ದೀಪಿಕಾ-ಅಲಿಯಾ ಅಲ್ಲ ಈಕೆಯೇ ನೋಡಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ! ನಿಮಿಷಕ್ಕೆ ಚಾರ್ಜ್ ಎಷ್ಟು ಗೊತ್ತಾ?

ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಎಂದರೆ ಎಲ್ಲರ ಮನದಲ್ಲಿ ಮೊದಲು ಬರುವ ಹೆಸರುಗಳು ಅಂದರೆ ದೀಪಿಕಾ ಪಡುಕೋಣೆ ಅಥವಾ ಅಲಿಯಾ ಭಟ್, ಈ ರೀತಿ ನೀವು ಯೋಚಿಸುತ್ತಿದ್ದರೆ ಕೇಳಿ, ಈ ಟ್ಯಾಗ್ ಇದೀಗ ಖ್ಯಾತ ಬಾಲೀವುಡ್ ನಟಿ ಊರ್ವಶಿ ರೌತೇಲಾ ಹೆಸರಿಗೆ ಅಂಟಿಕೊಂಡಿದೆ.   

Written by - Nitin Tabib | Last Updated : Jul 10, 2023, 05:17 PM IST
  • ಮನರಂಜನಾ ಸುದ್ದಿಗಳ ಪ್ರಕಾರ, ದಕ್ಷಿಣ ಭಾರತದ ಮೆಗಾಸ್ಟಾರ್ ಚಿರಂಜೀವಿ ಅವರ ಚಿತ್ರ ವಾಲ್ಟೇರ್ ವೀರಯ್ಯನಲ್ಲಿ ನೃತ್ಯ ಪ್ರದರ್ಶನಕ್ಕಾಗಿ ನಟಿ ಊರ್ವಶಿ ರೌಟೇಲಾ ಶುಲ್ಕ 2 ಕೋಟಿ ರೂ. ಆಗಿತ್ತು.
  • ಊರ್ವಶಿ ರೌತೇಲಾ ವೃತ್ತಿ ಜೀವನದ ಕುರಿತು ಹೇಳುವುದಾದರೆ, ನಟಿ 2013 ರಲ್ಲಿ ಮಿಸ್ ಯೂನಿವರ್ಸ್ ಆದ ಬಳಿಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಳು.
  • ಊರ್ವಶಿ ರೌತೇಲಾ ಅವರು ಸಿಂಗ್ ಸಾಬ್ ದಿ ಗ್ರೇಟ್ ಚಿತ್ರದಲ್ಲಿ ಸನ್ನಿ ಡಿಯೋಲ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಳು.
ದೀಪಿಕಾ-ಅಲಿಯಾ ಅಲ್ಲ ಈಕೆಯೇ ನೋಡಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ! ನಿಮಿಷಕ್ಕೆ ಚಾರ್ಜ್ ಎಷ್ಟು ಗೊತ್ತಾ? title=

ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌತೇಲಾ ಅವರ ಚಲನ ಚಿತ್ರಗಳಲ್ಲಿನ (Bollywood News In Kannada) ಪ್ರದರ್ಶನ ಅಷ್ಟೊಂದು ವಿಶೇಷವಾಗಿಲ್ಲ. ಆದರೆ, ಆಕೆ ಫ್ಯಾಷನ್, ಮಾಡೆಲಿಂಗ್ ಮತ್ತು ನೃತ್ಯದ ಆಧಾರದ ಮೇಲೆ ಸಾಕಷ್ಟು ಹೆಸರು ಗಳಿಸಿದ್ದಾಳೆ. ಈ ಬಾರಿಯೂ ಊರ್ವಶಿ ರೌತೇಲಾ ನೃತ್ಯದ ಆಧಾರದ ಮೇಲೆ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದಾಳೆ. ಹೌದು... ಇತ್ತೀಚೆಗೆ ಊರ್ವಶಿ ರೌತೇಲಾ ದಕ್ಷಿಣ ಭಾರತದ ಚಿತ್ರವೊಂದರ ಮೂರು ನಿಮಿಷದ ಹಾಡಿನಲ್ಲಿ ನಟಿಸಲು ಸುಮಾರು 3 ಕೋಟಿ ಬೇಡಿಕೆ ಇಟ್ಟಿದ್ದಾರೆ ಎಂಬ ವರದಿಗಳು ಪ್ರಕಟಗೊಂಡಿವೆ. ಅಂದರೆ 1 ನಿಮಿಷಕ್ಕೆ 1 ಕೋಟಿ ರೂಪಾಯಿ ಕೇಳಿದ್ದಾಳೆ ಈ ನಟಿ...!

