'ರೆಕಾರ್ಡ್ಸ್ ಬ್ರೇಕ್ ಮಾಡೋದು ಅಭ್ಯಾಸ' ಅಂದಿದ್ದ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು 'ಜೇಮ್ಸ್' ಆಗಿ 'ಟ್ರೆಡ್ ಮಾರ್ಕ್' ಹಾಡಿನಲ್ಲಿ ಮಿಂಚಿದ್ದಾರೆ.


COMMERCIAL BREAK
SCROLL TO CONTINUE READING

ವಿಜಯನಗರದ 'ಬಿಜಿಎಸ್' ಮೈದಾನದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಬೆಳಗ್ಗೆ 11.11ಕ್ಕೆ ಸಾಂಗ್ (James Trademark Song) ರಿಲೀಸ್ ಆಯಿತು. ಜೇಮ್ಸ್ ಗ್ಲಿಂಪ್ಸ್ ಜೊತೆ ಲಿರಿಕಲ್ ಸಾಂಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪ್ರಮೋಷನಲ್ ಸಾಂಗ್ ನಲ್ಲಿ ರಚಿತಾ ರಾಮ್, ಆಶಿಕಾ ರಂಗನಾಥ್, ಶ್ರೀ ಲೀಲಾ ಹೆಜ್ಜೆ ಹಾಕಿದ್ದಾರೆ. ಹಾಗೇ ಚರಣ್ ರಾಜ್, ಚಂದನ್ ಶೆಟ್ಟಿ, ಕೋರಿಯೋಗ್ರಫರ್ ಮೋಹನ್ ಕಾಣಿಸಿಕೊಂಡಿದ್ದಾರೆ. James: ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ನೋಡಲು ಚಿರಂಜೀವಿ, ಜೂ.ಎನ್‌ಟಿಆರ್‌ ಬರ್ತಾರಾ..?


ಎಲ್ಲೆಲ್ಲೂ ಹವಾ..!
ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ 'ಜೇಮ್ಸ್' (James) ಸಿನಿಮಾದ ಟೀಸರ್ ಎಲ್ಲೆಲ್ಲೂ ಹವಾ ಎಬ್ಬಿಸಿತ್ತು. ಅಲ್ಲದೆ ಹಲವು ದಾಖಲೆಗಳನ್ನೂ 'ಜೇಮ್ಸ್' ಸಿನಿಮಾದ ಟೀಸರ್ ಪುಡಿ ಪುಡಿ ಮಾಡಿದೆ. ಇದೀಗ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗಿದ್ದು, ಅಪ್ಪು ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ.


ಇದನ್ನೂ ಓದಿ- Puneeth Rajkumar: ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಉಡಾವಣೆ ಆಗಲಿದೆ ಉಪಗ್ರಹ


ಅಪ್ಪು ಹುಟ್ಟುಹಬ್ಬಕ್ಕೆ (Appu Birthday) 'ಜೇಮ್ಸ್' ರಿಲೀಸ್ ಆಗಿ, ದೇಶಾದ್ಯಂತ ಹವಾ ಎಬ್ಬಿಸೋದು ಪಕ್ಕಾ ಆಗಿದೆ. ಸಿನಿಮಾ ಬಿಡುಗಡೆಗೆ ಕೆಲ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ವೇಗವಾಗಿ ಕೆಲಸಗಳು ಸಾಗುತ್ತಿವೆ. ಇದರ ನಡುವೆ ಚಿತ್ರದ ಪ್ರತಿಯೊಂದು ಅಪ್ ಡೇಟ್ ಕೂಡ ಕರುನಾಡಿನಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿದೆ. ಇಂದು ಜೇಮ್ಸ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು ಹಾಡು ಕೇಳಿ ಕನ್ನಡಿಗರು ಫಿದಾ ಆಗಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.