ಬೆಂಗಳೂರು: ರಾಜ ರಾಣಿ ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿರೋ ವಿಭಿನ್ನ ಶೋ. ರಿಯಲ್ ಜೋಡಿಗಳ ರಿಯಾಲಿಟಿ ಶೋ ಬರೋಬ್ಬರಿ 12 ಜೋಡಿಗಳ ನೋವು-ನಲಿವುಗಳನ್ನ ಜನರ ಮುಂದೆ ಪ್ರಸ್ತುತಪಡಿಸಿದೆ.ಅದು ಸೆಲೆಬ್ರಿಟಿ ಕಪಲ್ ಆಗಿರಲಿ, ಇಲ್ಲ ಸಾಮಾನ್ಯ ಜೋಡಿಯೇ ಆಗಿರಲಿ.. ಎಲ್ಲರ ಸಂಸಾರದ ಸಾರ ಹೊಂದಾಣಿಕೆ ಎಂಬ ಸೂಕ್ಷ್ಮತೆಯನ್ನ ಮನರಂಜನೆಯ ಮೂಲಕ ಜನರಿಗೆ ತಿಳಿಸಿದ ಕಾರ್ಯಕ್ರಮ ರಾಜ ರಾಣಿ.


COMMERCIAL BREAK
SCROLL TO CONTINUE READING

ಟಾಕಿಂಗ್​ ಸ್ಟಾರ್​ ಸೃಜನ್​ ಹಾಗೂ ಹಿರಿಯ ನಟಿ ತಾರಮ್ಮ ಈ ದೊಡ್ಡ ಶೋನ ಜಡ್ಜ್‌ಗಳಾಗಿ ಕಾರ್ಯ ನಿರ್ವಹಿಸಿದ್ರು. ತಮಗೆ ನೀಡಿದ ಆ ದೊಡ್ಡ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ನ್ಯಾಯ ಒದಗಿಸಿದ್ದಾರೆ. ಜೋಡಿಯ ಸರಿ ತಪ್ಪುಗಳನ್ನು ತಿದ್ದುವುದು ಮಾತ್ರವಲ್ಲದೆ, ಅವರನ್ನು ನಗಿಸುತ್ತಿದ್ರು. ಅವರ ಕಷ್ಟಗಳನ್ನು ಕೇಳಿ ಭಾವುಕರಾಗಿದ್ರು ಹಾಗೂ ಕೆಲವೊಂದು ಸಂದರ್ಭಗಳಲ್ಲಿ ಜೋಡಿಗಳಿಗೆ ಬುದ್ಧಿವಾದ ಕೂಡ ಹೇಳಿದ್ದಾರೆ. ಈ ಕಾರ್ಯಕ್ರಮವನ್ನು ನಟಿ, ನಿರೂಪಕಿ ಅನುಪಮ ಗೌಡ ಅದ್ಭುತವಾಗಿ ಹೋಸ್ಟ್‌ ಮಾಡಿ ಪಟ ಪಟ ಮಾತುಗಳನ್ನಾಡುತ್ತಾ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. 


ಇದನ್ನೂ ಓದಿ : ಕಿಂಗ್ ಕೊಹ್ಲಿಗೆ ‘ಸ್ಪೇಷಲ್ ಥ್ಯಾಂಕ್ಸ್’ ಹೇಳಿದ ರಜತ್ ಪಾಟಿದಾರ್; ಏಕೆ ಗೊತ್ತಾ..?