ಇದನ್ನೂ ಓದಿ-ಎಲ್ಲರಂತೆ ನಿಮಗೂ ಗರ್ಲ್ ಫ್ರೆಂಡ್ ಇರಬೇಕು ಎಂಬ ಆಸೆಯೇ? ಈ ಲೇಖನ ನಿಮಗಾಗಿ

ಊರ್ವಶಿ ರೌತೇಲಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ!
ಕೇನ್ಸ್ ಫೆಸ್ಟಿವಲ್ 2023 ರಲ್ಲಿ ತನ್ನ ಫ್ಯಾಶನ್ ಅನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದ ಊರ್ವಶಿ ರೌತೇಲಾ ಇದೀಗ 1 ನಿಮಿಷಕ್ಕೆ 1 ಕೋಟಿ ರೂಪಾಯಿ ಶುಲ್ಕ ವಿಧಿಸುವ ಮೂಲಕ ಸುದ್ದಿಯಲ್ಲಿದ್ದಾಳೆ. ವರದಿಗಳ ಪ್ರಕಾರ, ಬೋಯಪತಿ ಶ್ರೀನು-ರಾಮ್ ಪೋತಿನೇನಿ ಅವರ ಮುಂಬರುವ ಚಿತ್ರದಲ್ಲಿ ಊರ್ವಶಿ ರೌಟೇಲಾ ಹಾಡಿಗೆ ಹೆಜ್ಜೆ ಹಾಕಲಿದ್ದಾಳೆ. ಈ ಡ್ಯಾನ್ಸ್ 3 ನಿಮಿಷದ್ದಾಗಿರಲಿದೆ ಎಂದು ಹೇಳಲಾಗುತ್ತಿದ್ದು, ಇದರಲ್ಲಿ ಪ್ರದರ್ಶನ ನೀಡಲು ಊರ್ವಶಿ ರೌತೇಲಾ 3 ಕೋಟಿ ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗಿದೆ. ಒಂದು ವೇಳೆ ಊರ್ವಶಿಗೆ ಈ ಸಂಭಾವನೆ ದೊರೆತರೆ, ಆಕೆ ಈ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗುತ್ತಾಳೆ. ಒಂದು ನಿಮಿಷದ ಅಭಿನಯಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಯಾವುದೇ ನಟಿಗೆ ನೀಡಲಾಗಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Tulsi For Hair Health: ಕೂದಲಿಗೆ ಒಂದು ವರದಾನವಿದ್ದಂತೆ ತುಳಸಿ, ಈ ರೀತಿ ಬಳಸಿ ದಟ್ಟವಾದ ಕೇಶರಾಶಿ ನಿಮ್ಮದಾಗಿಸಿ!

ಚಿರಂಜೀವಿ ಚಿತ್ರಕ್ಕೆ 2 ಕೋಟಿ ಬೇಡಿಕೆ!
ಮನರಂಜನಾ ಸುದ್ದಿಗಳ ಪ್ರಕಾರ, ದಕ್ಷಿಣ ಭಾರತದ ಮೆಗಾಸ್ಟಾರ್ ಚಿರಂಜೀವಿ ಅವರ ಚಿತ್ರ ವಾಲ್ಟೇರ್ ವೀರಯ್ಯನಲ್ಲಿ ನೃತ್ಯ ಪ್ರದರ್ಶನಕ್ಕಾಗಿ ನಟಿ ಊರ್ವಶಿ ರೌಟೇಲಾ ಶುಲ್ಕ 2 ಕೋಟಿ ರೂ. ಆಗಿತ್ತು. ಊರ್ವಶಿ ರೌತೇಲಾ ವೃತ್ತಿ ಜೀವನದ ಕುರಿತು ಹೇಳುವುದಾದರೆ, ನಟಿ 2013 ರಲ್ಲಿ ಮಿಸ್ ಯೂನಿವರ್ಸ್ ಆದ ಬಳಿಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಳು. ಊರ್ವಶಿ ರೌತೇಲಾ ಅವರು ಸಿಂಗ್ ಸಾಬ್ ದಿ ಗ್ರೇಟ್ ಚಿತ್ರದಲ್ಲಿ ಸನ್ನಿ ಡಿಯೋಲ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಳು. ಈ ಚಿತ್ರದ ನಂತರ, ಊರ್ವಶಿ ಸನಮ್ ರೇ, ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್ ಸ್ಟೋರಿ 4 ಮತ್ತು ಪಾಗಲ್ಪಂತಿಯಂತಹ ಚಿತ್ರಗಳಲ್ಲಿ ನಟಿಸಿದ್ದಾಳೆ. 2014 ರಲ್ಲಿ ಮಿಸ್ಟರ್ ಐರಾವತ ಚಿತ್ರದ ಮೂಲಕ ಊರ್ವಶಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾಳೆ. ನಂತರ ನಟಿ 2022 ರಲ್ಲಿ ತಮಿಳು ಚಿತ್ರಗಳಿಗೆ ಪದಾರ್ಪಣೆ ಮಾಡಿದ್ದಾಳೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News