James: ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ನೋಡಲು ಚಿರಂಜೀವಿ, ಜೂ.ಎನ್‌ಟಿಆರ್‌ ಬರ್ತಾರಾ..?

ಹಿಂದೆಂದೂ ಈ ರೀತಿ ಸಿನಿಮಾ ರಿಲೀಸ್‌ ಆಗಿರಬಾರದು.. ಮುಂದೆ ಕೂಡ ಅಂತಹ ರಿಲೀಸ್‌ ನೋಡಿರಬಾರದು. ಯಾಕಪ್ಪಾ ಈ ಡೈಲಾಗ್‌ ಅಂದ್ರೆ, ಅಪ್ಪು ಅಭಿನಯದ ಕೊನೇ ಸಿನಿಮಾ ಬಿಡುಗಡೆ ಮಾಡೋದಕ್ಕೆ ಅಭಿಮಾನಿ ಬಳಗ ನಡೆಸಿರುವ ತಯಾರಿ ಹಾಗಿದೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ಚಿತ್ರತಂಡ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

Written by - Malathesha M | Edited by - Yashaswini V | Last Updated : Feb 27, 2022, 01:37 PM IST
  • ಅಪ್ಪು ಹುಟ್ಟುಹಬ್ಬಕ್ಕೆ 'ಜೇಮ್ಸ್' ರಿಲೀಸ್ ಆಗಿ, ದೇಶಾದ್ಯಂತ ಹವಾ ಎಬ್ಬಿಸೋದು ಪಕ್ಕಾ ಆಗಿದೆ.
  • ಬಿಡುಗಡೆಗೆ ಕೆಲ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ವೇಗವಾಗಿ ಕೆಲಸಗಳು ಸಾಗುತ್ತಿವೆ.
  • ಹೀಗಾಗಿ ಅತಿ ಶೀಘ್ರದಲ್ಲೇ 'ಜೇಮ್ಸ್' ಪ್ರಿ-ರಿಲೀಸ್ ಇವೆಂಟ್‌ ಏರ್ಪಡಿಸಲು ಚಿತ್ರ ತಂಡ ಸಿದ್ಧತೆಗಳನ್ನು ನಡೆಸಿದೆ.
James: ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ನೋಡಲು ಚಿರಂಜೀವಿ, ಜೂ.ಎನ್‌ಟಿಆರ್‌ ಬರ್ತಾರಾ..? title=
Punith Rajkumar last film James Prerelease event

ಬೆಂಗಳೂರು:  ಒಂದು ಕಡೆ ಪವರ್‌ ಸ್ಟಾರ್‌ ಸಿನಿಮಾ ಬಿಡುಗಡೆಗೆ ಸಿದ್ಧತೆ ಭರದಿಂದ ಸಾಗಿದ್ದರೆ, ಫ್ಯಾನ್ಸ್ ಸಂಭ್ರಮಾಚರಣೆ ಮುಗಿಲು ಮುಟ್ಟುವ ನಿರೀಕ್ಷೆ ದಟ್ಟವಾಗಿದೆ. ಈ ಮಧ್ಯೆ 'ಜೇಮ್ಸ್ ಚಿತ್ರದ ಪ್ರೀರಿಲೀಸ್‌ ಇವೆಂಟ್‌ಗೆ ದೊಡ್ಡದೊಡ್ಡ ಸ್ಟಾರ್‌ಗಳನ್ನೇ ಕರೆಸಲು‌ ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ. ಹಾಗಾದ್ರೆ ಯಾವೆಲ್ಲ ಸ್ಟಾರ್‌ಗಳು ಇವೆಂಟ್‌ನಲ್ಲಿ ಭಾಗವಹಿಸುತ್ತಾರೆ..? ಅದರ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ. 

