ಬೆಂಗಳೂರು: ಸ್ಯಾಂಡಲ್‌ವುಡ್‌ನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸವಿ ನೆನಪಿನಲ್ಲಿ ಶುಕ್ರವಾರ(ಅ.21) ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿದೆ ನೋಡಿ ‘ಪುನೀತ ಪರ್ವ’ ಅರಮನೆ ಮೈದಾನದ ನೇರ ಪ್ರಸಾರ!


COMMERCIAL BREAK
SCROLL TO CONTINUE READING

ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಾಕ್ಷ್ಯಚಿತ್ರ ‘ಗಂಧದ ಗುಡಿ’ಯ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮಕ್ಕೆ ‘ಪುನೀತ ಪರ್ವ’ ಎಂದು ಹೆಸರಿಡಲಾಗಿದೆ. ಇಂದು ಸಂಜೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಭಾಗಿಯಾಗುವ ಸಾದ್ಯತೆ ಹಿನ್ನೆಲೆ  ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಚಾರಿ ಪೊಲೀಸರಿಂದ ಮುನ್ನೆಚ್ಚರಿಕ ಕ್ರಮ ಕೈಗೊಳ್ಳಲಾಗಿದೆ.


ಕಾರ್ಯಕ್ರಮಕ್ಕೆ ಆಗಮಿಸಲಿರುವ ಲಕ್ಷಾಂತರ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಹಲವು ಮಾರ್ಗಗಳನ್ನು ಸಂಚಾರಿ ಪೊಲೀಸರು ಗುರುತಿಸಿದ್ದಾರೆ. ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ನಾಯಂಡನಹಳ್ಳಿ ಜಂಕ್ಷನ್ , ಸುಮ್ಮುನಹಳ್ಳಿ ಬ್ರಿಡ್ಜ್, ರಾಜ್‍ಕುಮಾರ್ ಸಮಾಧಿ, ಗೋರಗುಂಟೆಪಾಳ್ಯ ಜಂಕ್ಷನ್, ಬಿಇಎಲ್ ಸೇತುವೆ, ಹೆಬ್ಬಾಳ ಮೇಲ್ಸೇತುವೆ, ಮೆಕ್ರಿ ಸರ್ಕಲ್‍ನಿಂದ ಅರಮನೆ ಮೈದಾನಕ್ಕೆ ತಲುಪಲು ವ್ಯವಸ್ಥೆ ಮಾಡಲಾಗಿದೆ.


ಇದನ್ನೂ ಓದಿ"ಗಂಧದಗುಡಿ" ರಾಜಕುಮಾರನ ಪುನೀತ ಪರ್ವಕ್ಕೆ ಕೆಲವೇ ಗಂಟೆಗಳು ಬಾಕಿ..!


ತುಮಕೂರು ಕಡೆಯಿಂದ ಬರುವ ವಾಹನಗಳು ತುಮಕೂರು ರಸ್ತೆ, ಗೋರಗುಂಟೆಪಾಳ್ಯ ಜಂಕ್ಷನ್, ಬಿಇಎಲ್ ಸೇತುವೆ, ಹೆಬ್ಬಾಳ ಮೇಲ್ಸೇತುವೆ ಮೆಕ್ರಿ ಸರ್ಕಲ್‍ನಿಂದ ಅರಮನೆ ಮೈದಾನಕ್ಕೆ ತಲುಪಲು ವ್ಯವಸ್ಥೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಕಡೆಯಿಂದ ಬರುವ ವಾಹನಗಳು, ಮೇಜರ್ ಉನ್ನಿಕೃಷ್ಣ ರಸ್ತೆ, ಯಲಹಂಕ ಪೊಲೀಸ್ ಠಾಣೆ, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲ್ಸೇತುವೆ ಮೆಕ್ರಿ ಸರ್ಕಲ್‍ನಿಂದ ಅರಮನೆ ಮೈದಾನಕ್ಕೆ ತಲುಪಲು ವ್ಯವಸ್ಥೆ ಮಾಡಲಾಗಿದೆ.


ಹೊಸೂರ ಕಡೆಯಿಂದ ಬರುವ ವಾಹನಗಳು ಹೊಸೂರು ರಸ್ತೆ, ಮಡಿವಾಳ ಚಕ್‍ಪೋಸ್ಟ್, ಡೈರಿ ಸರ್ಕಲ್, ಲಾಲ್ ಬಾಗ್ ಮುಖ್ಯ ದ್ವಾರ, ಮಿನರ್ವ ಸರ್ಕಲ್, ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಬಸವೇಶ್ವರ ವೃತ್ತ, ಮೌಂಟ್ ಕಾರ್ಮಲ್ ಕಾಲೇಜ್, ವಸಂತ ನಗರ ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನಕ್ಕೆ ತಲುಪಬಬಹುದು. ಕೋಲಾರ-ಹೊಸಕೋಟೆ ಕಡೆಯಿಂದ ಬರುವ ವಾಹನಗಳು ಕೆ‌.ಆರ್.ಪುರ, ಟಿನ್ ಪ್ಯಾಕ್ಟ್ರಿ, ಹೆಣ್ಣೂರು ರಿಂಗ್ ರೋಡ್, ಹೆಬ್ಬಾಳ ಮೇಲ್ಸೇತುವೆ, ಮೆಕ್ರಿ ಸರ್ಕಲ್‍ನಿಂದ ಅರಮನೆ ಮೈದಾನಕ್ಕೆ ತಲುಪಲಿವೆ.


ಕಾರ್ಯಕ್ರಮಕ್ಕೆ ಬರುವ ಎಲ್ಲಾ ವಾಹಗಳಗೆ ಸರ್ಕಸ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಆರಂಭವಾಗುವ ಕ್ಷಣದಿಂದ ಕಾರ್ಯಕ್ರಮ‌ ಮುಗಿಯುವ ತನಕ ಸಂಚಾರ ದಟ್ಟಣೆ ಆಗದಂತೆ ಹೆಚ್ಚುವರಿ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ.


ಇದನ್ನೂ ಓದಿ: ನಟ ಧ್ರುವ ಸರ್ಜಾ, 'ಜೋಗಿ' ಪ್ರೇಮ್ ಹೊಸ ಚಿತ್ರಕ್ಕೆ 'KD' ಶೀರ್ಷಿಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