ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ಬಿಡುಗಡೆ ದಿನಾಂಕ ಈಗ ಅಂತಿಮಗೊಂಡಿದ್ದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಇದೇ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ಸಿನಿಮಾವೊಂದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.ಕೊರೊನಾದಿಂದ ಚಿತ್ರದ ಬಿಡುಗಡೆ ವಿಳಂಬವಾಗಿತ್ತು ಈಗ ಚಿತ್ರದ ತಂಡವು ಎಪ್ರಿಲ್ 1 ರಂದು ಸಿನಿಮಾ ಥೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವ ಸಂಗತಿಯನ್ನು ಈಗ ಪುನೀತ್ ರಾಜಕುಮಾರ್ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.


ಪವರ್ ಸ್ಟಾರ್ ಫ್ಯಾನ್ಸ್ ಗೆ ' ಗುಡ್ ನ್ಯೂಸ್': ಆರಂಭವಾಯ್ತು 'ಯುವರತ್ನ'ನ ಆರ್ಭಟ!


ಈಗಾಗಲೇ ಯುವರತ್ನ (Yuvarathnaa) ದ ಪವರ್ ಆಫ್ ಯೂತ್, ಹಾಗೂ ನೀನಾದೆನಾ ಹಾಡುಗಳಿಗೆ ಅಭಿಮಾನಿ ದೇವರು ಫುಲ್ ಫಿಧಾ ಆಗಿದ್ದಾನೆ.ಸೂಪರ್ ಹಿಟ್ ಚಿತ್ರ ರಾಜಕುಮಾರ ನಂತರ ಎರಡನೇ ಬಾರಿಗೆ ನಿರ್ದೇಶಕ, ನಟ ಮತ್ತು ನಿರ್ಮಾಪಕರನ್ನು ಈ ಚಿತ್ರ ಮತ್ತೆ ಒಗ್ಗೂಡಿಸಿದೆ. ಈ ಹಿಂದೆ ಕೆಜಿಎಫ್ ಅನ್ನು ಪ್ಯಾನ್-ಇಂಡಿಯಾ ಮಟ್ಟಕ್ಕೆ ಕೊಂಡೊಯ್ದ ವಿಜಯ್ ಕಿರಗಂದೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.


ಸಂಗೀತ ನಿರ್ದೇಶಕ ತಮನ್ 'ಪವರ್ ಆಫ್ ಯೂತ್' ಹಾಡಿಗೆ ಟ್ಯೂನ್ ನ್ನು ಸಂಯೋಜಿಸಿದ್ದಾರೆ.ಸಾಹಿತ್ಯವನ್ನು ರಾಮ್‌ಜೋಗಯ್ಯ ಶಾಸ್ತ್ರಿ ಬರೆದಿದ್ದಾರೆ ಮತ್ತು ಹಾಡನ್ನು ನಕಾಶ್ ಅಜೀಜ್ ಹಾಡಿದ್ದಾರೆ. ವೆಂಕಟೇಶ್ ಅಂಗುರಾಜ್ ಅವರು ಈ ಚಿತ್ರಕ್ಕಾಗಿ ಛಾಯಾಗ್ರಹಣ ಮಾಡಿದ್ದಾರೆ.ಇನ್ನು ಈ ಯುವರತ್ನ ಚಿತ್ರದ ನಾಯಕಿ ಸಯೇಶಾ ಅವರು ಸ್ಯಾಂಡಲ್ ವುಡ್ ಗೆ ಮೊದಲ ಬಾರಿಗೆ ಎಂಟ್ರಿಕೊಟ್ಟಿದ್ದಾರೆ.


ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಪುನೀತ್ ರಾಜ್ ಕುಮಾರ್ ಬ್ಯಾನರ್ ನ ಈ ಸಿನಿಮಾ


ಈ ಚಿತ್ರದಲ್ಲಿ ಖಳನಾಯಕನಾಗಿ ಧನಂಜಯ್ ಎದುರಾಳಿಯಾಗಿ ಕಾಣಿಸಿಕೊಂಡಿದ್ದು, ದಿಗಂತ್, ಸೋನು ಗೌಡ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.