ಹಿಂದೆಂದೂ ಈ ರೀತಿ ಸಿನಿಮಾ ರಿಲೀಸ್‌ ಆಗಿರಬಾರದು.. ಮುಂದೆ ಕೂಡ ಅಂತಹ ರಿಲೀಸ್‌ ನೋಡಿರಬಾರದು. ಯಾಕಪ್ಪಾ ಈ ಡೈಲಾಗ್‌ ಅಂದ್ರೆ, ಅಪ್ಪು ಅಭಿನಯದ ಕೊನೇ ಸಿನಿಮಾ ಬಿಡುಗಡೆ ಮಾಡೋದಕ್ಕೆ ಅಭಿಮಾನಿ ಬಳಗ ನಡೆಸಿರುವ ತಯಾರಿ ಹಾಗಿದೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ಚಿತ್ರತಂಡ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಅಪ್ಪು ಹುಟ್ಟುಹಬ್ಬಕ್ಕೆ 'ಜೇಮ್ಸ್' (James) ರಿಲೀಸ್ ಆಗಿ, ದೇಶಾದ್ಯಂತ ಹವಾ ಎಬ್ಬಿಸೋದು ಪಕ್ಕಾ ಆಗಿದೆ. ಬಿಡುಗಡೆಗೆ ಕೆಲ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ವೇಗವಾಗಿ ಕೆಲಸಗಳು ಸಾಗುತ್ತಿವೆ. ಹೀಗಾಗಿ ಅತಿ ಶೀಘ್ರದಲ್ಲೇ 'ಜೇಮ್ಸ್' ಪ್ರಿ-ರಿಲೀಸ್ ಇವೆಂಟ್‌ ಏರ್ಪಡಿಸಲು ಚಿತ್ರ ತಂಡ ಸಿದ್ಧತೆಗಳನ್ನು ನಡೆಸಿದೆ. ಹಾಗೇ ಪ್ರೀ ರಿಲಿಸ್‌ಗೆ ದೊಡ್ಡ ದೊಡ್ಡ ಸ್ಟಾರ್‌ಗಳನ್ನೇ ಕರೆಸಲು ಪ್ಲ್ಯಾನ್‌ ಮಾಡಲಾಗಿದೆ.

ಇದನ್ನೂ ಓದಿ- Power Star Puneet Rajkumar: ಅಪ್ಪು ಅಭಿನಯದ 'ಜೇಮ್ಸ್‌' ಎದುರು ಯಾರೂ ನಿಲ್ಲೋಕೆ ಚಾನ್ಸೇ ಇಲ್ಲ..!

ಅಭಿಮಾನಿಗಳ ಉಡುಗೊರೆ:
ಪುನೀತ್ ರಾಜ್‌ಕುಮಾರ್ (Punith Rajkumar) ಕೊನೆ ಸಿನಿಮಾ 'ಜೇಮ್ಸ್' (James) ಮೇಲಿನ ನಿರೀಕ್ಷೆಗಳು ಮುಗಿಲು ಮುಟ್ಟಿವೆ. ಇಷ್ಟು ವರ್ಷ ಅಪ್ಪು ಚಿತ್ರರಂಗ ಹಾಗೂ ಸಮಾಜ ಮತ್ತು ಕರುನಾಡಿಗೆ ಮಾಡಿದ್ದ ಸೇವೆಗೆ 'ಜೇಮ್ಸ್' ಮೂಲಕ ಉಡುಗೊರೆ ನೀಡಲು ಇಡೀ ಕರುನಾಡು ಸಜ್ಜಾಗಿದೆ. ಕೋಟಿ ಕೋಟಿ ಕನ್ನಡಿಗರು ಜೇಮ್ಸ್‌ ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಪುನೀತ್ ಅವರ  ಹುಟ್ಟುಹಬ್ಬದ ದಿನದಂದೇ ಸಿನಿಮಾ ರಿಲೀಸ್‌ ಆಗುತ್ತಿರುವ ಹಿನ್ನೆಲೆ ಅಪ್ಪು ಅಭಿಮಾನಿ ಬಳಗಕ್ಕೆ ಡಬಲ್‌ ಧಮಾಖಾ ಸಿಕ್ಕಂತಾಗಿದೆ. ಹೀಗೆ ಬೆಟ್ಟದಷ್ಟು ನಿರೀಕ್ಷೆ ಇರುವ ಅಪ್ಪು ಸಿನಿಮಾದ ಪ್ರೀ ರಿಲೀಸ್‌ ಇವೆಂಟ್‌ಗೆ ತೆಲುಗು ಸಿನಿ ರಂಗದ ಇಬ್ಬರು ಘಟಾನುಘಟಿ ನಟರು ಅತಿಥಿಗಳಾಗಿ ಬರುವ ನಿರೀಕ್ಷೆ ಇದೆ.

