Puttakkana Makkalu : ಪೊಲೀಸರ ಕೈಗೆ ಸಿಕ್ಕು ಲಾಠಿಯೇಟು ತಿನ್ನುತ್ತಿರೋ ಕಂಠಿನ ಕಾಪಾಡೋರು ಯಾರು?
Puttakkana Makkalu Kanti in Police Station : ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದೆ. ಪರೀಕ್ಷೆ ಬರೆಯಲು ಹೊರಟ ಸ್ನೇಹಾಗೆ ತಾಳಿ ಕಟ್ಟಿರುವ ಕಂಠಿ ಈಗ ಜೈಲು ಪಾಲಾಗಿದ್ದಾನೆ.
Puttakkana Makkalu : ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ದೊಡ್ಡ ತಿರುವು ಎದುರಾಗಿದೆ. ಬಂಗಾರಮ್ಮನ ಮಗ ಕಂಠಿ ಸ್ನೇಹಾಳಿಗೆ ತಾಳಿ ಕಟ್ಟಿದ್ದಾನೆ. ಅದು ಮನೆಯವರಿಗೂ ಗೊತ್ತಾಗಿದೆ. ಆದರೆ ಇದೀಗ ಸ್ನೇಹಾ ಕಂಠಿ ಹೇಳಿರುವ ಸುಳ್ಳುಗಳಿಂದ ನೊಂದು, ಕೋಪಗೊಂಡು ಅವನ ಮೇಲೆ ಕಂಪ್ಲೆಂಟ್ ಕೊಟ್ಟಿದ್ದಾಳೆ. ಬಂಗಾರಮ್ಮ ಮಾತ್ರ ಸ್ನೇಹಾ ಮೇಲೆ ಕೆಂಡ ಕಾರುತ್ತಿದ್ದಾಳೆ.
ಇನ್ನು ಸ್ನೇಹಾ ಯಾವುದನ್ನು ಲೆಕ್ಕಿಸದೇ ಕಂಠಿಯನ್ನು ಪೊಲೀಸ್‌ಗೆ ಹ್ಯಾಂಬಡ್ ಓವರ್ ಮಾಡಿದ್ದಾಳೆ. ಪೊಲೀಸರು ಕಂಠಿಯನ್ನು ಕರೆದುಕೊಂಡು ಹೋದ ನಂತರ ಬಂಗಾರಮ್ಮ ಸ್ನೇಹಾಳಿಗೆ ಬೆದರಿಕೆ ಹಾಕಿದ್ದಾಳೆ. ಆದರೆ ಸ್ನೇಹಾ ಇದ್ಯಾವುದನ್ನು ಪರಿಗಣಿಸದೇ ಸವಾಲಿಗೆ ಪ್ರತಿ ಸವಾಲು ಹಾಕಿ ಅಲ್ಲಿಂದ ಹೊರಡುತ್ತಾಳೆ. ಇನ್ನೂ ಕಂಠಿ ತಾಂಡವನ ಕೈಗೆ ಸಿಕ್ಕಿದ್ದಾನೆ.
ತಾಂಡವ ಕಂಠಿಯನ್ನು ಎಳೆದುಕೊಂಡು ಹೋಗುತ್ತಾನೆ ಆದರೆ ಕಂಠಿ ಮಾತ್ರ ನಾನು ಮಾಡಿದ ತಪ್ಪಿಗೆ ಸ್ನೇಹಾ ಶಿಕ್ಷೆ ಕೊಡುತ್ತಿದ್ದಾಳೆ ಎಂದುಕೊಂಡು ಸುಮ್ಮನಾಗುತ್ತಾನೆ. ತಾಂಡವ ಎಷ್ಟೇ ಮಾತನಾಡಿದರೂ ಕಂಠಿ ಮಾತ್ರ ತುಟಿ ಪಿಟಕ್ ಅನ್ನದೇ ನಿಂತಿರುತ್ತಾನೆ. ಕಂಠಿಗೆ ಎಷ್ಟೇ ಹೊಡೆದರು ಏನು ಆಗುವುದಿಲ್ಲ. ಬಟ್ಟೆ ಬಿಚ್ಚಿ ಹೊಡೆದರು ಸಹ ಏನು ಪ್ರತಿಕ್ರಿಯೆ ನೀಡದ ಕಂಠಿಯನ್ನು ನೋಡಲು ಆಗದ ಒಬ್ಬ ಪೊಲೀಸ್ ಬಂಗಾರಮ್ಮನಿಗೆ ಕರೆ ಮಾಡಿ ನಡೆಯುತ್ತಿರುವ ವಿಚಯದ ಬಗ್ಗೆ ಹೇಳುತ್ತಾನೆ.