ಇನ್ನು ರಾಜ ರಾಣಿ ಶೋ ಪ್ರೇಕ್ಷಕರಿಗೆ ಮನರಂಜನೆ ನೀಡುವುದು ಮಾತ್ರವಲ್ಲದೆ, ಈ ಶೋ ನೋಡಿ ಅದೆಷ್ಟೋ ಜನರ ಮನೆಯಲ್ಲಿ ಗಂಡ-ಹೆಂಡತಿಯ ನಡುವಿನ ಬಾಂಧವ್ಯ ಕೂಡ ಜಾಸ್ತಿಯಾಗಿದೆಯಂತೆ. ಪ್ರತಿ ವಾರವೂ ಈ ಶೋ ಪ್ರೇಕ್ಷಕರು ಜಾಚೂ ತಪ್ಪದೆ ವಿಕ್ಷಿಸುತ್ತಿದ್ದರು. ಜೋಡಿಗಳಿಗೆ ನೀಡುವ ಟಾಸ್ಕ್‌ ಸೂಪರ್‌ ಆಗಿದ್ವು. ಪ್ರತಿ ಟಾಸ್ಕ್‌ ಹಿಂದೆಯೂ ಫನ್‌ ಜೊತೆಗೆ ಒಂದೊಳ್ಳೆ  ಮೆಸೇಜ್‌ ಕೂಡ ಗಂಡನ ಕಷ್ಟಗಳು ಹಾಗೂ ಅವರ ಕೆಲಸಗಳು ಹೇಗಿರುತ್ತವೆ ಎಂಬುದರ ಮೇಲೆ ಹೆಂಡತಿಗೆ ಟಾಸ್ಕ್‌ ನೀಡಲಾಗುತ್ತಿತ್ತು. ಅದೇ ರೀತಿ ಹೆಂಡತಿ ಮನೆಯಲ್ಲಿ ಮಾಡವ ಕೆಲಸಗಳು ಎಷ್ಟು ಕಷ್ಟ ಎಂಬುವುದನ್ನು ಗಂಡಂದಿರಿಗೆ ಟಾಸ್ಕ್‌ ಮೂಲಕ ತಿಳಿಸುವ ಪ್ರಯತ್ನವನ್ನು ರಾಜ ರಾಣಿ ಟೀಮ್‌ ಮಾಡುತ್ತಿತ್ತು.IPL 2022 : ಕ್ವಾಲಿಫೈಯರ್-2 ಮ್ಯಾಚ್ ಮುನ್ನ ಅಪಕಾರಿ ಹೇಳಿಕೆ ನೀಡಿದ RCB ಕ್ಯಾಪ್ಟನ್


ಕಳೆದ ಬಾರಿಗಿಂತ ಈ ಬಾರಿ ಇನ್ನೂ ವಿಭಿನ್ನವಾಗಿ ಶೋ ಮೂಡಿ ಬರಲಿದೆಯಂತೆ. ಕಂಟೆಸ್ಟೆಂಟ್‌ಗಳ ವಿಚಾರಕ್ಕೆ ಬರೋದಾದ್ರೆ ಕುತೂಹಲವಂತು ಹೆಚ್ಚಿದೆ.ಈ ಜೋಡಿ ಬರಬಹುದು, ಆ ಜೋಡಿ ಬರಬಹುದು ಎಂಬ ಉಹಾಪೋಹ ಈಗಾಗಲೇ ಎಲ್ಲಡೆ ಸದ್ದು ಮಾಡ್ತಿದೆ.ಕಳೆದ ರಾಜ ರಾಣಿ ಶೋನಲ್ಲಿ ಆ್ಯಕ್ಟಿಂಗ್​ ಮಾತ್ರವಲ್ಲದೆ ವಿಭಿನ್ನ ಫೀಲ್ಡ್‌ಗಳಿಂದ ಬಂದವರು ಕೂಡ ಇದ್ರು.ಉದಾಹರಣೆಗೆ ಪವನ್​-ಸುಮನ್​ ಜೋಡಿ. ಪವನ್​ ಒಬ್ಬ ಸ್ಟಾಂಡಪ್​ ಕಾಮಿಡಿಯನ್​ ಹಾಗೂ ಸುಮನ್​ ಹೋಮ್‌ ಮೇಕರ್‌. ಸುಮನ್​ ಕನ್ನಡವನ್ನು ಅಲ್ಪಸ್ವಲ್ಪವೇ ಮಾತನಾಡುತ್ತಿದ್ರು.ತಮ್ಮ ಮುದ್ದು ಕನ್ನಡದಲ್ಲಿಯೇ ಪಂಚಿಂಗ್​ ಡೈಲಾಗ್​ ಹೊಡೆದು ರಂಜಿಸಿದ್ರು. ಹೀಗೆ ಈ ಬಾರಿ ಕೂಡ ಎಲ್ಲಾ ಫೀಲ್ಡ್‌ಗಳಿಂದ ಜೋಡಿಗಳ ಆಯ್ಕೆಯಾಗಬಹದು ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮನೆ ಮಾಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.