Pushpa Sequel: ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಪುಷ್ಪ ಚಿತ್ರ ದಾಖಲೆಯ ಗಳಿಕೆ (Pushpa Box Office Collection) ಮುಂದುವರೆಸಿದೆ. ಈ ಚಿತ್ರ ಜನವರಿ 7 ರಂದು OTT ನಲ್ಲಿ ಬಿಡುಗಡೆಯಾಗಿದೆ. ಆದರೂ ಕೂಡ ಚಿತ್ರಮಂದಿರಗಳಲ್ಲಿ ಜನಸಂದಣಿ ಕಡಿಮೆಯಾಗುತ್ತಿಲ್ಲ. ನೀವು ಇದನ್ನು ಪ್ರೈಮ್ ವಿಡಿಯೋದಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನೀವು ವೀಕ್ಷಿಸಬಹುದು. ಚಿತ್ರದ ಹಿಂದಿ ಅವತರಿಣಿಕೆಗಾಗಿ ಅಭಿಮಾನಿಗಳು ಸ್ವಲ್ಪ ದಿನ ಕಾಯಬೇಕು. ಈ ಮಧ್ಯೆ, ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರು 'Pushpa: The Rule' ಅಂದರೆ, ಚಿತ್ರದ ಎರಡನೇ ಭಾಗಕ್ಕಾಗಿ ತಮ್ಮ ಶುಲ್ಕವನ್ನು (Rashmika Mandanna Fees) ಹೆಚ್ಚಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ವರದಿಗಳ ಪ್ರಕಾರ, ರಶ್ಮಿಕಾ ಚಿತ್ರದ ಮೊದಲ ಭಾಗಕ್ಕೆ 2 ಕೋಟಿ ರೂ. ಸಂಭಾವನೆ ಪಡೆದಿದ್ದು, ಎರಡನೇ ಭಾಗಕ್ಕೆ 3 ಕೋಟಿಗೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

  "ಮೋಹಕವಾಗಿ ಕಾಣುವುದು ಸವಾಲಿನ ಕೆಲಸ": ಐಟಂ ಸಾಂಗ್‌ ಬಗ್ಗೆ ಮಾತನಾಡಿದವರಿಗೆ ಸಮಂತಾ ಉತ್ತರ.!
WATCH:'ಕ್ಷಮಿಸಿ, ಸರಿ!' ಮಾಧ್ಯಮದವರ ಬಳಿ ಕ್ಷಮೆ ಕೇಳಿದ ಅಲ್ಲು ಅರ್ಜುನ್.. ಕಾರಣವೇನು?


ತೆಲುಗು ನಿರ್ದೇಶಕ ಸುಕುಮಾರ್ ಬರೆದು ನಿರ್ದೇಶಿಸಿದ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಸುನಿಲ್, ಅನಸೂಯಾ ಭಾರದ್ವಾಜ್ ಮತ್ತು ಅಜೋಯ್ ಘೋಷ್ ನಟಿಸಿದ್ದಾರೆ.


ಇದನ್ನೂ ಓದಿ-Samantha in Pushpa:'ಪುಷ್ಪ' ಐಟಮ್​ ಸಾಂಗ್​ನಲ್ಲಿ ಸಮಂತಾ ಲುಕ್ ನೋಡಿ ಬೆರಗಾದ ಅಭಿಮಾನಿಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.