ಇನ್ನೂ ಪುಟ್ಟಕ್ಕ ಸ್ನೇಹಾಳನ್ನು ಎಲ್ಲಗೆ ಹೋಗಿದ್ದೆ ಎಂದು ಕೇಳುತ್ತಾಳೆ. ಸ್ನೇಹಾ ಮದುವೆ ವಿಚಾರವಾಗಿ ಯಾರನ್ನು ಪಂಚಾಯಿತಿಗೆ ಸೇರಿಸುವ ಅಗತ್ಯವಿಲ್ಲ. ಅಲ್ಲಿಗೆ ಬರುವ ಪೊಲೀಸರೆಲ್ಲ ಸ್ಟೆಷನ್‌ನಲ್ಲಿದ್ದಾರೆ ಎನ್ನುತ್ತಾಳೆ ಇದನ್ನು ಕೇಳಿ ಎಲ್ಲರೂ ಶಾಕ್ ಆಗುತ್ತಾರೆ. ಇದನ್ನೆಲ್ಲಾ ನೋಡಿದ ಊರಿನವರು ನಿಮ್ಮ ಮಗಳು ಬಂಗಾರಮ್ಮನನ್ನು ಎದುರು ಹಾಕಿಕೊಂಡಿದ್ದಾಳೆ ಇದು ಒಳ್ಳೆಯದಲ್ಲ. ಈ ಸಮಯದಲ್ಲಿ ನಾವೇನಾದರೂ ಪಂಚಾಯಿತಿ ಕರೆದರೆ ಅವರ ಕೋಪಕ್ಕೆ ನಾವು ಗುರಿಯಾಗಬೇಕಾಗುತ್ತದೆ ಎಂದು ಹೇಳುತ್ತಾರೆ.
ಸ್ಟೆಷನ್‌ಗೆ ಹೋಗಿ ಕಂಠಿಯ ಅವಸ್ಥೆ ಕಂಡ ಬಂಗಾರಮ್ಮ ಸ್ನೇಹಾಳ ಮೇಲೆ ಇನ್ನು ಕೋಪಿತಳಾಗುತ್ತಾಳೆ. ಸ್ನೇಹಾ ಬಂದರೆ ಮಾತ್ರ ಕಂಠಿಯನ್ನು ಬಿಡುವುದಾಗಿ ಹೇಳಿದಾಗ ಬಂಗಾರಮ್ಮ ಸ್ನೇಹಾಳ ಮನೆಗೆ ಹೊರಟಿದ್ದಾಳೆ. ಕಿಡಿ ಕಾರೋ ಬಂಗಾರಮ್ಮ ಸಿಡಿತಿರೋ ಸ್ನೇಹಾಳ ಮದ್ಯ ಸಿಲುಕಿದ ಕಂಠಿ ಹೊರಬರೋದು ಯಾವಾಗ ಕಾದು ನೋಡಬೇಕು..
ಇದನ್ನೂ ಓದಿ-ದೀಪಿಕಾ-ಅಲಿಯಾ ಅಲ್ಲ ಈಕೆಯೇ ನೋಡಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ! ನಿಮಿಷಕ್ಕೆ ಚಾರ್ಜ್ ಎಷ್ಟು ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.