ಲೆಜೆಂಡ್‌ಗಳ ಎಂಟ್ರಿ..!
ಅಂದಹಾಗೆ 'ಜೇಮ್ಸ್' (James) ಟೀಸರ್ ರಿಲೀಸ್‌ಗೂ ಮುನ್ನ ನಿರ್ದೇಶಕ ಚೇತನ್ ಮೆಗಾ ಪ್ರಿ-ರಿಲೀಸ್ ಇವೆಂಟ್‌ನ ಮಾಡುವುದಾಗಿ ಕನ್ಫರ್ಮ್‌ ಮಾಡಿದ್ದರು. ಚೇತನ್‌ ಅವರ ಪ್ಲ್ಯಾನ್‌ನಂತೆ ಚಿತ್ರತಂಡ ಸಿನಿಮಾ ಬಿಡುಗಡೆಗೂ ಮುನ್ನವೇ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ. 'ಜೇಮ್ಸ್' ಫಸ್ಟ್ ಲುಕ್ ಹಾಗೂ ಟೀಸರ್‌ನಿಂದ ಥ್ರಿಲ್ ಆಗಿರುವ ಅಪ್ಪು ಫ್ಯಾನ್ಸ್ 'ಜೇಮ್ಸ್' ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಈ ಇವೆಂಟ್‌ನಲ್ಲಿ ಟಾಲಿವುಡ್‌ ಲೆಜೆಂಡ್‌ಗಳು ಭಾಗವಹಿಸೋದು ಗ್ಯಾರಂಟಿ ಎನ್ನಲಾಗುತ್ತಿದೆ.

ಇದನ್ನೂ ಓದಿ- 'ಜೇಮ್ಸ್‌' ಬಂದ್ರು ಜೇಮ್ಸ್..! ಪರಭಾಷೆಗಳಲ್ಲೂ ಹವಾ ಎಬ್ಬಿಸಿದ ಪುನೀತ್ ಸಿನಿಮಾ ಟೀಸರ್‌

ಅಷ್ಟಕ್ಕೂ ನೆರೆಯ ಆಂಧ್ರ ಹಾಗೂ ತೆಲಂಗಾಣದಲ್ಲೂ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌  (Punith Rajkumar) ಅವರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಅಲ್ಲದೆ ತೆಲುಗು ಚಿತ್ರರಂಗದಲ್ಲೂ ದಿವಂಗತ ಪುನೀತ್‌ ಅವರ ಬಗ್ಗೆ ಪ್ರೀತಿ ಹಾಗೂ ವಿಶ್ವಾಸ ಇಟ್ಟುಕೊಂಡಿರುವ ದಿಗ್ಗಜ ನಟರು ಇದ್ದಾರೆ. ಇವರಲ್ಲಿ ಚಿರಂಜೀವಿ ಹಾಗೂ ಜೂ.ಎನ್‌ಟಿಆರ್ ಕೂಡ ಒಬ್ಬರು. ಹೀಗೆ ಟಾಲಿವುಡ್‌ ಅಂಗಳದ ಲೆಜೆಂಡ್‌ ನಟರಾದ ಚಿರಂಜೀವಿ ಹಾಗೂ ಜೂ.ಎನ್‌ಟಿಆರ್ ಅವರನ್ನು ಪ್ರೀ ರಿಲೀಸ್‌ಗೆ ಕರೆಸಲು ಚಿಂತನೆ ನಡೆದಿದೆ. ಮಾರ್ಚ್ 06ರಂದು ಹೊಸಪೇಟೆಯಲ್ಲಿ ಪ್ರೀ-ರಿಲೀಸ್ ಇವೆಂಟ್ ನಡೆಯಲಿದ್ದು, ಕಾರ್ಯಕ್ರಮಕ್ಕೆ  ಸಕಲ ಸಿದ್ಧತೆಗಳು ಸಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News